ಫಿಟ್ನೆಸ್ ಪ್ರಿಯರಿಗೆ ಸಿಹಿ ಸುದ್ದಿ: ಜಿಮ್ ತೆರೆಯಲು ಸಜ್ಜಾದ ಮೊದಲ ರಾಜ್ಯ!
ಮುಂಬೈ, ಜುಲೈ 23: ಕೊರೊನಾ ವೈರಸ್ ಭೀತಿಯಿಂದ ಜಿಮ್ ಸೇರಿದಂತೆ ಫಿಟ್ನೆಸ್ ಕೇಂದ್ರಗಳು ಮುಚ್ಚಲ್ಪಟ್ಟಿದೆ. ದೇಶಾದ್ಯಂತ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ ಜಿಮ್ ತೆರೆಯಲು ಮಾತ್ರ ಅವಕಾಶ ಸಿಗುತ್ತಿಲ್ಲ. ಇದರಿಂದ ಫಿಟ್ನೆಸ್ ಪ್ರಿಯರು ಹಾಗೂ ಜಿಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಸಾಮಾಜಿಕ ಅಂತರ ಕಾಪಾಡಿಕೊಂಡು ಜಿಮ್ ಮಾಡುತ್ತೇವೆ, ಜಿಮ್ ತೆರೆಯಲು ಅನುಮತಿ ನೀಡಿ ಎಂದು ದೇಶಾದ್ಯಂತ ಮಾಲೀಕರು ಮನವಿ ಮಾಡುತ್ತಿದ್ದಾರೆ. ಆದರೆ, ಜಿಮ್ ಗೆ ಅನುಮತಿ ನೀಡಿಲ್ಲ.
ಇದೀಗ, ಜಿಮ್ ತೆರೆಯಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ. ಅನ್‌ಲಾಕ್3 ಆರಂಭದಿಂದ ನಗರಗಳಲ್ಲಿ ಜಿಮ್ ತೆರೆಯಲು ಅನುಮತಿ ನೀಡುವ ಕುರಿತು ಚರ್ಚಿಸಲಾಗ್ತಿದೆ ಎಂದು ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಕುರಿತು ಮಾತನಾಡಿದ್ದು ''ಆಗಸ್ಟ್ 1ರಿಂದ ಅನ್‌ಲಾಕ್-3 ಆರಂಭವಾಗಲಿದೆ. ಈ ಹಂತದಲ್ಲಿ ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲು ಖುದ್ದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಜಿಮ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಅನುಮತಿ ನೀಡುವ ಕುರಿತು ಸರ್ಕಾರ ಚಿಂತಿಸುತ್ತಿದೆ'' ಎಂದು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಘೋಷಣೆ ಆದ ಸಂದರ್ಭದಿಂದ ಜಿಮ್ ಮುಚ್ಚಲಾಗಿದೆ. ಬಾಡಿಗೆ ಕಟ್ಟಲಾಗದೆ ಮಾಲೀಕರು ಕಷ್ಟ ಪಡುತ್ತಿದ್ದಾರೆ. ಜಿಮ್ ನಿಯಂತ್ರಣ ಮಾಡುವುದು ಕಷ್ಟ ಆಗಲಿದೆ ಎಂದು ಅಂಗಲಾಚಿದ್ದರು. ಸಾಲ ಮಾಡಿ ಜಿಮ್ ಉಪಕರಣಗಳನ್ನು ತೆಗೆದುಕೊಂಡಿರುವವರಿಗೆ ಇಎಂಐ ಕಟ್ಟಲಾಗದ ಸ್ಥಿತಿ ಬಂದಿದೆ. ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ ಜಿಮ್ ಗೆ ಅನುಮತಿ ನೀಡಲು ಮುಂದಾಗಿದೆ.

ಸರ್ಕಾರದ ನಿಯಮಗಳನ್ನು ಅನುಸರಿಸಿ ಜಿಮ್ ತೆರೆಯಲು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಫಿಟ್ನೆಸ್ ಕೇಂದ್ರಕ್ಕೆ ಅನುಮತಿ ಸಿಕ್ಕರೆ, ಲಾಕ್‌ಡೌನ್ ಬಳಿಕ ದೇಶದಲ್ಲಿ ಜಿಮ್ ತೆರೆದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ.












Click it and Unblock the Notifications