• search

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ, ಆದೇಶ ಉಲ್ಲಂಘಿಸಿದರೆ ಜೈಲು

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮುಂಬೈ, ಜೂನ್ 23 : ಜನರ ಪ್ರತಿಭಟನೆ, ಕೋರ್ಟ್ ನಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು, ಮನಕುಲಕ್ಕೇ ಮಾರಕವಾಗಿರುವ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಮತ್ತು ಥರ್ಮೋಕಾಲ್ ಅನ್ನು ಇಡೀ ರಾಜ್ಯಾದ್ಯಂತ ನಿಷೇಧಿಸುವ ದಿಟ್ಟ ನಿರ್ಧಾರವನ್ನು ಮಹಾರಾಷ್ಟ್ರ ಸರಕಾರ ಶನಿವಾರ ತೆಗೆದುಕೊಂಡಿದೆ.

  ಈ ಆದೇಶವನ್ನು ಧಿಕ್ಕರಿಸಿ ಪ್ಲಾಸ್ಟಿಕ್ ಅನ್ನು ಬಳಸಿದರೆ 5,000ದಿಂದ 25 ಸಾವಿರ ರುಪಾಯಿಯವರೆಗೆ ದಂಡ ವಿಧಿಸಲಾಗುವುದು. ಮೊದಲ ಬಾರಿ ಅಪರಾಧ ಎಸಗಿದರೆ 5 ಸಾವಿರ, ಎರಡನೇ ಬಾರಿ ಎಸಗಿದರೆ 10 ಸಾವಿರ ದಂಡ ಮತ್ತು ಮೂರನೇ ಬಾರಿ ಅಪರಾಧ ಎಸಗಿದರೆ 25 ಸಾವಿರ ರು. ಕಟ್ಟಲೇಬೇಕು. ದಂಡ ಕಟ್ಟುವುದು ತಪ್ಪಿದರೆ 3 ತಿಂಗಳ ಜೈಲು ವಾಸ ಅನುಭವಿಸಬೇಕಾಗುತ್ತದೆ.

  ಕೊಪ್ಪಳದಲ್ಲಿ ನಗರಸಭೆಯಿಂದ ಅಂಗಡಿಗಳ ಮೇಲೆ ದಾಳಿ: 30 ಕೆ.ಜಿ. ಪ್ಲಾಸ್ಟಿಕ್ ವಶ

  ಈ ರಾಜ್ಯದ ಜನತೆ 'ಪ್ಲಾಸ್ಟಿಕ್ ನಿಷೇಧ' ಅಭಿಯಾನದಲ್ಲಿ ಸರಕಾರದ ಕೈಹಿಡಿದರೆ ಮಾತ್ರ ನಾವು ಯಶಸ್ವಿಯಾಗುತ್ತೇವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ರಾಜ್ಯ ಪರಿಸರ ಸಚಿವ ರಾಮದಾಸ್ ಕದಂ ಅವರು ಕೂಡ ರಾಜ್ಯದ ಈ ನಿಲುವನ್ನು ಸ್ವಾಗತಿಸಿದ್ದು, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿರುವ 18ನೇ ರಾಜ್ಯ ಮಹಾರಾಷ್ಟ್ರ ಆಗಲಿದೆ ಎಂದು ಹೇಳಿದ್ದಾರೆ.

  Maharashtara government bans plastic

  ಸಂಗ್ರಹಿಸಿ, ಪರಿಷ್ಕರಿಸಿ, ಮರುಬಳಕೆ ಮಾಡಲು ಅಸಾಧ್ಯವಾಗುವಂಥ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ಆದರೆ, ಇವುಗಳಿಗೆ ಪ್ರತಿಯಾಗಿ ಜನರಿಗೆ ಬಳಸಲು ಅನುಕುಲವಾಗುವಂಥ ವಸ್ತುಗಳನ್ನು ಇನ್ನೂ ಜಾರಿಗೆ ತಂದಿಲ್ಲ. ನಿಷೇಧಿಸಲಾಗ ಪ್ಲಾಸ್ಟಿಕ್ ಇನ್ನೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವುದರಿಂದ, ಪರ್ಯಾಯ ಮಾರ್ಗ ಹುಡುಕುವವರೆಗೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಫಡ್ನವೀಸ್.

  ಪರಿಸರ ರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿ

  ಚರಂಡಿಗಳಲ್ಲಿ ನೀರಿನ ಹರಿವಿಗೆ ಪ್ಲಾಸ್ಟಿಕ್ ಮತ್ತು ಥರ್ಮೋಕಾಲ್ ನಂಥ ಪದಾರ್ಥಗಳು ಅಡ್ಡಿಯಾಗುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದರಿಂದ ಕಳೆದ ಆಗಸ್ಟ್ ನಲ್ಲಿಯೇ ಮಹಾರಾಷ್ಟ್ರ ಸರಕಾರ ಈ ನಿರ್ಧಾರ ತಳೆದಿತ್ತು. ಈ ನಿರ್ಧಾರ ರಾಜ್ಯದ ಭವಿಷ್ಯದ ಪಥವನ್ನೇ ಬದಲಿಸಲಿದೆ. ಇದು ಇಡೀ ವಿಶ್ವಕ್ಕೇ ಮಾದರಿಯಾಗಲಿದೆ ಯುವ ಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ಸರಕಾರದ ನಿರ್ಧಾರವನ್ನು ಹೊಗಳಿದ್ದಾರೆ.

  'ಹಾಲು ಮಾರಾಟಕ್ಕೆ ಪ್ಲಾಸ್ಟಿಕ್ ಬದಲು ಗಾಜಿನ ಬಾಟಲಿ ಬಳಸಿ'

  ಕರ್ನಾಟಕದಲ್ಲಿ ಕೂಡ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಲಾಗಿದೆಯಾದರೂ ಕಟ್ಟುನಿಟ್ಟಾಗಿ ಇನ್ನೂ ಜಾರಿಯಾಗಿಲ್ಲ. ಹೂವು, ಹಣ್ಣು ಮಾರುವವರು ಅವ್ಯಾಹತವಾಗಿ ಇದನ್ನು ಬಳಸುತ್ತಲೇ ಇದ್ದಾರೆ, ಗ್ರಾಹಕರು ಕೂಡ ಒತ್ತಾಯ ಮಾಡಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿಯೇ ನೀಡಬೇಕೆಂದು ದುಂಬಾಲು ಬೀಳುತ್ತಾರೆ. ಅಲ್ಲದೆ, ಮಾರುಕಟ್ಟೆಗೆ ಹೋಗುವಾಗ ಕೈಚೀಲ ತೆಗೆದುಕೊಂಡು ಹೋಗಬೇಕು ಎಂಬ ಕನಿಷ್ಠ ಜ್ಞಾನವೂ ಹಲವರಿಗಿಲ್ಲದಿರುವುದರಿಂದ ಕರ್ನಾಟಕದಲ್ಲಿ ಪ್ಲಾಸ್ಟಿಕ್ ನಿಷೇಧ ಸಂಪೂರ್ಣವಾಗಿ ಸಾಧ್ಯವಾಗಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Maharashtra government has imposed complete ban on plastic, which cannot be collected, regulated and recycled, and thermocols.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more