ಏ.9-10 ರಂದು ಸ್ಥಗಿತಗೊಳ್ಳಲಿದೆ ಮುಂಬೈ ಏರ್ಪೋರ್ಟ್
ಮುಂಬೈ, ಫೆಬ್ರವರಿ 17: ಮಳೆಗಾಲದ ಪೂರ್ವ ನಿರ್ವಹಣಾ ಕಾರ್ಯದ ನಿಮಿತ್ತ ಏಪ್ರಿಲ್ 9 ಮತ್ತು 10 ರಂದು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 9 ಮತ್ತು 10 ರಂದು ಆರು ಗಂಟೆಗಳ ಕಾಳ ವಿಮಾನ ನಿಲ್ದಾಣ ಕಾರ್ಯ ಸ್ಥಗಿತಗೊಳ್ಳಲಿದ್ದು ಪ್ರಯಾಣಿಕರು ಗಮನಿಸುವಂತೆ ಕೋರಲಾಗಿದೆ.

ಈ ಕುರಿತು ತನ್ನ ಗ್ರಾಹಕರಿಗೆ, ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆ ಮಾಹಿತಿ ನೀಡಲಿದೆ. ಮುಂಬೈಗೆ ಆ ಸಮಯದಲ್ಲಿ ತೆರಳಲು ಯೋಜನೆ ಹಾಕಿಕೊಂಡವರು ತಮ್ಮ ಪ್ರಯಾಣವನ್ನು ಮುಂದೂಡುವುದು ಒಳಿತು.












Click it and Unblock the Notifications