ಮುಂಬೈ: ಮೆಡಿಕಲ್ ಸ್ಟೋರಿಗೆ ಬೆಂಕಿ, 8 ಮಂದಿ ಸಜೀವ ದಹನ

Posted By:
Subscribe to Oneindia Kannada

ಮುಂಬೈ, ಜೂನ್ 30: ಇಲ್ಲಿನ ಪಶ್ಚಿಮ ಅಂಧೇರಿ ಪ್ರದೇಶದಲ್ಲಿರುವ ಮೆಡಿಕಲ್ ಸ್ಟೋರ್ ವೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ 8 ಮಂದಿ ಸಜೀವ ದಹನವಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.

ಜುಹು ಗಲ್ಲಿಯಲ್ಲಿರುವ ವಾಫಾ ಮೆಡಿಕಲ್ ಶಾಪ್ ನಲ್ಲಿ ಗುರುವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ​ನಿಂದ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.

8 killed in Mumbai pharmacy blaze

ವೈರ್ ಲೆಸ್ ರಸ್ತೆಯಲ್ಲಿರುವ ಈ ಔಷಧಿ ಮಳಿಗೆ ನೆಲ ಮಾಳಿಗೆಯಲ್ಲಿದೆ. ಮೊದಲನೇ ಹಾಗೂ ಎರಡನೇ ಮಹಡಿಯಲ್ಲೂ ಒಂದೆರಡು ಕುಟುಂಬಗಳು ವಾಸಿಸುತ್ತಿವೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ.

ಮೃತಪಟ್ಟವರನ್ನು ಸಬುರಿಯಾ ಮೊಜಿನ್ ಖಾನ್ (52), ಸಿದ್ದಿಕ್ ಖಾನ್ (35), ರಾಬಿಲ್ ಖಾನ್ (28), ಮೊಜೆಲ್ ಖಾನ್ (8), ಉನ್ನಿಹಾಯ್ ಖಾನ್ (5), ಅಲಿಜಾ ಖಾನ್ (4), ತುಬ್ಬಾ ಖಾನ್ (8), ಅಲ್ತಾ ಖಾನ್ (3 ತಿಂಗಳು) ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At least eight people were killed and one seriously injured after a fire broke out around 6 am at Wafa Medical Store at Juhu Galli in Andheri West, Mumbai on Thursday(June 30).
Please Wait while comments are loading...