70 ವರ್ಷ ಕಾಂಗ್ರೆಸ್ ಆಳಿದ್ದಕ್ಕೇ ಮೋದಿ ಪ್ರಧಾನಿಯಾಗಿದ್ದು: ಖರ್ಗೆ
Recommended Video

ಮುಂಬೈ, ಜುಲೈ 09: '70 ವರ್ಷಗಳ ಕಾಲ ಆಳಿ, ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಉಳಿಸಿದ್ದರಿಂದಲೇ ಒಬ್ಬ ಚಹ ಮಾರುವವರು ಪ್ರಧಾನಿಯಾಗಿದ್ದು' ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿಯವರಿಗೆ ಮಾತಿನ ಛಾಟಿ ಏಟು ನೀಡಿದ್ದಾರೆ.
ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಖರ್ಗೆ, "ಹೋದಲ್ಲೆಲ್ಲ ಪ್ರಧಾನಿ ಮೋದಿ, 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ, ನಾವು 70 ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಕಾಪಾಡಿದ್ದರಿಂದಲೇ ಇಂದು ಒಬ್ಬ ಚಹ ಮಾರುವವನು ಪ್ರಧಾನಿಯಾಗಿದ್ದು" ಎಂದು ಅವರು ಹೇಳಿದರು.
'ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕಿ, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ಹೇರಿದ್ದ 'ತುರ್ತುಪರಿಸ್ಥಿತಿ'ಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಕಳೆದ ನಾಲ್ಕು ವರ್ಷದಿಂದ ಪಾಲಿಸುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿಯ ಬಗ್ಗೆ ಏನಂತಾರೆ? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಯೋಜನೆಗಳು ವಿಫಲವಾಗುತ್ತಿವೆ. ರೈರಿಗೆ ಹೊಸ ಸಾಲ ಸಿಕ್ಕುತ್ತಿಲ್ಲ. ಮಾರಿಕಟ್ಟೆ ನಿಧಾನಗತಿಯಲ್ಲಿ ಸಾಗುತ್ತಿದೆ' ಎಂದು ಮೋದಿ ಸರ್ಕಾರದ ವೈಫಲ್ಯವನ್ನು ಖರ್ಗೆ ಬೆರಳುಮಾಡಿ ತೋರಿಸಿದರು.

ಇದಕ್ಕೂ ಮುನ್ನ ತುರ್ತು ಪರಿಸ್ಥಿತಿಗೆ 43 ವರ್ಷ ಸಂದ ನೆನಪಿನ ಕುರಿತು ಮಾತನಾಡುತ್ತಿದ್ದ ಮೋದಿ, 'ಒಂದು ಕುಟುಂಬದ ದುರಾಸೆಗಾಗಿ ಇಡೀ ದೇಶವೇ ಜೈಲಾಗಬೇಕಾಯ್ತು. ಪ್ರಜಾಪ್ರಭುತ್ವದ ಬಲಿದಾನವಾಯ್ತು' ಎಂದು ಟೀಕಿಸಿದ್ದರು.












Click it and Unblock the Notifications