ಮೋದಿ ಭಾಷಣ ಕೇಳಲು ಬಂದ ಮುಖೇಶ್ ಅಂಬಾನಿ ಪುತ್ರ
ಮುಂಬೈ, ಏಪ್ರಿಲ್ 26: ಬಿಜೆಪಿ ಮತ್ತು ಶಿವಸೇನೆ ಜಂಟಿಯಾಗಿ ಮುಂಬೈನಲ್ಲಿ ಇಂದು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಕಾಣಿಸಿಕೊಂಡಿದ್ದಾರೆ.
ನಿನ್ನೆಯಷ್ಟೆ ಮುಖೇಶ್ ಅಂಬಾನಿ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಮಿಲಿಂದ್ ದಿಯೋರಾ ಅವರಿಗೆ ಬೆಂಬಲ ಸೂಚಿಸಿದ್ದರು, ಇಂದು ಅವರ ಪುತ್ರ ಬಿಜೆಪಿ ಸಮಾವೇಶದಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಅನಂತ್ ಅಂಬಾನಿ ಅವರು ಸಮಾವೇಶದಲ್ಲಿ ಗಣ್ಯರ ಸಾಲಿನಲ್ಲಿ ಕೂತು ಮೋದಿ ಅವರ ಭಾಷಣ ಆಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತ್ ಅಂಬಾನಿ, ನಾನು ದೇಶವನ್ನು ಬೆಂಬಲಿಸಲು ಮತ್ತು ಪ್ರಧಾನಿ ಅವರ ಭಾಷಣ ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.

ಏಪ್ರಿಲ್ 18 ರಂದು ಕಾಂಗ್ರೆಸ್‌ನ ಮಿಲಿಂದ್ ದೊರೆನ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು, ವಿಡಿಯೋದಲ್ಲಿ ಮಾತನಾಡಿದ್ದ ಮುಖೇಶ್ ಅಂಬಾನಿ ದಕ್ಷಿಣ ಮುಂಬೈಗೆ ಮಿಲಿಂದ್ ಉತ್ತಮ ಅಭ್ಯರ್ಥಿ, ಅವರು ಇಲ್ಲಿನ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಾರೆ ಎಂದಿದ್ದರು.
ನರೇಂದ್ರ ಮೋದಿ ಅವರು ಮುಖೇಶ್ ಅಂಬಾನಿ ಕುಟುಂಬಕ್ಕೆ ಆಪ್ತ ಸ್ನೇಹಿತರಾಗಿದ್ದಾರೆ. ಹಾಗಾಗಿಯೇ ಅನಂತ್ ಅವರು ಇಂದು ಮೋದಿ ಅವರ ಸಮಾವೇಶಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications