ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮೇ 31ರವರೆಗೂ ಲಾಕ್‌ಡೌನ್‌ ವಿಸ್ತರಣೆ?

|
Google Oneindia Kannada News

ಮುಂಬೈ, ಮೇ 15: ದೇಶದಲ್ಲಿ ಮೂರನೇ ಹಂತದ ಲಾಕ್‌ಡೌನ್‌ ಈ ವಾರಾಂತ್ಯಕ್ಕೆ ಮುಗಿಯಲಿದೆ. ಅದಾದ ಬಳಿಕ ನಾಲ್ಕನೇ ಹಂತದ ಲಾಕ್‌ಡೌನ್‌ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಸುಳಿವು ನೀಡಿದ್ದರು.

ಇದೀಗ, ಮಹಾರಾಷ್ಟ್ರ ಸರ್ಕಾರ ಕೂಡ ರಾಜ್ಯದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಮೇ 31ರವರೆಗೂ ವಿಸ್ತರಣೆ ಮಾಡುವ ಇಂಗಿತ ವ್ಯಕ್ತಪಡಿಸಿದೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಅಧಿಕಾರಿಗಳು ಚರ್ಚಿಸಿದ್ದು, ಕೊರೊನಾ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಲಾಕ್‌ಡೌನ್‌ ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜಗತ್ತಿನಾದ್ಯಂತ ಕೊರೊನಾಗೆ 3 ಲಕ್ಷ ಬಲಿ, ಯಾವ ದೇಶದಲ್ಲಿ ಎಷ್ಟು ಸಾವು?ಜಗತ್ತಿನಾದ್ಯಂತ ಕೊರೊನಾಗೆ 3 ಲಕ್ಷ ಬಲಿ, ಯಾವ ದೇಶದಲ್ಲಿ ಎಷ್ಟು ಸಾವು?

ಮುಂಬೈ ಮಹಾನಗರ ಪಾಲಿಕೆ, ಪುಣೆ, ಸೋಲಾಪುರ, ಔರಂಗಬಾದ್, ಮಾಲೆಗಾಂವ್ ಸೇರಿದಂತೆ ರಾಜ್ಯದಲ್ಲಿ ಗುರುತಿಸಲಾಗಿರುವ ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ಡೌನ್‌ ಮುಂದೂಡಲು ಸರ್ಕಾರ ಚಿಂತನೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರವೂ ಲಿಖಿತ ರೂಪದಲ್ಲಿ ತಿಳಿಸಲಾಗಿದೆ.

Maharashtra Extand Lockdown Till May 31st

ಉಳಿದ ಪ್ರದೇಶಗಳಲ್ಲಿ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗುವುದು. ಮೇ 17ರ ನಂತರ ಲಾಕ್‌ಡೌನ್‌ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಲಿರುವ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ವಿನಾಯಿತಿ ನೀಡಲಾಗುತ್ತೆ ಎಂದು ಹೇಳಲಾಗಿದೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್, ಸಚಿವರಾದ ಜಯಂತ್ ಪಾಟೀಲ್, ಏಕನಾಥ ಶಿಂಧೆ, ಸುಭಾಷ್ ದೇಸಾಯಿ, ಬಾಲಾಸಾಹೇಬ್ ಥೋರತ್ ಮತ್ತು ಅಶೋಕ್ ಚವಾನ್ ಅವರು ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಮಹಾರಾಷ್ಟ್ರ ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯವಾಗಿದ್ದು, 27 ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗಿದೆ. 1000ಕ್ಕೂ ಅಧಿಕ ಜನರು ಸೋಂಕಿನಿಂದ ಬಲಿಯಾಗಿದ್ದಾರೆ. ಹಾಗಾಗಿ, ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಮೇಲೆ ದೇಶದ ಗಮನ ಇದೆ.

English summary
Maharashtra govt decides to extend lockdown in Mumbai other city. Lockdown to be extended till May 31: Maharashtra Government Sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X