• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ 5 ಲಕ್ಷ ಗಡಿ ದಾಟಿದ ಕೊರೊನಾ ಕೇಸ್

|

ಮುಂಬೈ, ಆಗಸ್ಟ್ 8: ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 12,822 ಜನರಿಗೆ ಕೊರೊನಾ ವೈರಸ್ ತಗುಲಿದೆ. ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷ ಗಡಿ ದಾಟಿದೆ.

   Team Indiaದ ಕಿಟ್ ಪ್ರಾಯೋಜಕತ್ವವನ್ನು ಖರೀದಿಸಲಿದೆಯೇ Puma | Oneindia Kannada

   ದೇಶದಲ್ಲಿ ಅತಿ ಹೆಚ್ಚು ಕೊವಿಡ್ ಕೇಸ್‌ಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5,03,084ಕ್ಕೆ ಏರಿಕೆಯಾಗಿದೆ.

   ಶನಿವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 20,88,612ಕ್ಕೆ ಏರಿದೆ. ಇದರಲ್ಲಿ ಮಹಾರಾಷ್ಟ್ರ ಒಂದರಲ್ಲಿ 5 ಕೇಸ್ ದಾಖಲಾಗಿದೆ.

   ಆಂಧ್ರ ಪ್ರದೇಶದಲ್ಲಿಂದು 10,080 ಮಂದಿಗೆ ಕೊರೊನಾ ವೈರಸ್ ದೃಢ

   ಮಹಾರಾಷ್ಟ್ರ ನಂತರ ತಮಿಳುನಾಡು (2,85,024), ಆಂಧ್ರ ಪ್ರದೇಶ (217040), ಕರ್ನಾಟಕ (1,64,924) ಹಾಗೂ ದೆಹಲಿಯಲ್ಲಿ (1,44,127) ಹೆಚ್ಚು ಸೋಂಕು ಹೊಂದಿದೆ.

   ಮಹಾರಾಷ್ಟ್ರದಲ್ಲಿ ಜಿಲ್ಲೆವಾರು ನೋಡಿದ್ರೆ, ಮುಂಬೈನಲ್ಲಿ ಅತಿ ಹೆಚ್ಚು ಕೇಸ್ ವರದಿಯಾಗಿದೆ. ಮುಂಬೈನಲ್ಲಿ 1,21,012, ಪುಣೆಯಲ್ಲಿ 1,07,204, ಥಾಣೆಯಲ್ಲಿ 1,01,977 ಕೇಸ್ ಪತ್ತೆಯಾಗಿದೆ.

   ಮಹಾರಾಷ್ಟ್ರದ ಒಟ್ಟು ಸೋಂಕಿನ ಪೈಕಿ 1,47,048 ಪ್ರಕರಣಗಳು ಸಕ್ರಿಯವಾಗಿದೆ. 3,27,281 ಅಧಿಕ ಮಂದಿ ಚೇತರಿಕೆ ಕಂಡಿದ್ದಾರೆ. ಇದುವರೆಗೂ ರಾಜ್ಯದಲ್ಲಿ 17,092 ಜನರು ಮೃತಪಟ್ಟಿದ್ದಾರೆ.

   English summary
   12,822 COVID19 cases & 275 deaths reported in Maharashtra today. Total number of cases in the state is now at 5,03,084.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X