ಸ್ಫೋಟಕ ತುಂಬಿದ್ದ ವಾಹನಕ್ಕೆ ಸ್ವತಃ ಬೆಂಗಾವಲಾಗಿ ತೆರಳಿದ್ದ ಪೊಲೀಸ್ ಅಧಿಕಾರಿ

ಮುಂಬೈ, ಮಾರ್ಚ್ 17: ಮುಕೇಶ್ ಅಂಬಾನಿ ನಿವಾಸದ ಮುಂದೆ ಫೆ. 25ರಂದು ಪತ್ತೆಯಾದ ಸ್ಫೋಟಕ ತುಂಬಿದ ಎಸ್‌ಯುವಿ ವಾಹನಕ್ಕೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸ್ವತಃ ಬೆಂಗಾವಲಾಗಿ ಹೋಗಿದ್ದರು ಎಂದು ಎನ್‌ಐಎ ಹೇಳಿದೆ.

ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ವಾಹನ ಮುಕೇಶ್ ಅಂಬಾನಿ ಅವರ ಮನೆ ಮುಂದೆ ನಿಂತಾಗ ಬಿಳಿ ಬಣ್ಣದ ಇನ್ನೋವಾ ವಾಹನ ಸ್ವಲ್ಪ ದೂರದಲ್ಲಿ ನಿಂತಿದ್ದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿತ್ತು. ಬಳಿಕ ಅದು ಮುಂಬೈ ಪೊಲೀಸರ ಸಿಐಯು ಘಟಕಕ್ಕೆ ಸೇರಿದ ವಾಹನ ಎನ್ನುವುದು ಗೊತ್ತಾಗಿತ್ತು. ಸಿಐಯು ಘಟಕಕ್ಕೆ ಸಚಿನ್ ವಾಜೆ ಮುಖ್ಯಸ್ಥರಾಗಿದ್ದು, ಈ ಕಾರನ್ನು ಪೊಲೀಸ್ ಕೇಂದ್ರ ಕಚೇರಿಯಿಂದ ಎನ್‌ಐಎ ವಶಪಡಿಸಿಕೊಂಡಿತ್ತು.

ಸ್ಕಾರ್ಪಿಯೋ ಕಾರ್‌ಗೆ ಬೆಂಗಾವಲಾಗಿ ತೆರಳಿದ್ದ ಇನ್ನೋವಾ ಕಾರನ್ನು ಸ್ವತಃ ಸಚಿನ್ ವಾಜೆ ಚಾಲನೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಭಾನುವಾರ ಕೋರ್ಟ್‌ಗೆ ಸಲ್ಲಿಸಿದ್ದ ರಿಮ್ಯಾಂಡ್ ವರದಿಯಲ್ಲಿ ಎನ್‌ಐಎ ಹೇಳಿದೆ.

ಕಾರಿನಲ್ಲಿದ್ದ ವ್ಯಕ್ತಿ ಸಚಿನ್ ವಾಜೆ

ಕಾರಿನಲ್ಲಿದ್ದ ವ್ಯಕ್ತಿ ಸಚಿನ್ ವಾಜೆ

ಸ್ಕಾರ್ಪಿಯೋ ಕಾರು ಅಂಬಾನಿ ನಿವಾಸದ ಮುಂದೆ ನಿಲ್ಲಿಸಿದ ಕೆಲವು ಗಂಟೆಗಳ ಬಳಿಕ ಉದ್ದನೆಯ ಕುರ್ತ ಧರಿಸಿ ಮುಖವನ್ನು ಮುಚ್ಚಿಕೊಂಡಿದ್ದ ವ್ಯಕ್ತಿ ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ. ಅದು ಸಚಿನ್ ವಾಜೆ ಎಂದು ಎನ್ಐಎ ತನಿಖೆ ಹೇಳಿದೆ.

ಕಾರಿನಲ್ಲಿ ಹಣ, ಸೀಮೆ ಎಣ್ಣೆ ಪತ್ತೆ

ಕಾರಿನಲ್ಲಿ ಹಣ, ಸೀಮೆ ಎಣ್ಣೆ ಪತ್ತೆ

ವಾಜೆ ಬಳಸುತ್ತಿದ್ದ ಕಪ್ಪು ಮರ್ಸಿಡಿಸ್ ಕಾರ್‌ ಹಾಗೂ ಸ್ಕಾರ್ಪಿಯೋಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎನ್ನುವುದು ತನಿಖಾಧಿಕಾರಿಗಳಿಗೆ ಗೊತ್ತಾಗಿದೆ ಎಂದು ಎನ್‌ಐಎ ಐಜಿ ಅನಿಲ್ ಶುಕ್ಲಾ ತಿಳಿಸಿದ್ದಾರೆ. ದಕ್ಷಿಣ ಮುಂಬೈನ ಪಾರ್ಕಿಂಕ್ ಸ್ಥಳವೊಂದರಿಂದ ಮಂಗಳವಾರ ಮರ್ಸಿಡಿಸ್ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಬಟ್ಟೆಗಳು, ಐದು ಲಕ್ಷ ರೂ ನಗದು, ನಗದು ಎಣಿಕೆ ಯಂತ್ರ ಮತ್ತು ಸೀಮೆ ಎಣ್ಣೆ ದೊರಕಿದೆ.

ಚಾಲಕ ಹೇಳಿದ್ದೇನು?

ಚಾಲಕ ಹೇಳಿದ್ದೇನು?

ಫೆಬ್ರವರಿ 24ರಂದು ತಮ್ಮ ಕೆಲಸ ಮುಗಿದ ಬಳಿಕ ಇನ್ನೋವಾ ಕಾರನ್ನು ಪೊಲೀಸ್ ಕೇಂದ್ರ ಕಚೇರಿಯೊಳಗೆ ಪಾರ್ಕ್ ಮಾಡಿ ಮನೆಗೆ ತೆರಳಿದ್ದಾಗಿ ಆ ವಾಹನದ ಅಧಿಕೃತ ಕಾರ್ ಚಾಲಕ ಎನ್‌ಐಎಗೆ ಮಾಹಿತಿ ನೀಡಿದ್ದಾರೆ. ವಾಜೆ ವಾಸಿಸುತ್ತಿರುವ ಥಾಣೆಗೆ ಆ ಕಾರನ್ನು ಯಾರು ಚಲಾಯಿಸಿಕೊಂಡು ತಂದಿದ್ದರು ಎನ್ನುವುದು ಸ್ಪಷ್ಟವಾಗಿಲ್ಲ. ಸ್ಕಾರ್ಪಿಯೋ ಕಾರನ್ನು ಕಾನ್‌ಸ್ಟೆಬಲ್ ಒಬ್ಬಾತ ಚಾಲನೆ ಮಾಡಿದ್ದ ಎಂದು ಎನ್‌ಐಎ ಶಂಕಿಸಿದೆ.

ಮಹತ್ವದ ದಾಖಲೆಗಳ ವಶ

ಮಹತ್ವದ ದಾಖಲೆಗಳ ವಶ

ವಾಜೆ ತಾವು ಕೆಲಸ ಮಾಡುತ್ತಿದ್ದ ಪೊಲೀಸ್ ಆಯುಕ್ತರ ಕಚೇರಿಗೆ ಓಡಾಡಲು ಕಪ್ಪು ಮರ್ಸಿಡಿಸ್ ಬಳಸುತ್ತಿದ್ದರು. ಈ ಕಾರು ಮನೀಶಾ ಭಾವ್ಸರ್ ಎಂಬುವವರ ಹೆಸರಲ್ಲಿ ನೋಂದಣಿಯಾಗಿತ್ತು. ಇದಕ್ಕೆ ಕೂಡ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಸೋಮವಾರ ರಾತ್ರಿ ವಾಜೆಯ ಸಿಐಯು ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದ ಎನ್‌ಐಎ, ಸಿಪಿಯು, ಐ-ಪ್ಯಾಡ್ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+