Get Updates
Get notified of breaking news, exclusive insights, and must-see stories!

ಆದಿತ್ಯ ಠಾಕ್ರೆ ಭೇಟಿಯಾದ ದೀದಿ: ಜೈ ಮರಾಠ, ಜೈ ಬಾಂಗ್ಲಾ ಘೋಷಣೆ

ಮುಂಬೈ, ಡಿಸೆಂಬರ್ 01: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯವರನ್ನು ಭೇಟಿಯಾಗಿದ್ದಾರೆ.

ಸಂದರ್ಭದಲ್ಲಿ ಜೈ ಮರಾಠ, ಜೈ ಬಾಂಗ್ಲಾ ಘೋಷಣೆ ಕೂಗಲಾಯಿತು. ಇಂದು ಅವರ ಭೇಟಿಯ ಕೊನೆಯ ದಿನವಾಗಿದೆ.

ಮಮತಾ ಬ್ಯಾನರ್ಜಿ ಅವರು ತಮ್ಮ ಮುಂಬೈ ಪ್ರವಾಸದ ಮೊದಲ ದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಬೇಕಿತ್ತು, ಆದರೆ ಠಾಕ್ರೆ ಅವರ ಅನಾರೋಗ್ಯದ ಕಾರಣ ಈ ಸಭೆ ನಡೆಯಲು ಸಾಧ್ಯವಾಗಲಿಲ್ಲ.

Mamata Banerjee Meets Shiv Sena Leaders Aaditya Thackeray, Sanjay Raut

ಹೀಗಾಗಿ ಮಮತಾ ಬ್ಯಾನರ್ಜಿ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಆದಿತ್ಯ ಠಾಕ್ರೆ 2-3 ವರ್ಷಗಳ ಹಿಂದೆಯೂ ಅವರು ಮುಂಬೈಗೆ ಬಂದಾಗ ಭೇಟಿಯಾಗಿದ್ದಾಗಿ ಹೇಳಿದ್ದರು. ಮಮತಾ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಎಐಟಿಸಿ ಮಾಧ್ಯಮ ತಂಡದ ಬಿಡುಗಡೆಯ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮನೆಗೆ ಭೇಟಿ ನೀಡಲಿದ್ದಾರೆ ಮತ್ತು ಅವರನ್ನು ಭೇಟಿಯಾಗಲಿದ್ದಾರೆ.

ಇದಕ್ಕೂ ಮುನ್ನ ಅವರು ನಾರಿಮನ್ ಪಾಯಿಂಟ್‌ನಲ್ಲಿರುವ ವೈಬಿ ಚವಾನ್ ಸೆಂಟರ್, ನಾರಿಮನ್ ಪಾಯಿಂಟ್‌ನಲ್ಲಿ ನಾಗರೀಕರು ಮತ್ತು ಸಮಾಜದ ಸದಸ್ಯರನ್ನು ಭೇಟಿಯಾಗಲಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಮುಂಬೈ ಭೇಟಿ ಬಗ್ಗೆ ಬಿಜೆಪಿಯಲ್ಲಿ ವಿಶೇಷ ಪರಿಣಾಮ ಇಲ್ಲ, ಆದರೆ ಕಾಂಗ್ರೆಸ್‌ನಲ್ಲಿ ಆತಂಕವಿದೆ. ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಂದೇ ಬ್ಯಾನರ್ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರು ಕಾಂಗ್ರೆಸ್ ಅನ್ನು ಅದರಿಂದ ದೂರವಿಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಗರಿಷ್ಠ ನಾಯಕರು ಟಿಎಂಸಿಗೆ ಬಂದಿದ್ದಾರೆ. ಮಮತಾ ಅವರ ಕಾಂಗ್ರೆಸ್-ಮುಕ್ತ ಅಜೆಂಡಾದಿಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಖುಷಿಯಾಗಿಲ್ಲ.

ಸುಬ್ರಮಣಿಯನ್ ಸ್ವಾಮಿ ವಿವಿಧ ವಿಷಯಗಳಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ. ದೇಶದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಅವರು ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ ದಿನವೂ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಭಾರೀ ಮುಜುಗರ ಹಾಗೂ ಸಂಕಷ್ಟ ಎದುರಾಗಿದೆ.

ಹೀಗಿರುವಾಗ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೃತೀಯ ರಂಗ ರಚಿಸಬಹುದಾ ಎಂಬ ಆತಂಕ ಶುರುವಾಗಿದೆ. ಮಂಗಳವಾರ, ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಪಕ್ಷಕ್ಕೂ ತನ್ನ ನೆಲೆಯನ್ನು ಹೆಚ್ಚಿಸುವ ಎಲ್ಲ ಹಕ್ಕುಗಳಿವೆ, ಆದರೆ ಕಾಂಗ್ರೆಸ್ ಅನ್ನು ಹೊರಗಿಟ್ಟು ಬಿಜೆಪಿಯ ವಿರೋಧಿಗಳನ್ನು ಒಗ್ಗೂಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಚಾರವನ್ನು ಪವಾರ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದೂ ಮಲಿಕ್ ಹೇಳಿದ್ದಾರೆ.

ಸ್ವಾಮಿ ಅವರು ಮಮತಾ ಅವರನ್ನು ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಚಂದ್ರಶೇಖರ್ ಮತ್ತು ರಾಜೀವ್ ಗಾಂಧಿಯಂತಹ ನಾಯಕರಿಗೆ ಹೋಲಿಸಿದ್ದಾರೆ.
ಈ ಮೊದಲು ಮಮತಾ ಬ್ಯಾನರ್ಜಿ ದೆಹಲಿಯಲ್ಲಿದ್ದರು.

ಈ ವೇಳೆ ಅವರು ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ಸಭೆ ನಡೆಸಿದ್ದಾರೆ. ಇದಾದ ನಂತರ ಸ್ವಾಮಿ ಹಲವು ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.

Recommended Video

      13 ರಾಷ್ಟ್ರಗಳಿಗೆ ಒಮಿಕ್ರಾನ್ ಲಗ್ಗೆ ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+