• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿ: ಇರುವ ಸಂಗ್ರಹ ಮೂರು ದಿನದವರೆಗೆ ಮಾತ್ರ

|

ಮುಂಬೈ, ಏಪ್ರಿಲ್ 7: ಒಂದೆಡೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ತೀವ್ರಗೊಳಿಸುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಇನ್ನು ಮೂರು ದಿನಗಳಲ್ಲಿ ಕೋವಿಡ್ ಲಸಿಕೆಗಳ ಸಂಗ್ರಹ ಖಾಲಿಯಾಗಲಿದೆ. ಮುಂಬೈಯಂತಹ ನಗರದಲ್ಲಿಯೂ ಲಸಿಕೆ ಕೊರತೆ ಉಂಟಾಗುವ ಸಾಧ್ಯತೆ ಎದುರಾಗಿರುವುದು ಆತಂಕ ಮೂಡಿಸಿದೆ. ಹೀಗಾಗಿ ಮತ್ತಷ್ಟು ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ.

'ರಾಜ್ಯದಲ್ಲಿನ ಲಸಿಕೆಗಳ ಸಂಗ್ರಹ ಮೂರು ದಿನಗಳಲ್ಲಿ ಖಾಲಿಯಾಗಲಿದೆ. ಮತ್ತಷ್ಟು ಲಸಿಕೆಗಳನ್ನು ಸರಬರಾಜು ಮಾಡುವಂತೆ ಕೇಂದ್ರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಪ್ರತಿ ದಿನವೂ ರಾಜ್ಯವು ಅತ್ಯಧಿಕ ಸಂಖ್ಯೆಯ ಪ್ರಕರಣಗಳನ್ನು ಕಾಣುತ್ತಿದೆ. ಮುಂಬೈನಲ್ಲಿಯೂ ಮುಂದಿನ ಮೂರು ದಿನಗಳಲ್ಲಿ ಲಸಿಕೆ ಸಂಗ್ರಹ ಖಾಲಿಯಾಗಲಿದೆ' ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.

ಆಸ್ಟ್ರಾಜೆನಿಕಾ ಲಸಿಕೆ ಪಡೆದು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾದವರಲ್ಲಿ 7 ಮಂದಿ ಸಾವು

ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತೋಪೆ ಅವರು ಲಸಿಕೆ ಕೊರತೆ ಬಗ್ಗೆ ವಿವರಿಸಿದ್ದಾರೆ.

'ಇಂದು 14 ಲಕ್ಷ ಡೋಸ್‌ಗಳು ಲಭ್ಯವಿದೆ. ಇದರ ಅರ್ಥ ಈ ಲಸಿಕೆ ಇನ್ನು ಮೂರು ದಿನಗಳಿಗಷ್ಟೇ ಸಾಕಾಗುತ್ತದೆ. ನಾವು ಪ್ರತಿ ದಿನ ಐದು ಲಕ್ಷ ಡೋಸ್ ಬಳಸುತ್ತಿದ್ದೇವೆ. ಪ್ರತಿ ವಾರ 40 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ನಮ್ಮ ಬಹುತೇಕ ಲಸಿಕೆ ಕೇಂದ್ರಗಳಲ್ಲಿ ಲಸಿಕೆಗಳೇ ಇಲ್ಲ. ಹೀಗಾಗಿ ಅವುಗಳನ್ನು ಮುಚ್ಚಲಾಗಿದೆ. ಡೋಸ್‌ಗಳ ಕೊರತೆಯಿಂದಾಗಿ ಅವರು ಲಸಿಕೆ ಪಡೆಯಲು ಬಂದ ಜನರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಹೀಗಾಗಿ ಲಸಿಕೆ ಪೂರೈಕೆ ಮಾಡುವಂತೆ ಕೋರುತ್ತೇವೆ' ಎಂದು ತೋಪೆ ತಿಳಿಸಿದ್ದಾರೆ.

ಜನವರಿಯಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾದಾಗಿನಿಂದ ಮಹಾರಾಷ್ಟ್ರದಲ್ಲಿ ಇದುವರೆಗೂ ಸುಮಾರು 82 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಮಂಗಳವಾರದವರೆಗೂ ಅಂದಾಜು 1.06 ಕೋಟಿ ಡೋಸ್‌ಗಳನ್ನು ಮಹಾರಾಷ್ಟ್ರಕ್ಕೆ ಪೂರೈಕೆ ಮಾಡಿದ್ದು, ಅದರಲ್ಲಿ 88 ಲಕ್ಷ ಡೋಸ್ ಬಳಕೆಯಾಗಿದೆ. ಶೇ 3ರಷ್ಟು ಲಸಿಕೆ ವ್ಯರ್ಥವಾಗಿದೆ.

ಕೊರೊನಾವೈರಸ್ ಏರಿಕೆ ನಡುವೆ ಲಸಿಕೆ ವಿತರಣೆಯಲ್ಲಿ ಇಳಿಕೆ!?

ಲಸಿಕೆಗಳ ಕೊರತೆ ಎದುರಾಗಿರುವ ನಡುವೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, 25 ವರ್ಷ ಮೇಲಿನ ಎಲ್ಲರಿಗೂ ಲಸಿಕೆ ನೀಡುವಂತೆ ಕಾರ್ಯಕ್ರಮವನ್ನು ವಿಸ್ತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಜತೆಗೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಮೂರು ವಾರಗಳ ಒಳಗೆ 1.5 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡುವಂತೆ ಕೋರಿದ್ದಾರೆ.

English summary
Maharashtra govt requested the Centre for more Covid vaccines as it may run out of doses. Most of the Covid centres had to shut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X