ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಕರ್ನಾಟಕದ ಸಾಧುಗಳ ಮೇಲೆ ಮಕ್ಕಳ ಕಳ್ಳರ ಆರೋಪ, ಹಲ್ಲೆ

|
Google Oneindia Kannada News

ಮುಂಬೈ ಸೆಪ್ಟೆಂಬರ್ 14: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಮಕ್ಕಳನ್ನು ಅಪಹರಿಸುವವರು ಎಂದು ಶಂಕಿಸಿ ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಜಿಲ್ಲೆಯ ಲವಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಲುಗಳಿಂದ ಶಸ್ತ್ರಸಜ್ಜಿತವಾದ ಜನಸಮೂಹವು ಕಿರಾಣಿ ಅಂಗಡಿಯ ಹೊರಗೆ ಹಲವಾರು ವೀಕ್ಷಕರ ಸಮ್ಮುಖದಲ್ಲಿ ಸಾಧುಗಳನ್ನು ಥಳಿಸುತ್ತಿರುವುದು ಕಂಡುಬಂದಿದೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ಯಾವುದೇ ದೂರು ಅಥವಾ ಔಪಚಾರಿಕ ವರದಿಯನ್ನು ಸ್ವೀಕರಿಸಿಲ್ಲ, ಆದರೆ ವೈರಲ್ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ. ಜೊತೆಗೆ ಸತ್ಯವನ್ನು ಪರಿಶೀಲಿಸುತ್ತಿದ್ದೇವೆ. ಬಳಿಕ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

26/11 ಮುಂಬೈ ದಾಳಿ: ರತನ್‌ ಟಾಟಾಗೆ, ತಾಜ್ ಹೋಟೆಲ್‌ನ ಮ್ಯಾನೇಜರ್ ಹೇಳಿದ್ದೇನು?26/11 ಮುಂಬೈ ದಾಳಿ: ರತನ್‌ ಟಾಟಾಗೆ, ತಾಜ್ ಹೋಟೆಲ್‌ನ ಮ್ಯಾನೇಜರ್ ಹೇಳಿದ್ದೇನು?

ನಾಲ್ವರು ಸಾಧುಗಳು ಕರ್ನಾಟಕದ ಬಿಜಾಪುರದಿಂದ ದೇವಸ್ಥಾನದ ಪಟ್ಟಣವಾದ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಬಾಲಕನಿಗೆ ದಾರಿ ಕೇಳಿದ್ದಾರೆ. ಈ ವೇಳೆ ಇವರು ಮಕ್ಕಳನ್ನು ಅಪಹರಿಸುವ ತಂಡದಿಂದ ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ.

ಮಕ್ಕಳನ್ನು ಅಪಹರಿಸುವವರು ಎಂಬ ಶಂಕೆ

ಸಂತ್ರಸ್ತ ಸಾಧುಗಳು ಲವಣ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಅವರು ತಮ್ಮ ಪ್ರಯಾಣವನ್ನು ಪುನರಾರಂಭಿಸುವಾಗ ಈ ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಅವರು ಹುಡುಗನಿಗೆ ದಾರಿ ಕೇಳಿದ ನಂತರ ಅವರೊಂದಿಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದರು. ಬಳಿಕ ಇದು ಹಲ್ಲೆಗೆ ಕಾರಣವಾಗಿದೆ. ಸಾಧುಗಳು ಉತ್ತರ ಪ್ರದೇಶದ 'ಅಖಾಡಾ'ದವರು ಎಂದು ಪೊಲೀಸರ ತನಿಖೆ ಬಳಿಕ ತಿಳಿದು ಬಂದಿದೆ.

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ. ರಾಜ್ಯ ಸರ್ಕಾರವು ಸಾಧುಗಳೊಂದಿಗೆ ಇಂತಹ "ದುಷ್ಕೃತ್ಯ" ವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

'ಪ್ರಸ್ತುತ ಮಹಾರಾಷ್ಟ್ರ ಸರ್ಕಾರ ಸಾಧುಗಳ ಮೇಲೆ ದಾಳಿ ಸಹಿಸದು'

"ಪಾಲ್ಘರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸರ್ಕಾರ ಅವರಿಗೆ ಅನ್ಯಾಯ ಮಾಡಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಯಾವುದೇ ಸಾಧುವಿನ ವಿರುದ್ಧ ಯಾವುದೇ ಅನ್ಯಾಯವನ್ನು ಅನುಮತಿಸುವುದಿಲ್ಲ" ಎಂದು ಅವರು 2020 ರ ಘಟನೆಯನ್ನು ಉಲ್ಲೇಖಿಸಿ ಶಾಸಕ ರಾಮ್ ಹೇಳಿದರು.

'ಸಾಧುಗಳ ಹತ್ಯೆಯ ಯತ್ನ'

'ಸಾಧುಗಳ ಹತ್ಯೆಯ ಯತ್ನ'

ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಘಟನೆಯನ್ನು "ದುರದೃಷ್ಟಕರ" ಎಂದು ಕರೆದಿದೆ. ಈ ಹಲ್ಲೆಯು ಸಾಧುಗಳ ಹತ್ಯೆಯ ಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ ವಕ್ತಾರ ಆನಂದ್ ದುಬೆ, ಈ ಸರ್ಕಾರ ಹಿಂದೂಗಳೊಂದಿಗೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಅಥವಾ ಅವರು "ಹಿಂದೂವಾದಿ" ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ವಕ್ತಾರ ಆನಂದ್ ದುಬೆ ಆಕ್ರೋಶ

ವಕ್ತಾರ ಆನಂದ್ ದುಬೆ ಆಕ್ರೋಶ

"ಸರ್ಕಾರವು ಹಿಂದೂಗಳ ಪರ ಮತ್ತು ಹಿಂದೂಗಳನ್ನು ರಕ್ಷಿಸುತ್ತದೆ ಎಂದು ಹೇಳಿಕೊಳ್ಳುತ್ತಿರುವಾಗ, ಸಾಂಗ್ಲಿಯಲ್ಲಿ ಸಾಧುಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ. ನಮ್ಮ ಸರ್ಕಾರ ಹಿಂದೂ ವಿರೋಧಿ ಎಂದು ನಾವು ಅಧಿಕಾರದಲ್ಲಿದ್ದಾಗ ಆರೋಪಗಳನ್ನು ಮಾಡುವುದು ಸುಲಭ. ಸರ್ಕಾರವು ಎಚ್ಚೆತ್ತುಕೊಳ್ಳಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಹೇಳಿದರು.

English summary
On Tuesday, a group of four sadhus were attacked in Sangli district of Maharashtra by a group suspecting them to be child abductors, the video of which has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X