ಮುಂಬೈಯಲ್ಲಿ ಮುಗಿಯದ ಬೆಂಕಿ ಅವಘಡ: ತಾಯಿ-ಮಗಳು ಜೀವಂತ ದಹನ

ಮುಂಬೈ, ಫೆಬ್ರವರಿ 15: ಇಂದು ಬೆಳಗ್ಗಿನ ಜಾವ ಮುಂಬೈನ ಅಂಧೇರಿಯ ಮಿತ್ತಲ್ ಎಸ್ಟೇಟ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತನಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಬೆಂಕಿ ಅವಘಡಕ್ಕೆ ಮುಂಬೈ ಸಾಕ್ಷಿಯಾಗಿದೆ.

ಇಲ್ಲಿನ ಐರೋಲಿ ಸೆಕ್ಟರ್ -3 ರ ಕಾಸ್ಮೆಟಿಕ್ ಅಂಗಡಿಯೊಮದರಲ್ಲಿ ಸಂಭವಿಸಿದ ಬೆಮಕಿ ಅವಘಡಕ್ಕೆ ಓರ್ವ ಮಹಿಳೆ ಮತ್ತು ಆಕೆಯ ಮಗಳು ಬಲಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರಾದರೂ, ಸುಟ್ಟ ಗಾಯದಿಂದಾಗಿ ತಾಯಿ-ಮಗಳು ಅಸುನೀಗಿದ್ದಾರೆ.

ಮುಂಬೈಯಲ್ಲಿ ಡಿ.29 ರಂದು ನಡೆದ ಕಮಲ್ ಮಿಲ್ ಅಗ್ನಿ ದುರಂತದಲ್ಲಿ 14 ಜನ ಸಾವಿಗೀಡಾಗಿದ್ದರು. ನಂತರ ಮತ್ತೆ ಜ.4 ರಂದು ಇಲ್ಲಿನ ಮಾರೋಲ್ ನ ಮೈಮೂನ್ ಕಟ್ಟಡದಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ 4 ಜನ ಮೃತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+