ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ದುಬಾರಿ ನಗರಗಳ ಸಾಲಿನಲ್ಲಿ ಮುಂಬೈ

By Mahesh
|
Google Oneindia Kannada News

ಮುಂಬೈ, ಜೂ.18: ವಿಶ್ವದ ಅತ್ಯಂತ ದುಬಾರಿ ನಗರಗಳ ಸಾಲಿಗೆ ದೇಶದ ವಾಣಿಜ್ಯ ನಗರಿ ಮುಂಬೈ ಕೂಡಾ ಸೇರಿದೆ. ಡಲಾಸ್, ಫ್ರಾಂಕ್​ಫರ್ಟ್, ವ್ಯಾಂಕೋವರ್ ನಗರಗಳನ್ನೂ ಹಿಂದಿಕ್ಕಿ ಮುಂಬೈ ದುಬಾರಿ ನಗರ ಎನಿಸಿಕೊಂಡಿದೆ.
ಭಾರತದ ಅತಿ ದುಬಾರಿ ನಗರದಲ್ಲಿ ಮುಂಬೈ ಮೊದಲ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ದೆಹಲಿ ಇದೆ. ಚೆನ್ನೈ 3ನೇ ಸ್ಥಾನ, ಬೆಂಗಳೂರು 4ನೇ ಸ್ಥಾನ ಮತ್ತು ಕೋಲ್ಕತ್ತಾ 5ನೇ ಸ್ಥಾನ ಪಡೆದಿವೆ.

ವಿಶ್ವ ಮಟ್ಟದಲ್ಲಿ ಅಂಗೋಲಾದ ರಾಜಧಾನಿ ಲುಯಾಂಡ ಅತ್ಯಂತ ದುಬಾರಿ ನಗರವಾಗಿದೆ. ನಂತರದ ಸ್ಥಾನಗಳಲ್ಲಿ ಹಾಂಗ್ ಕಾಂಗ್ (2), ಜ್ಯೂರಿಚ್ (3), ಸಿಂಗಾಪುರ (4), ಜಿನೀವಾ (5) ಸ್ಥಾನ ಪಡೆದಿವೆ. ಮರ್ಸರ್ಸ್ ಅತ್ಯಂತ ದುಬಾರಿ ನಗರಗಳ ಸಮೀಕ್ಷೆಯಿಂದ ಈ ವಿಷಯ ತಿಳಿದು ಬಂದಿದೆ.

Mumbai continues to be most expensive city in India: survey

ಮುಂಬೈ 74ನೇ ಸ್ಥಾನ ಪಡೆದಿದ್ದು, ಡಲಾಸ್ (77), ಮ್ಯೂನಿಚ್ (87), ಲಕ್ಸಂಬರ್ಗ್ (94), ಫ್ರಾಂಕ್​ಫರ್ಟ್ (98) ಮತ್ತು ವ್ಯಾಂಕೋವರ್ (119)ಕ್ಕಿಂತ ದುಬಾರಿ ನಗರವಾಗಿ ಹೊರಹೊಮ್ಮಿದೆ.

ಈ ಸಮೀಕ್ಷೆಯಲ್ಲಿ ಒಟ್ಟು ಐದು ಖಂಡಗಳ 207 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನಗರದ ವಾತಾವರಣ, ಮನೆ, ಸಾರಿಗೆ, ಆಹಾರ, ಮನರಂಜನೆ,ಜವಳಿ ಹೀಗೆ ಅನೇಕ ವಿಷಯಗಳಲ್ಲಿ ತಗುಲುವ ವೆಚ್ಚಗಳನ್ನು ಪರಿಗಣಿಸಲಾಗಿದೆ.

ಅತಿ ದುಬಾರಿ ನಗರಗಳ ಪೈಕಿ ಏಷ್ಯಾ ಖಂಡದ ನಗರಗಳೇ ಹೆಚ್ಚಿನ ಸಂಖ್ಯೆಯಲ್ಲಿದೆ. ಬಿಷ್ಕೆಕ್ (207), ವಿಂಡ್ ಹೋಕ್(206) ಹಾಗೂ ಕರಾಚಿ (205) ಅತ್ಯಂತ ಕಡಿಮೆ ವೆಚ್ಚದಲ್ಲೂ ಬದುಕು ಸಾಗಿಸಬಹುದಾದ ನಗರಗಳೆನಿಸಿವೆ. (ಪಿಟಿಐ)

English summary
Mumbai, the financial capital of the country, held its position as the most expensive city in India and is ranked above Dallas, Frankfurt and Vancouver, according to a recent survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X