• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ

By Mahesh
|

ಮುಂಬೈ, ಅ.29: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನವೇ ಒಂದು ಮಾತು ಚಾಲ್ತಿಯಲ್ಲಿತ್ತು. 'ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ' ಈಗ ಈ ಮಾತು ನಿಜವಾಗಿದೆ. ಆರೆಸ್ಸೆಸ್, ಮೋದಿ ಅಣತಿಯಂತೆ ದೇವೇಂದ್ರ ಅವರಿಗೆ ಮಹಾರಾಷ್ಟ್ರದ ಸಿಎಂ ಆಗುವ ಯೋಗ ಲಭಿಸಿದೆ.

ರಾಜಕೀಯ ಗುರು ನಿತಿನ್ ಗಡ್ಕರಿ ಅವರು ಸಿಎಂ ಕುರ್ಚಿಯನ್ನು ದೇವೇಂದ್ರ ಅವರಿಗೆ ಕೊಟ್ಟಿದ್ದಾರೆ. ನಾಗಪುರದ ಯುವ ನಾಯಕನಿಗೆ ಈಗ ದೇಶದ ವಾಣಿಜ್ಯ ನಗರಿ ಸೇರಿದಂತೆ ಮರಾಠಿಗರ ಹಿತ ಕಾಯುವ ಪ್ರಮುಖ ಜವಾಬ್ದಾರಿ ಸಿಕ್ಕಿದೆ. ಚುನಾವಣಾ ನೀತಿ ಉಲ್ಲಂಘನೆ, ಹಲ್ಲೆ ಪ್ರಕರಣಗಳನ್ನು ಬಿಟ್ಟರೆ ದೇವೇಂದ್ರ ಅವರದ್ದು ಕ್ಲೀನ್ ಇಮೇಜ್. [ಹರ್ಯಾಣ ಸಿಎಂ ಖಟ್ಟರ್ ವ್ಯಕ್ತಿಚಿತ್ರ ಓದಿ]

ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ(1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ಈಗ ದೇವೇಂದ್ರ ಅವರಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಛತ್ರಪತಿ ಶಿವಾಜಿ, ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ರಾಜ್ಯಭಾರ ಮಾಡುವುದಾಗಿ ದೇವೇಂದ್ರ ಹೇಳಿದ್ದಾರೆ. ದೇವೇಂದ್ರ ಅವರ ಸಂಕ್ಷಿಪ್ತ ವ್ಯಕ್ತಿ ಚಿತ್ರ ಇಲ್ಲಿದೆ:

ಕುಟುಂಬ: ಪತ್ನಿ ಅಮೃತಾ ರಾನಡೆ, 2006ರಲ್ಲಿ ಮದುವೆ, ಆಕ್ಸಿಸ್ ಬ್ಯಾಂಕ್ ನಲ್ಲಿ ಉದ್ಯೋಗಿ, ಪುತ್ರಿ ದಿವಿಜಾ ಫಡ್ನವೀಸ್.

* ತಂದೆ ಗಂಗಾಧರ್ ರಾವ್ ಫಡ್ನವೀಸ್, ತಾಯಿ ಸವಿತಾ ಫಡ್ನವೀಸ್

ವಿದ್ಯಾಭ್ಯಾಸ : ಬಿ.ಎ (ಕಾನೂನು), ಎಲ್.ಎಲ್.ಬಿ

* ಬರ್ಲಿನ್ ನ ಜರ್ಮನ್ ಫೌಂಡೇಷನ್ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನಿಂದ ಬಿಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ನಲ್ಲಿ ಡಿಪ್ಲೋಮಾ

* ನಾಗಪುರ ವಿಶ್ವವಿದ್ಯಾಲಯದಿಂದ ಎಲ್ಎಲ್ ಬಿ

* ಬೋಸ್ ಪ್ರೈಜ್ ಇನ್ ಹಿಂದೂ ಲಾ ಗೌರವ.

ರಾಜಕೀಯ ಜೀವನ :

* 1986-89 ಎಬಿವಿಪಿಯಲ್ಲಿ ಕಾರ್ಯ ಇದಕ್ಕೂ ಮುನ್ನ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.

* ವಾರ್ಡ್ ಅಧ್ಯಕ್ಷರಾಗಿ ಬಿಜೆಪಿಗೆ ಸೇರ್ಪಡೆ

* 1992 - ಎರಡು ಅವಧಿಗೆ ನಾಗಪುರದ ಯುವ ಕಾರ್ಪೊರೇಟರ್ ಆಗಿ ಆಯ್ಕೆ

* 1997 - 27ನೇ ವಯಸ್ಸಿಗೆ ನಾಗಪುರದ ಮೇಯರ್ ಆಗಿದ್ದರು.

* 1990 : ನಾಗಪುರದ ಪಶ್ಚಿಮ ಭಾಗದ ಬಿಜೆಪಿ ಸದಸ್ಯ

* 1992 : ನಾಗಪುರ ನಗರದ ಯುವಮೋರ್ಚಾ ಅಧ್ಯಕ್ಷ

* 1994 : ಯುವಮೋರ್ಚಾದ ರಾಜ್ಯ ಉಪಾಧ್ಯಕ್ಷ

* 2001 : ರಾಷ್ಟ್ರೀಯ ಯುವಮೋರ್ಚಾದ ಉಪಾಧ್ಯಕ್ಷ

* 2010 : ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

* 2013 : ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ

ವಿಳಾಸ: #276, ರಾವ್ ಸಾಹೇಬ್ ಫಡ್ನವೀಸ್ ಪಾರ್ಕ್, ಧರ್ಮಂಪೇಠ್, ನಾಗಪುರ, 440 010

ವೆಬ್ ತಾಣ: http://www.devendrafadnavis.in

ಫೇಸ್ ಬುಕ್ : https://www.facebook.com/devendra.fadnavis

ಟ್ವಿಟ್ಟರ್ : https://twitter.com/Dev_Fadnavis

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Devendra Fadnavis, who is known as a favourite of PM Narendra Modi, shot to fame outside Maharashtra during campaigning for the assembly elections.Here is brief profile of Devendra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more