ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಚುನಾವಣೆ: ಮಜವಾಗಿವೆ ಚುನಾವಣಾ ಚಿಹ್ನೆಗಳು

|
Google Oneindia Kannada News

ಮುಂಬೈ, ಅಕ್ಟೋಬರ್ 19: ನಮ್ಮಲ್ಲಿ ಚುನಾವಣಾ ಚಿಹ್ನೆಗಳು ಎಷ್ಟಿವೆ? ಆಯಾ ರಾಜ್ಯಗಳಲ್ಲಿ ಗುರುತಿಸಿಕೊಂಡಿರುವಂತೆ ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷಗಳು ತಮ್ಮದೇ ಕಾಯಂ ಚಿಹ್ನೆ ಹೊಂದಿರುತ್ತವೆ. ಇನ್ನು ಪಕ್ಷೇತರವಾಗಿ ಸ್ಪರ್ಧಿಸುವವರು ತಮಗೆ ಇಷ್ಟವಾಗುವ ಕೆಲವು ಚಿಹ್ನೆಗಳನ್ನು ಕೋರಿರುತ್ತಾರೆ. ಅವುಗಳಲ್ಲಿ ಒಂದನ್ನು ಚುನಾವಣಾ ಆಯೋಗ ನೀಡುತ್ತದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿನ ಪಕ್ಷೇತರ ಅಭ್ಯರ್ಥಿಗಳು ಹಾಗೂ ಹೊಸ ಪಕ್ಷಗಳ ಚುನಾವಣಾ ಚಿಹ್ನೆಗಳನ್ನು ನೋಡಿದರೆ ತಮಾಷೆಯೂ ಎನಿಸಬಹುದು.

ಏಕೆಂದರೆ ಈ ಚುನಾವಣೆಯಲ್ಲಿ ಚಿತ್ರವಿಚಿತ್ರವಾದ ಚಿಹ್ನೆಗಳನ್ನು ನೀಡಲಾಗಿದೆ. ಅಂದಹಾಗೆ, ಇವು ನಾವು ನೋಡಿರುವ ವಸ್ತುಗಳೇ ಆಗಿವೆ.

ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಮತ್ತೆ ಬಿಜೆಪಿ ಮೈತ್ರಿಗೆ ಜಯಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಮತ್ತೆ ಬಿಜೆಪಿ ಮೈತ್ರಿಗೆ ಜಯ

ಬಿಜೆಪಿಯ ಕಮಲ, ಶಿವಸೇನಾದ ಬಿಲ್ಲು-ಬಾಣ, ಕಾಂಗ್ರೆಸ್‌ನ ಕೈ, ಎನ್‌ಸಿಪಿಯ ಗಡಿಯಾರ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರೈಲ್ವೆ ಎಂಜಿನ್, ಆಮ್ ಆದ್ಮಿ ಪಕ್ಷದ ಪೊರಕೆ, ಎಸ್‌ಪಿಯ ಸೈಕಲ್ ಮುಂತಾದವು ಜನರಿಗೆ ಚಿರಪರಿಚಿತವಾಗಿರುವ ಚಿಹ್ನೆಗಳು.

ಆದರೆ, ಇವಿಎಂನಲ್ಲಿ ಇವುಗಳಲ್ಲದೆ ವೈವಿಧ್ಯಮಯವಾದ ಚಿಹ್ನೆಗಳೂ ಇರಲಿವೆ. ಇವು ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಆಯೋಗದಿಂದ ಪಡೆದುಕೊಂಡಿರುವಂತಹವು. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದಂತೆ ಈ ಬಾರಿ ಯಾವ ಅಭ್ಯರ್ಥಿಗೂ ಪ್ರಾಣಿಗಳ ಚಿಹ್ನೆ ನೀಡಿಲ್ಲ. ಪ್ರಾಣಿಗಳ ಚಿಹ್ನೆಯು ಪ್ರಾಣಿಗಳ ಮೇಲೆ ಕ್ರೌರ್ಯಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬೇಬಿ ವಾಕರ್, ಟಿವಿ ರಿಮೋಟ್

ಬೇಬಿ ವಾಕರ್, ಟಿವಿ ರಿಮೋಟ್

ಅಲ್ಮೆರಾ, ಸೋಫಾ, ಸಿಸಿಟಿವಿ ಕ್ಯಾಮೆರಾ, ಮಂಚ, ಸ್ಟೂಲ್, ಗ್ರಾಮಾಫೋನ್, ರೂಮ್ ಕೂಲರ್, ಫೋನ್ ಚಾರ್ಜರ್, ಟಿವಿ ರಿಮೋಟ್, ಕಂಪ್ಯೂಟರ್, ಎ.ಸಿ, ಡಿಶ್ ಆಂಟೆನಾ, ಟ್ಯೂಬ್‌ಲೈಟ್, ಬೇಬಿ ವಾಕರ್, ಟಿವಿ, ಲಕೋಟೆಗಳು ಈ ಪಟ್ಟಿಯಲ್ಲಿವೆ.

ಪ್ರಚಾರ ಮುಗಿಸಿ ಡಾನ್ಸ್ ಮಾಡಿದ ಅಸಾದುದ್ದಿನ್ ಓವೈಸಿ, ವಿಡಿಯೋ ವೈರಲ್ಪ್ರಚಾರ ಮುಗಿಸಿ ಡಾನ್ಸ್ ಮಾಡಿದ ಅಸಾದುದ್ದಿನ್ ಓವೈಸಿ, ವಿಡಿಯೋ ವೈರಲ್

ದಿನಬಳಕೆಯ ವಸ್ತುಗಳು

ದಿನಬಳಕೆಯ ವಸ್ತುಗಳು

ಜತೆಗೆ, ಕೋಟ್, ಫ್ರಾಕ್, ಚಪ್ಪಲಿಗಳು, ಶೂ, ವಾಕಿಂಗ್ ಸ್ಟಿಕ್, ಬ್ರೀಫ್‌ಕೇಸ್, ಪೆನ್ ಡ್ರೈವ್, ಬಳೆಗಳು, ಸ್ಟೆತಸ್ಕೋಪ್, ಲ್ಯಾಪ್‌ಟಾಪ್, ಕೀ, ಉಂಗುರ, ವಜ್ರ, ಸಿರೆಂಜ್, ನೆಕ್ಲೇಸ್, ಟೊಪ್ಪಿ, ಬೆಲ್ಟ್ ಮುಂತಾದ ದಿನಬಳಕೆಯ ವಸ್ತುಗಳೂ ಇವೆ.

ಇಷ್ಟೇ ಅಲ್ಲ, ಅಡುಗೆಮನೆಗೂ ಈ ಚಿಹ್ನೆಗಳೂ ಕಾಲಿಟ್ಟಿವೆ. ಕತ್ತರಿ, ಗ್ಯಾಸ್ ಸ್ಟವ್, ಗ್ಯಾಸ್ ಸಿಲಿಂಡರ್, ಕಪ್ ಮತ್ತು ಸಾಸರ್, ವಾಟರ್ ಟ್ಯಾಂಕ್, ಬೆಂಕಿಪೊಟ್ಟಣ, ಕೊಡಪಾನ, ಬಕೆಟ್, ಕೆಟಲ್ ಇಲ್ಲಿವೆ.

ಹಣ್ಣು ಹಂಪಲು, ತರಕಾರಿ

ಹಣ್ಣು ಹಂಪಲು, ತರಕಾರಿ

ಹಾಗೆಯೇ ಕೆಲವು ಚಿಹ್ನೆಗಳು ಮತದಾರರ ಬಾಯಲ್ಲಿ ನೀರೂರಿಸಿದರೂ ಅಚ್ಚರಿಯಿಲ್ಲ. ತಟ್ಟೆ ತುಂಬಾ ಆಹಾರ, ಐಸ್ ಕ್ರೀಮ್, ಬ್ರೆಡ್, ಬಿಸ್ಕತ್, ಸೇಬು, ದ್ರಾಕ್ಷಿ, ಹಣ್ಣಿನ ಬುಟ್ಟಿ, ಕಲ್ಲಂಗಡಿ, ಹಲಸಿನಹಣ್ಣು ಮುಂತಾದವುಗಳ ಜತೆಗೆ ಬೆಂಡೆಕಾಯಿ, ಹಸಿ ಮೆಣಸು ಮತ್ತು ಹೂಕೋಸಿನಂತಹ ತರಕಾರಿಗಳೂ ಇವೆ.

ಉಯ್ಯಾಲೆ, ಬೈನಾಕುಲರ್, ಫುಟ್‌ಬಾಲ್, ಗಾಳಿಪಟ, ಬ್ಯಾಟ್, ಬ್ಯಾಟ್ಸ್‌ಮನ್, ಫುಟ್‌ಬಾಲ್ ಆಟಗಾರ, ಲುಡೊ, ಹೆಲ್ಮೆಟ್, ವಿಷಲ್, ಜಾವೆಲಿನ್ ಎಸೆತ, ಬಲೂನ್‌ನಂತಹ ಕ್ರೀಡೆಯ ಚಿಹ್ನೆಗಳು ಕೂಡ ಇವಿಎಂನಲ್ಲಿರಲಿವೆ.

ಕೃಷಿ-ಸಂಗೀತ-ತಂತ್ರಜ್ಞಾನ

ಕೃಷಿ-ಸಂಗೀತ-ತಂತ್ರಜ್ಞಾನ

ಟಿಲ್ಲರ್, ಕಬ್ಬು ಬೆಳೆಗಾರ, ಟ್ರಕ್, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ತೆನೆ ಹೊತ್ತಿರುವ ಮಹಿಳೆ, ತೆಂಗಿನ ತೋಟ, ಡ್ರಿಲ್ ಮೆಷಿನ್, ಸ್ಪ್ಯಾನರ್, ದೋಣಿ, ಎತ್ತಿನಗಾಡಿ, ಟೈರ್, ರೋಡ್ ರೋಲರ್, ಕ್ರೇನ್, ಹಡಗು, ಹೆಲಿಕಾಪ್ಟರ್, ಮೈಕ್, ವಯೋಲಿನ್, ಕೊಳಲು, ಹಾರ್ಮೋನಿಯಂ, ಸ್ಲೇಟ್, ಕಪ್ಪು ಹಲಗೆ, ವಿದ್ಯುತ್ ಕಂಬ, ಬೆಂಚ್, ಪೆಟ್ಟಿಗೆ ಮುಂತಾದ ಕೃಷಿ, ಸಂಗೀತ, ತಂತ್ರಜ್ಞಾನ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಚಿಹ್ನೆಗಳು ಕೂಡ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿದೆ.

English summary
Maharashtra Assembly Elections 2019: Election Commission has issued different and weird symbols for candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X