ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯಿಂದ ವಿನಾಯಿತಿ

|
Google Oneindia Kannada News

ಮುಂಬೈ, ಜುಲೈ 16: ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ವರದಿಯಿಂದ ಅನುಮತಿ ನೀಡಲಾಗಿದೆ.

ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದಂತಹ ಜನರು ರಾಜ್ಯಕ್ಕೆ ಭೇಟಿ ನೀಡಲು ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯಿಂದ ವಿನಾಯಿತಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಆದಾಗ್ಯೂ, ರಾಜ್ಯಕ್ಕೆ ಬರುವ ಮುನ್ನ ಎರಡನೇ ಡೋಸ್ ಪಡೆದು 15 ದಿನಗಳ ಅಂತರವಿರಬೇಕು.

ಕೋವಿಶೀಲ್ಡ್ ಕೊರತೆ: ದೆಹಲಿ, ಮಹಾರಾಷ್ಟ್ರ, ಒಡಿಶಾದಲ್ಲಿ ಲಸಿಕೆ ಅಭಿಯಾನಕ್ಕೆ ಕುತ್ತುಕೋವಿಶೀಲ್ಡ್ ಕೊರತೆ: ದೆಹಲಿ, ಮಹಾರಾಷ್ಟ್ರ, ಒಡಿಶಾದಲ್ಲಿ ಲಸಿಕೆ ಅಭಿಯಾನಕ್ಕೆ ಕುತ್ತು

ರಾಜ್ಯಕ್ಕೆ ಭೇಟಿ ನೀಡುವವರು ಕೋವಿಡ್-19 ಲಸಿಕೆಯ ಎರಡು ಡೋಸ್ ಗಳನ್ನು ಪಡೆದಿರಬೇಕು, ಎರಡನೇ ಡೋಸ್ ಪಡೆದು 15 ದಿನಗಳ ಅಂತರವಿರಬೇಕು. ಅಂತಹ ವ್ಯಕ್ತಿಯು ಕೋವಿನ್ ಪೋರ್ಟಲ್ ಮೂಲಕ ನೀಡುವ ಅಂತಿಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಗುರುವಾರ ತಡರಾತ್ರಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಈ ಆದೇಶವನ್ನು ಘೋಷಿಸಿದ್ದಾರೆ.

Maharashtra Gives RT-PCR Test Report Exemption To Travellers

ಈ ವಿನಾಯಿತಿ ಆದೇಶದ ಹೊರತಾಗಿಯೂ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಎಲ್ಲಾ ವೇಳೆಯಲ್ಲೂ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಇತರ ಎಲ್ಲ ವ್ಯಕ್ತಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮಾನ್ಯತೆಯು 48 ಗಂಟೆಗಳ ಬದಲು 72 ಗಂಟೆಗಳಿರುತ್ತದೆ ಎಂದು ಅದು ಹೇಳಿದೆ.

ಅಂತಹ ವ್ಯಕ್ತಿಗಳು ರಾಜ್ಯಕ್ಕೆ ಭೇಟಿ ನೀಡಲು ಕಡ್ಡಾಯವಾಗಿ ನೆಗೆಟಿವ್ ಆರ್ ಟಿ- ಪಿಸಿಆರ್ ವರದಿಯನ್ನು ತೋರಿಸಬೇಕಾದ ಅಗತ್ಯವಿರುವುದಿಲ್ಲ, ಇದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

English summary
The Maharashtra government has exempted those people who have got both the doses of the COVID-19 vaccine from carrying a negative RT-PCR test report for entering the state, although there has to be a gap of at least 15 days between the second dose and the date of arrival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X