ಮ್ಯಾಗಿ ಪರ ಪ್ರಚಾರ, ಮಾಧುರಿ, ಬಿಗ್ ಬಿ, ಪ್ರೀತಿ ಮೇಲೆ ಕೇಸ್

ಬಾರಾಬಂಕಿ, ಮೇ 30: ನೆಸ್ಲೆ ಸಂಸ್ಥೆಯ 2 ಮಿನಿಟ್ ನ ರೆಡಿಮೇಡ್ ಫುಡ್ ಮ್ಯಾಗಿ ಉತ್ಪನ್ನಗಳ ಪರ ಪ್ರಚಾರ ನಡೆಸಿದ್ದಕ್ಕೆ ನೋಟಿಸ್ ಪಡೆದಿದ್ದ ಮಾಧುರಿ ದೀಕ್ಷಿತ್ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಜೊತೆಗೆ ನಟ ಅಮಿತಾಬ್ ಬಚ್ಚನ್, ನಟಿ ಪ್ರೀತಿ ಜಿಂಟಾ ವಿರುದ್ಧ ಕೂಡಾ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಒಟ್ಟಾರೆ ನೆಸ್ಲೆ ಸಂಸ್ಥೆ ಸೇರಿ ಐವರನ್ನು ಬಾರಾಬಂಕಿ ಕೋರ್ಟಿಗೆ ಎಳೆಯಲಾಗಿದೆ.

ಉತ್ತರಪ್ರದೇಶದ ಆಹಾರ ಸುರಕ್ಷತಾ ಮಾನದಂಡಗಳ ವಿಚಾರದಲ್ಲಿ ನೆಸ್ಲೆ ಇಂಡಿಯಾದ ವಿರುದ್ಧ ಬಾರಾಬಂಕಿಯ ಸ್ಥಳೀಯ ನ್ಯಾಯಾಲಯದಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ. [ಮ್ಯಾಗಿ ಪರ ಪ್ರಚಾರ, ಮಾಧುರಿಗೆ ಬಂತು ಗ್ರಹಚಾರ!]

ಮ್ಯಾಗಿ ಬ್ರಾಂಡ್ ಉತ್ಪನ್ನಗಳನ್ನು ಪ್ರಚಾರ ಮತ್ತು ಉತ್ತೇಜನ ಮಾಡಿದುದಕ್ಕಾಗಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿಯರಾದ ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಜಿಂಟಾ ಅವರ ವಿರುದ್ಧ ಕೂಡಾ ಪ್ರಕರಣ ದಾಖಲಾಗಿದೆ. ಸ್ಥಳೀಯ ವಕೀಲರೊಬ್ಬರು ಈ ಮೂವರು ಸಿನಿ ತಾರೆಯರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. [ಕವನ ಹಂಚಿದ ಬಿಗ್ ಬಿ ಅಮಿತಾಬ್ ಗೆ 'ಬಿಗ್' ಶಾಕ್]

ಎಫ್‌ಎಸ್‌ಡಿಎ ಆಯುಕ್ತ ಪಿ.ಪಿ.ಸಿಂಗ್‌ರವರ ಅನುಮತಿ ಮೇರೆಗೆ ಇಲ್ಲಿನ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೆಸ್ಲೆ ಇಂಡಿಯಾ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲಾಗಿದೆ ಎಂದು ಬಾರಾಬಂಕಿಯ ಆಹಾರ ಸುರಕ್ಷತಾ ಅಧಿಕಾರಿ ವಿ.ಕೆ.ಪಾಂಡೆ ತಿಳಿಸಿದ್ದಾರೆ.

Maggi noodles row: Case lodged against Nestle, 5 other

ನೆಸ್ಲೆ ನಗಲ್ ಕಲನ್ ಕೈಗಾರಿಕಾ ಪ್ರದೇಶದ ಘಟಕ (ಹಿಮಾಚಲ ಪ್ರದೇಶದ ವುನಾ, ಹರೊಲಿ), ದಿಲ್ಲಿ ಮೂಲದ ನೆಸ್ಲೆ ಇಂಡಿಯಾ ಲಿಮಿಟೆಡ್, ಬಾರಾಬಂಕಿಯಲ್ಲಿನ ಈಸಿ ಡೇ ಅಂಗಡಿ ಮಳಿಗೆ ಮತ್ತು ದಿಲ್ಲಿ ಮೂಲದ ಈಸಿ ಡೇ ಕಂಪೆನಿ, ಕಂಪೆನಿಯ ಎಫ್‌ಎಂಸಿಜಿ ಮ್ಯಾನೇಜರ್‌ಗಳಾದ ಮೋಹನ್ ಗುಪ್ತಾ ಮತ್ತು ಶಬಾಬ್ ಆಲಂ ವಿರುದ್ಧವೂ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ.

ನೆಸ್ಲೆ ಇಂಡಿಯಾದ ಮ್ಯಾಗಿ ಉತ್ಪನ್ನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮೊನೊಸೋಡಿಯಂ ಗ್ಲುಟಮೇಟ್ ಮತ್ತು ಸತುವಿನ ಅಂಶಗಳು ಮಾದರಿ ಪರೀಕ್ಷೆಯ ಸಂದರ್ಭದಲ್ಲಿ ಕಂಡುಬಂದಿತ್ತು.

Maggi

ಬಾರಾಬಂಕಿಯಲ್ಲಿರುವ ಈಸೀ ಡೇ ಅಂಗಡಿ ಮಳಿಗೆಯಿಂದ ಮ್ಯಾಗಿಯ ಮಾದರಿ ಪ್ಯಾಕೆಟ್‌ಗಳನ್ನು ಎಫ್‌ಎಸ್‌ಡಿಎ ಅಧಿಕಾರಿಗಳು ಸಂಗ್ರಹಿಸಿದ್ದು, ಪ್ರಯೋಗಾಲಯದಲ್ಲಿ ಪರೀಕ್ಷೆಗೆಂದು ಕಳುಹಿಸಿದ್ದರು. ಮ್ಯಾಗಿ ಉತ್ಪನ್ನಗಳಲ್ಲಿ ಸತುವಿನ ಅಂಶ 17 ಪಟ್ಟು ಅಧಿಕ ಇತ್ತು ಎನ್ನಲಾಗಿದೆ.

ಮ್ಯಾಗಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಂಡಿಜಿ ಹಾಗೂ ಸೀಸ ಇರುವುದು ಪತ್ತೆಯಾಗಿದ್ದರಿಂದ ಉತ್ತರ ಪ್ರದೇಶದ ಎಫ್ ಡಿಎ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿವರಣೆ ಕೋರಿ ನೆಸ್ಲೆ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+