ದಾದರ್ ಪೊಲೀಸ್ ಠಾಣೆ ಬಳಿ ಅಗ್ನಿ ಆಕಸ್ಮಿಕ, ಯುವತಿ ಸಾವು
ಮುಂಬೈ, ಮೇ 12: ಇಲ್ಲಿನ ದಾದರ್ ಪೊಲೀಸ್ ಠಾಣೆ ಆವರಣದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಶ್ರಾವಣಿ ಚವಾಣ್ ಎಂಬ ಯುವತಿಯೊಬ್ಬಳು ಮೃತಪಟ್ಟ ದುರ್ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ 1.40ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕದಳಕ್ಕೆ ಕರೆ ಬಂದಿದೆ. ನಾಲ್ಕು ಅಗ್ನಿ ಶಾಮಕದಳ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.

ಗೋಖಲೆ ರಸ್ತೆಯಲ್ಲಿರುವ ಮೂರು ಅಂತಸ್ತಿನ ವಸತಿ ಕಟ್ಟಡಕ್ಕೂ ಬೆಂಕಿ ವ್ಯಾಪಿಸಿದೆ. ಒಂದು ಕೊಠಡಿಯಲ್ಲಿ ಒಬ್ಬ ವ್ಯಕ್ತಿ ಸಿಲುಕಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಎಲೆಕ್ಟ್ರಿಕ್ ವೈರಿಂಗ್ ನಿಂದ ಬೆಂಕಿ ವ್ಯಾಪಿಸಿದೆ ಎಂದು ತಿಳಿದು ಬಂದಿದೆ.
Dadar chowki traffic fire pic.twitter.com/LSeZcvlcv6
— Taufiq Khan (@TaufiqK63364175) May 12, 2019
ಡಿಸೆಂಬರ್ 2017ರಲ್ಲಿ ಮುಂಬೈನ ಲೋಯರ್ ಪರೇಲ್ ನಲ್ಲಿ ನಡೆದ ಅಗ್ನಿ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದರು. 2019ರ ಮೇ 05ರಂದು ಯಾರಿ ರಸ್ತೆ ಕಟ್ಟಡದ ಅಗ್ನಿ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದರು.












Click it and Unblock the Notifications