ಓಮಿಕ್ರಾನ್ ಭೀತಿ: ಮಹಾರಾಷ್ಟ್ರದಲ್ಲೂ ಹಲವು ನಿರ್ಬಂಧಗಳು ಜಾರಿ

ಮುಂಬೈ, ಡಿಸೆಂಬರ್ 25: ಕೊರೊನಾ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ಹಲವು ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, 20 ಕ್ಕಿಂತಲೂ ಹೆಚ್ಚಿನ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.

ಹೊಸ ರೂಪಾಂತರಿ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು ರಾತ್ರಿ 9 ಗಂಟೆ ನಂತರ ಬೆಳಿಗ್ಗೆ 6 ಗಂಟೆ ವರೆಗೆ 5 ಕ್ಕೂ ಹೆಚ್ಚಿನ ಮಂದಿ ಒಂದೆಡೆ ಸೇರುವುದನ್ನು ನಿರ್ಬಂಧಿಸಲಾಗಿದೆ. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಡಿ.24 ರ ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Maharashtra Restricts Overnight Gatherings, 50Per cent Cap For Gyms, Cinemas

ಇದೇ ವೇಳೆ ಗುಜರಾತ್, ಮಧ್ಯಪ್ರದೇಶ, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳೂ ಓಮಿಕ್ರಾನ್ ಸೋಂಕು ತಡೆಗೆ ನೈಟ್ ಕರ್ಫ್ಯೂ ಕ್ರಮದ ಮೊರೆ ಹೋಗಿವೆ. ಗುಜರಾತ್ ನ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೆ ಆದೇಶಿಸಲಾಗಿದೆ. ಅಹಮದಾಬಾದ್, ವಡೋದರಾ, ಸೂರತ್, ರಾಜ್ ಕೋಟ್, ಭವ್ ನಗರ್, ಜಾಮ್ ನಗರ, ಗಾಂಧಿನಗರ, ಜುನಾಗಢ್ ಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಗುರುವಾರ ಒಂದೇ ದಿನದಂದು ಗುಜರಾತ್ ನಲ್ಲಿ 7 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದವು.

ಉತ್ತರ ಪ್ರದೇಶ:ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದ್ದರೂ, ಓಮಿಕ್ರಾನ್ ತಳಿ ಪ್ರಕರಣಗಳ ಏರಿಕೆ ಆತಂಕ ಮೂಡಿಸುತ್ತಿದೆ. ಬ್ರಿಟನ್ ಹಾಗೂ ಅಮೆರಿಕದಲ್ಲಿ ಡೆಲ್ಟಾ ಮತ್ತು ಓಮಿಕ್ರಾನ್ ತಳಿಗಳ ಸಂಯೋಜನೆ ಡೆಲ್ಮಿಕ್ರಾನ್, ಕೋವಿಡ್ ಪ್ರಕರಣಗಳ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಭಾರತದಲ್ಲಿಯೂ ಉಂಟಾಗಬಹುದು ಎಂಬ ಕಳವಳ ಎದುರಾಗಿದೆ.

ಭಾರತದಲ್ಲಿ ಈಗಲೂ ಡೆಲ್ಟಾ ವೈರಸ್ ಪ್ರಬಲವಾಗಿದ್ದು, ಅದರೊಂದಿಗೆ ಓಮಿಕ್ರಾನ್ ಸೇರಿಕೊಂಡರೆ ಫೆಬ್ರವರಿ ವೇಳೆಗೆ ಎರಡನೆಯ ಅಲೆಗಿಂತಲೂ ಭೀಕರ ಸ್ವರೂಪ ಉಂಟಾಗುವ ಎಚ್ಚರಿಕೆ ನೀಡಲಾಗುತ್ತಿದೆ.

ಈ ನಡುವೆ ಉತ್ತರ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ. ಚುನಾವಣೆ ಸನ್ನಿಹಿತವಾಗುತ್ತಿರುವ ರಾಜ್ಯದಲ್ಲಿ ಈವರೆಗೆ ಓಮಿಕ್ರಾನ್ ಪ್ರಕರಣ ಕಂಡುಬಂದಿಲ್ಲ. ಆದರೂ ಶನಿವಾರದಿಂದ ಆರಂಭವಾಗುವಂತೆ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಅಲ್ಲದೆ ಇನ್ನೂ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ.

ಶನಿವಾರದಿಂದ ಪ್ರತಿ ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಜತೆಗೆ, ಮದುವೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ 200 ಮಂದಿ ಮಾತ್ರ ಹಾಜರಾಗಲು ಅನುಮತಿ ನೀಡಲಾಗಿದೆ.

ಕಾರ್ಯಕ್ರಮಗಳಲ್ಲಿ ಎಲ್ಲ ಕೋವಿಡ್ ಶಿಷ್ಟಾಚಾರಗಳ ಪಾಲನೆ ಕಡ್ಡಾಯವಾಗಿದೆ. 'ಮಾಸ್ಕ್ ಇಲ್ಲದೆ ಇದ್ದರೆ, ಸರಕು ಇಲ್ಲ' ಎಂಬ ನೀತಿ ಅನುಸರಿಸುವಂತೆ ಎಲ್ಲ ಅಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಸೂಚಿಸಿದೆ.

ಮಧ್ಯಪ್ರದೇಶ: ಮಧ್ಯಪ್ರದೇಶ ಸರ್ಕಾರವು ಗುರುವಾರ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಿದೆ. ಜೊತೆಗೆ ಜನರಿಗೆ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸಲಹೆ ನೀಡಿದೆ. ಗುರುವಾರ ರಾತ್ರಿಯಿಂದಲೇ ಕರ್ಫ್ಯೂ ಜಾರಿಗೆ ಬರಲಿದೆ. ಮಧ್ಯಪ್ರದೇಶವು ಇಲ್ಲಿಯವರೆಗೆ ಓಮಿಕ್ರಾನ್ ಪ್ರಕರಣವನ್ನು ವರದಿ ಮಾಡಿಲ್ಲ. ಅದಾಗಲೇ ಮುನ್ನೆಚ್ಚರಿಕೆ ದೃಷ್ಟಿಯಿಂದ ನೈಟ್ ಕರ್ಪ್ಯೂ ವಿಧಿಸಲಾಗಿದೆ.

"ಜಗತ್ತಿನಲ್ಲಿ ಓಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ಎಲ್ಲರೂ ಎಚ್ಚರವಾಗಿರಲು ಇದು ಸರಿಯಾದ ಸಮಯ. ಸಾಮಾಜಿಕ ಅಂತರವನ್ನು ಅನುಸರಿಸಲು, ಮುಖವಾಡಗಳನ್ನು ಬಳಸಲು ಮತ್ತು ಕಿಕ್ಕಿರಿದ ಸ್ಥಳಗಳನ್ನು ತಪ್ಪಿಸಲು ಕೇಂದ್ರವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ.

ರ) ಇಡೀ ರಾಜ್ಯದಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲು ನಾವು ನಿರ್ಧರಿಸಿದ್ದೇವೆ ಮತ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿದ್ದರೆ ಇನ್ನೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ "ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+