ಭೀಮಾ ಕೊರೆಗಾಂವ್ ದಲಿತರ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ, ಜನವರಿ 2: ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆ ವೇಳೆ ನಡೆದ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಹಿನ್ನಲೆಯಲ್ಲಿ ಇಂದು ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಇವು ದಲಿತರ ಪ್ರತಿರೋಧದ ಸಂಕೇತ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಆರ್ ಎಸ್ಎಸ್ / ಬಿಜೆಪಿಯ ಫ್ಯಾಸಿಸ್ಟ್ ದೃಷ್ಟಿಕೋನದ ಪ್ರಮುಖ ಅಂಶವೆಂದರೆ ದಲಿತರು ಯಾವತ್ತೂ ಭಾರತೀಯ ಸಮಾಜದ ಕೆಳಭಾಗದಲ್ಲಿ ಇರಬೇಕು. ಉನಾ, ರೋಹಿತ್ ವೆಮುಲಾ ಮತ್ತು ಈಗ ಭೀಮಾ-ಕೊರೆಗಾಂವ್ಗಳು ದಲಿತರ ಪ್ರತಿರೋಧದ ಪ್ರಬಲ ಸಂಕೇತಗಳಾಗಿವೆ," ಎಂದು ಹೇಳಿದ್ದಾರೆ.

Maharashtra violence: Bhima-Koregaon is symbol of dalit resistance: Rahul Gandhi

ಇನ್ನು ಭೀಮ ಕೊರೆಗಾಂವ್ ಸಂಘರ್ಷಕ್ಕೆ ಜೆ.ಎನ್.ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಗುಜರಾತ್ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಪರೋಕ್ಷ ಕಾರಣವೆಂಬ ವಾದಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಉಭಯ ನಾಯಕರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಭೀಮ ಕೊರೆಗಾವ್ ಕದನದ 200ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್, ಜಿಗ್ನೇಶ್ ಮೇವಾನಿ, ಬಿ.ಆರ್. ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ರಾಧಿಕಾ ವೆಮುಲಾ ಪಾಲ್ಗೊಂಡಿದ್ದರು. ಇದರ ಮರುದಿನ ಪುಣೆಯಲ್ಲಿ ಹಿಂಸಾಚಾರಕ್ಕೆ ಓರ್ವ ಬಲಿಯಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+