ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಮೈತ್ರಿ: ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ?

|
Google Oneindia Kannada News

ಮುಂಬೈ, ನವೆಂಬರ್ 27: ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಶೀವಸೇನಾ-ಕಾಂಗ್ರೆಸ್ ಮೈತ್ರಿ ಸರ್ಕಾರ ನಾಳೆ ಅಸ್ಥಿತ್ವಕ್ಕೆ ಬರುವುದು ಬಹುತೇಕ ನಿಶ್ಚಯವಾಗಿದೆ.

ಮೂರು ಪಕ್ಷಗಳು ಸಚಿವ ಸ್ಥಾನ ಹಂಚಿಕೆ ಬಗ್ಗೆ ಮಾತುಕತೆ ಮುಗಿಸಿದ್ದು, ಶಿವಸೇನಾಕ್ಕೆ ಸಿಎಂ ಪಟ್ಟದ ಜೊತೆ 15 ಮಂತ್ರಿಗಳು ದೊರಕಲಿವೆ. ಎನ್‌ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ 13 ಸಚಿವ ಸ್ಥಾನ, ಕಾಂಗ್ರೆಸ್‌ಗೆ ಸ್ಪೀಕರ್ ಸ್ಥಾನದ ಜೊತೆಗೆ 13 ಸ್ಥಾನಗಳು ದೊರಕಲಿವೆ.

ಮಹಾರಾಷ್ಟ್ರ ಕಳೆದುಕೊಂಡ ನಂತರ ಬಿಜೆಪಿ ಆಡಳಿತದ ರಾಜ್ಯಗಳುಮಹಾರಾಷ್ಟ್ರ ಕಳೆದುಕೊಂಡ ನಂತರ ಬಿಜೆಪಿ ಆಡಳಿತದ ರಾಜ್ಯಗಳು

ಉದ್ಧವ್ ಠಾಕ್ರೆ ನಾಳೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಮೋದಿ ಸೇರಿದಂತೆ ದೇಶದ ಹಲವು ಸಿಎಂ ಗಳನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಎನ್‌ಸಿಪಿಯಿಂದ ಡಿಸಿಎಂ ಸ್ಥಾನವನ್ನು ಸುಪ್ರಿಯಾ ಸುಳೆ ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿಯಿದ್ದು ಇದು ಖಚಿತವಾಗಿಲ್ಲ.

Maharashtra Coalition: Minister Post Distribution Formula

ಡಿಸಿಎಂ ಸ್ಥಾನಕ್ಕಾಗಿ ಬಂಡಾಯವೆದ್ದು ಎನ್‌ಸಿಪಿಗೆ ಮರಳಿರುವ ಅಜಿತ್ ಪವಾರ್ ಹೆಸರೂ ಸಹ ಪರಿಗಣಿಸಲಾಗುತ್ತಿದೆ. ಆದರೆ ಪಕ್ಷದ ಕೆಲವು ಶಾಸಕರ ವಿರೋಧ ಇರುವ ಕಾರಣ ಅಜಿತ್ ಪವಾರ್ ಬದಲಿಗೆ ಸುಪ್ರಿಯಾ ಸುಳೆ ಅವರಿಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ.

ಮೈತ್ರಿ ಬೆನ್ನಲ್ಲೇ ಶಿವಸೇನಾಗೆ ಆಘಾತ ನೀಡಿದ ಮುಖಂಡ: ಪಕ್ಷದ ನಡೆ ವಿರೋಧಿಸಿ ರಾಜೀನಾಮೆಮೈತ್ರಿ ಬೆನ್ನಲ್ಲೇ ಶಿವಸೇನಾಗೆ ಆಘಾತ ನೀಡಿದ ಮುಖಂಡ: ಪಕ್ಷದ ನಡೆ ವಿರೋಧಿಸಿ ರಾಜೀನಾಮೆ

ಶಿವಾಜಿ ಪಾರ್ಕ್‌ ನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಾಳೆ ನಡೆಯಲಿದೆ. ಇದನ್ನು ವಿರೋಧಿಸಿ ಮಹಾರಾಷ್ಟ್ರ ಹೈಕೋರ್ಟ್‌ ಸಲ್ಲಿಸಲಾಗಿದ್ದ ಅರ್ಜಿ ವಜಾ ಆಗಿದೆ. ಆದರೆ ಈ ರೀತಿಯ ಕಾರ್ಯಕ್ರಮಗಳು ಶಿವಾಜಿ ಪಾರ್ಕ್‌ನಲ್ಲಿ ಹೆಚ್ಚಿಗೆ ನಡೆಯಬಾರದು ಎಂದು ಸಹ ಹೈಕೋರ್ಟ್ ಹೇಳಿದೆ.

English summary
Shiv Sena, Congress, NCP decided about minister post distribution. Shiv Sena will get CM post, NCP will get DCM and congress will get speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X