ಕಂಗನಾ ಬಗ್ಗೆ ವಿವಾದಿತ ಹೇಳಿಕೆ: ಮಹಾರಾಷ್ಟ್ರ ಗೃಹ ಸಚಿವರಿಗೆ ಬೆದರಿಕೆ ಕರೆ

ಮುಂಬೈ, ಸೆಪ್ಟೆಂಬರ್ 09: ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ವಿವಾದಿತ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಗೆ ಬೆದರಿಕೆ ಕರೆ ಬರಲು ಆರಂಭವಾಗಿದೆ.

ಗೃಹ ಸಚಿವರಿಗೆ ನಿನ್ನೆ ಮತ್ತು ಇನ್ನು ಆರೇಳು ಬೆದರಿಕೆ ಕರೆಗಳು ಬಂದಿವೆ. ಅದರಲ್ಲಿ ಒಂದು ಬಾರಿ ಕರೆ ಮಾಡಿದವರು ತನ್ನನ್ನು ಮೃತ್ಯುಂಜಯ್ ಗಾರ್ಗ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಗೃಹ ಸಚಿವರ ಆಪ್ತರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶ ಮತ್ತು ಬೇರೆ ಕಡೆಗಳಿಂದ ಅನಾಮಧೇಯ ಸಂಖ್ಯೆಗಳಿಂದ ಅನಿಲ್ ದೇಶ್ ಮುಖ್ ಅವರಿಗೆ ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆ 6 ಗಂಟೆ ಹೊತ್ತಿಗೆ ಬೆದರಿಕೆ ಕರೆಗಳು ಬಂದಿದ್ದು, ನಟಿಯ ವಿವಾದಕ್ಕೆ ಸಂಬಂಧಿಸಿದ ವಿಷಯದಲ್ಲಿ ನೀವು ಮೂಗು ತೂರಿಸಬೇಡಿ ಎಂದು ಕರೆ ಮಾಡಿರುವ ವ್ಯಕ್ತಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Maharashtra Home Minister Anil Deshmukh Again Receives Threat Calls

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ನಡೆಸುತ್ತಿರುವುದರ ಮಧ್ಯೆ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗನಾ ರಾಣಾವತ್ ತೀವ್ರ ಟೀಕೆ ಎದುರಿಸುತ್ತಿದ್ದಾರೆ.

ಈ ಮಧ್ಯೆ ಇಂದು ನಟಿ ಕಂಗನಾ ರಾಣಾವತ್ ಮುಂಬೈಗೆ ಆಗಮಿಸುತ್ತಿದ್ದು, ಇಂದು ಬೆಳಗ್ಗೆ ಹಿಮಾಚಲ ಪ್ರದೇಶದ ಪಮಿರ್ಪುರ್ ಜಿಲ್ಲೆಯಲ್ಲಿ ಕೊಥಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಚಂಡೀಗಢ ಮೂಲಕವಾಗಿ ಮುಂಬೈಗೆ ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+