• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಯಾವುದೇ ಪರೀಕ್ಷೆಗೂ ಅನುಮತಿ ಇಲ್ಲ

|
Google Oneindia Kannada News

ಮುಂಬೈ, ಜೂನ್ 26: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಯಾವುದೇ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

   ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ | Oneindia Kannada

   ಪ್ರಸ್ತುತ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಅನುಕೂಲಕರವಲ್ಲದ ಸ್ಥಿತಿ ನಿರ್ಮಾಣವಾಗಿರುವುದರಿಂದ, ಅಂತಿಮ ವರ್ಷದ ವೃತ್ತಿಪರ ಕೋರ್ಸ್‌ಗಳ ಪರೀಕ್ಷೆ ಹಾಗೂ ತರಗತಿ ಸೇರಿದಂತೆ ಯಾವುದೇ ಪರೀಕ್ಷೆಯನ್ನು ನಡೆಸದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಕಚೇರಿ ತಿಳಿಸಿದೆ.

   Breaking: ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ರದ್ದುBreaking: ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ರದ್ದು

   ''ವಿಶ್ವವಿದ್ಯಾಲಯಗಳು ನಿರ್ಧರಿಸಿದ ಸೂತ್ರದ ಆಧಾರದ ಮೇಲೆ ಪದವಿಗಳನ್ನು ನೀಡಲು ನಿರ್ಧರಿಸಿದೆ'' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಹೇಳಿದೆ.

   ಸಿಬಿಎಸ್ಇ ಪರೀಕ್ಷೆಗೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿತ್ತು. 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿ, 12ನೇ ತರಗತಿ ಪರೀಕ್ಷೆ ತಾತ್ಕಲಿಕವಾಗಿ ರದ್ದು ಮಾಡಲಾಗುವುದು ಎಂದು ಹೇಳಿತ್ತು. ಮುಂದಿನ ದಿನದಲ್ಲಿ ಸಾಧ್ಯವಾದರೆ ಪರೀಕ್ಷೆ ನಡೆಸಬಹುದು ಅಥವಾ ಗ್ರೇಡ್ ಆಧಾರದಲ್ಲಿ ಫಲಿತಾಂಶ ಪ್ರಕಟ ಮಾಡಬಹುದು. ನಿರ್ಧಾರ ಸಿಬಿಎಸ್ಇ ಆಡಳಿತ ಮಂಡಳಿಗೆ ಬಿಟ್ಟಿದ್ದು ಎಂದು ಹೇಳಿತ್ತು.

   ಇದಕ್ಕೂ ಮುಂಚೆಯೇ ಬಾಂಬೇ ಹೈಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಸಿಬಿಎಸ್ಇ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿತ್ತು. ಇದೀಗ, ಸ್ನಾತಕೋತ್ತರ ವೈದ್ಯಕೀಯ ಪರೀಕ್ಷೆಗಳನ್ನು ಮುಂದೂಡಿ ಎಂದು ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಪತ್ರದ ಮೂಲಕ ಮನವಿ ಮಾಡಿದೆ.

   English summary
   Maharashtra Govt decided to not conduct final year/final semester exam of non-professional/professional courses as present atmosphere is not yet conducive to conduct any exam or classes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X