ಮುಂಬೈನಲ್ಲಿ 16ರ ಬಾಲೆಯ ಮೇಲೆ ಗ್ಯಾಂಗ್ ರೇಪ್
ಮುಂಬೈ, ನ.4: ಆಕೆ ಅವರೆಲ್ಲರನ್ನು ಗೆಳೆಯರು ಎಂದು ನಂಬಿದ್ದಳು ಆದರೆ, ಅವರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಿಟ್ಟರು. 16ರ ಹರೆಯದ ಹುಡುಗಿ ಮೇಲೆ ಗೊರೆಗಾಂವ್ ನಲ್ಲಿ ಅತ್ಯಾಚಾರ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
3 ದಿನಗಳ ಹಿಂದೆ ಗೋರೇಗಾಂವ್ ಬಳಿ ಈ ಘಟನೆ ನಡೆದಿದ್ದರೂ ಇದೀಗಷ್ಟೇ ಬಾಲಕಿ ತನಗಾದ ಅನ್ಯಾಯವನ್ನ ಬಹಿರಂಗಪಡಿಸಿದ್ದಾಳೆ. ಆಕೆಯನ್ನ ರೇಪ್ ಮಾಡಿದವರೆಲ್ಲರೂ ಆಕೆಯ ಪರಿಚಿತ ಎಂಬುದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಆರೋಪಿಗಳು ಬಾಲಕಿಯನ್ನು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಇಬ್ಬರು ಪರಿಚಿತರು ಆಹ್ವಾನಿಸಿದ್ದಾರೆ. ಮನೆಗೆ ಬಂದ ಬಾಲಕಿಗೆ ಬಲವಂತವಾಗಿ ಮದ್ಯಸೇವನೆ ಮಾಡಿಸಿದ್ದಾರೆ. ಬಳಿಕ ಆಕೆಯನ್ನ ಮನೆಗೆ ಬಿಟ್ಟುಬರುವುದಾಗಿ ಹೇಳಿ ಕಾರಿನಲ್ಲಿ ಗೊರೆಗಾಂವ್ ನ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನಾಲ್ವರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಘಟನೆ ನಡೆದು ಎರಡು ದಿನಗಳಾದರೂ ಬಾಲಕಿ ಅವಮಾನವಾಗುವ ಭಯದಿಂದ ಈ ಬಗ್ಗೆ ತನ್ನ ಮನೆಯವರಿಗೆ ತಿಳಿಸಿರಲಿಲ್ಲ. ನಂತರ ಬಾಲಕಿಯ ಅಜ್ಜಿಗೆ ಅನುಮಾನ ಬಂದು ವಿಚಾರಿಸಿದಾಗ ಹುಡುಗಿ ತನ್ನ ಮೇಲೆ ದೌರ್ಜನ್ಯವನ್ನು ವಿವರಿಸಿದ್ದಾಳೆ.
ವಿಷಯ ತಿಳಿದ ಮೇಲೆ ಹುಡುಗಿಯ ಅಣ್ಣ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 20-25 ವರ್ಷವಿರುವ ಎಲ್ಲಾ ಆರು ಆರೋಪಿಗಳೂ ತಲೆತಪ್ಪಿಸಿಕೊಂಡಿದ್ದಾರೆ. ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಗಾಗಿ ಪೊಲೀಸರು ಕಾದಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications