• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಷ್ಟ್ರ ಜನತೆಗೆ ಅಚ್ಛೇದಿನ್ ತರುತ್ತೇನೆ: ಸಿಎಂ ಏಕನಾಥ್ ಶಿಂಧೆ

|
Google Oneindia Kannada News

ಮುಂಬೈ, ಜುಲೈ 10: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾಗಿ ತಮಗೆ ದೊರೆತಿರುವ ಅಧಿಕಾರವನ್ನು ಜನರ ಜೀವನದಲ್ಲಿ 'ಅಚ್ಛೇ ದಿನ್ (ಒಳ್ಳೆಯ ದಿನಗಳು)' ತರಲು ಬಳಸುವುದಾಗಿ ತಿಳಿಸಿದ್ದಾರೆ. ಬಾಳಾಸಾಹೇಬ್ ಅವರ ಹಿಂದುತ್ವ ಮತ್ತು ಧರ್ಮವೀರ್ ಆನಂದ್ ದಿಘೆ ಅವರ ಬೋಧನೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ ಎಂದು ಅವರು ಹೇಳಿದರು.

ರಾಜ್ಯದ ಜನತೆಗೆ ನ್ಯಾಯ ಒದಗಿಸಲು ನನ್ನ ಮುಖ್ಯಮಂತ್ರಿ ಹುದ್ದೆಯನ್ನು ಬಳಸುತ್ತೇನೆ ಮತ್ತು ಸಾಮಾನ್ಯ ನಾಗರಿಕರ ಜೀವನದಲ್ಲಿ 'ಅಚ್ಛೇ ದಿನ್' ತರಲು ಪ್ರಯತ್ನಿಸುತ್ತೇನೆ ಎಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಪುಣೆಗೆ ಆಗಮಿಸುವ ಮೊದಲು ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸುದ್ದಿಗೋಷ್ಠಿ ನಡೆಸಿದರು. ಮುಂದಿನ ಚುನಾವಣೆಯಲ್ಲಿ ಗುಲುವಿನ ವಿಶ್ವಾಸವನ್ನು ಏಕನಾಥ್ ಶಿಂಧೆ ವ್ಯಕ್ತಪಡಿಸಿದರು.

"ಮಹಾರಾಷ್ಟ್ರವು ಬಲಿಷ್ಠ ಸರ್ಕಾರವನ್ನು ಹೊಂದಿದೆ. ನಮ್ಮಲ್ಲಿ 164 ಶಾಸಕರಿದ್ದಾರೆ, ಪ್ರತಿಪಕ್ಷಗಳು 99 ಹೊಂದಿವೆ. ನನ್ನ ಸರ್ಕಾರವು ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ. ಮುಂದಿನ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ" ಎಂದು ಸಿಎಂ ಏಕನಾಥ್ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಎಂವಿಎ ಸರ್ಕಾರದ ಅಡಿಯಲ್ಲಿ ನಮ್ಮ ಶಾಸಕರ ಅಸ್ತಿತ್ವಕ್ಕೆ ಅಪಾಯವಿತ್ತು. ಆಗ ನಾವು ಮಾತನಾಡಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ನಾವು ಈ ಹೆಜ್ಜೆ ಇಟ್ಟಿದ್ದೇವೆ. ಬಿಜೆಪಿ ಮತ್ತು ಶಿವಸೇನೆಯ ಸಹಜ ಮೈತ್ರಿಯಿಂದ ಮಾತ್ರ ಮಹಾರಾಷ್ಟ್ರವನ್ನು ಮುನ್ನಡೆಸಬಹುದು" ಎಂದು ಶಿಂಧೆ ಹೇಳಿದರು.

ಏಕನಾಥ್ ಶಿಂಧೆ ನಮ್ಮ ನಾಯಕ ಎಂದ ಫಡ್ನವೀಸ್

ಏಕನಾಥ್ ಶಿಂಧೆ ನಮ್ಮ ನಾಯಕ ಎಂದ ಫಡ್ನವೀಸ್

"ಮಹಾರಾಷ್ಟ್ರ ಸರ್ಕಾರದ ಹೊಸ ನಾಯಕ ಏಕನಾಥ್ ಶಿಂಧೆ" ಎಂದು ಮಹಾ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು. "ನನ್ನ ಪಕ್ಷ ನನ್ನನ್ನು ಈ ಹಿಂದೆ ಮುಖ್ಯಮಂತ್ರಿ ಮಾಡಿತ್ತು. ಈಗ ಪಕ್ಷದ ಅಗತ್ಯಕ್ಕೆ ತಕ್ಕಂತೆ ನಾವು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಏಕನಾಥ್ ಶಿಂಧೆ ಅವರು ನಮ್ಮ ಮುಖ್ಯಮಂತ್ರಿ ಮತ್ತು ನಾಯಕ. ಅವರ ಅಡಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಅನ್ಯಾಯವನ್ನು ಸರಿಪಡಿಸಲಾಗಿದೆ ಮತ್ತು ನಮ್ಮ ಸಹಜ ಮೈತ್ರಿಯನ್ನು ಪುನಶ್ಚೇತನಗೊಳಿಸಿದ್ದೇವೆ" ಎಂದರು.

ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಸಭೆ

ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಸಭೆ

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ. ಪಿ. ನಡ್ಡಾ ಶಿಂಧೆ ಮತ್ತು ಫಡ್ನವೀಸ್ ಅವರೊಂದಿಗೆ ಸಂಪುಟ ವಿಸ್ತರಣೆ ಮತ್ತು ಬಿಜೆಪಿ ಮತ್ತು ಶಿವಸೇನೆ ನಡುವೆ ಸಂಪುಟ ಸ್ಥಾನಗಳನ್ನು ವಿಭಜಿಸುವ ಸೂತ್ರದ ಕುರಿತು ಸಭೆ ನಡೆಸಿದರು.
ದೆಹಲಿಯ ಜೆ. ಪಿ. ನಡ್ಡಾ ನಿವಾಸದಲ್ಲಿ ಸುಮಾರು 40 ನಿಮಿಷಗಳ ಕಾಲ ಸಭೆ ನಡೆಯಿತು.

ಮೂಲಗಳ ಪ್ರಕಾರ, ಬಿಜೆಪಿಯು ಆರಂಭಿಕ ಮಾತುಕತೆಯಲ್ಲಿ ಶಿಂಧೆ ಬಣಕ್ಕೆ 11 ಸಚಿವ ಸ್ಥಾನಗಳನ್ನು ನೀಡಿದ್ದು, 29 ಸಚಿವರನ್ನು ಪಕ್ಷದಿಂದ ನೀಡಲಾಗುವುದು ಎಂದು ಸೂಚಿಸಿದೆ.

ಗೃಹ ಇಲಾಖೆ ಮೇಲೆ ಎಲ್ಲರ ಕಣ್ಣು

ಗೃಹ ಇಲಾಖೆ ಮೇಲೆ ಎಲ್ಲರ ಕಣ್ಣು

ಶಿವಸೇನೆಯ ಏಕನಾಥ್ ಶಿಂಧೆ ಬಣವು ಗೃಹ ಇಲಾಖೆಯನ್ನು ಮುಖ್ಯಮಂತ್ರಿ ಬಳಿಯೇ ಉಳಿಸಿಕೊಳ್ಳುವ ಒಲವು ಹೊಂದಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿಯಾದ ನಂತರ ದೆಹಲಿಗೆ ಮೊದಲ ಬಾರಿ ಭೇಟಿ ನೀಡಿದರು. ಸರ್ಕಾರ ರಚನೆಗೂ ಮುನ್ನವೇ ಗೃಹ ಇಲಾಖೆ, ಲೋಕೋಪಯೋಗಿ ಇಲಾಖೆ ಸಚಿವ ಸ್ಥಾನಕ್ಕೆ ಬಿಜೆಪಿ-ಶಿಂಧೆ ಬಣದ ನಡುವೆ ಪೈಪೋಟಿ ಇದೆ ಎನ್ನಲಾಗಿತ್ತು.

ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಶಿಂಧೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿತ್ತು. ಈಗ ಗೃಹ ಇಲಾಖೆ ಬಿಜೆಪಿ ಪಾಲಾಗುತ್ತಾ? ಇಲ್ಲ ಶಿಂಧೆ ಬಣದ ಪಾಲಾಗುತ್ತಾ ಎಂದು ನೋಡಬೇಕಿದೆ.

Recommended Video

  ಭಾರತದಲ್ಲಿ 5 ವರ್ಷಗಳಾದ್ಮೇಲೆ ಪೆಟ್ರೋಲ್ ಸಿಗೋದಿಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ | OneIndia Kannada
  ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಎಂದ ಶಿಂಧೆ

  ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಎಂದ ಶಿಂಧೆ

  ಶಿವಸೇನಾ ನಾಯಕ ಉದ್ಧವ್ ಠಾಕ್ರೆ ತಮ್ಮ ಪಕ್ಷದಲ್ಲಿ ಬಂಡಾಯ ಎದ್ದ ನಂತರ ರಾಜೀನಾಮೆ ನೀಡಿದರು. ಜೂನ್ 30 ರಂದು ಹೊಸ ಸರ್ಕಾರದ ಮುಖ್ಯಮಂತ್ರಿಯಾಗಿ ಶಿಂಧೆ ಮತ್ತು ಉಪಮುಖ್ಯಮಂತ್ರಿಯಾಗಿ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದರು.

  ಶಿಂಧೆ ಬಂಡಾಯದ ನೇತೃತ್ವ ವಹಿಸಿದ್ದರು ಮತ್ತು ಕೆಲವು ಸ್ವತಂತ್ರ ಶಾಸಕರು ಸೇರಿಕೊಂಡರು. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಂಧೆ ಈ ಹಿಂದೆ ಹೇಳಿದ್ದರು.

  English summary
  Maharashtra CM Eknath Shinde Promised Achchedin To The People Of State
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X