ಅಧಿಕಾರಿ ಮೇಲೆ ಮೀನು ಎಸೆದಿದ್ದ ಕಾಂಗ್ರೆಸ್ ಶಾಸಕನ ಬಂಧನ
ಮುಂಬೈ, ಜುಲೈ 11: ಪೊಲೀಸ್ ಅಧಿಕಾರಿಯ ಮೇಲೆ ಮೀನು ಎಸೆದಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ನಿತೇಶ್ ರಾಣೆಯನ್ನು ಬಂಧಿಸಲಾಗಿದೆ. ಸಿಂಧದುರ್ಗ ಜಿಲ್ಲೆಯಲ್ಲಿ ರಾಣೆಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಂಕೌಲಿ ಶಾಸಕ ರಾಣೆ ಜತೆಗೆ 23 ಜನರನ್ನು ಬಂಧಿಸಲಾಗಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ. ಸರಕಾರಿ ಅಧಿಕಾರಿಯ ಮೇಲೆ ಕರ್ತವ್ಯಕ್ಕೆ ಅಡ್ಡಪಡಿಸಿದ ಹಾಗೂ ಇತರ ಹಲವು ಪ್ರಕರಣಗಳನ್ನು ಅವರ ಮೇಲೆ ದಾಖಲಿಸಲಾಗಿದೆ.

ಜುಲೈ 6 ರಂದು ಮೀನುಗಾರಿಕಾ ಆಯುಕ್ತರ ಬಳಿ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ತೆರಳಿದ್ದ ರಾಣೆ ಸಿಟ್ಟಿನಲ್ಲಿ ಅಧಿಕಾರಿಯ ಮೇಲೆ ಮೀನು ಎಸೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Degeneration of #IndianPolitics. Shame on #NiteshRane for abusing a govt officer. Waiting for the day when the officers will hit back. pic.twitter.com/EhIxyUchiC
— Ashoke Pandit (@ashokepandit) July 7, 2017
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೆ ಹಾಗೂ 23 ಜನರನ್ನು ಬಂಧಿಸಲಾಗಿದೆ.












Click it and Unblock the Notifications