Get Updates
Get notified of breaking news, exclusive insights, and must-see stories!

ಕಂಗನಾಳ ಕೇಶ ವಿನ್ಯಾಸಕನ ಮೇಲೆ ಅತ್ಯಾಚಾರದ ಆರೋಪ

ಮುಂಬೈ, ಸೆಪ್ಟೆಂಬರ್ 30: ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಯ ಮಾಡಿಕೊಂಡು, ಅಪಾಪ್ರ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹೇರ್ ಸ್ಟೈಲಿಸ್ಟ್ ಬ್ರ್ಯಾಂಡನ್ ಅಲಿಸ್ಟರ್ ಡಿ ಗೀ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಾಲಿವುಡ್ ನಟಿ ಕಂಗನಾಳ ಹೇರ್ ಸ್ಟೈಲಿಸ್ಟ್ ಗೀ ಅವರು ದಕ್ಷಿಣ ಆಫ್ರಿಕಾದ ನಿವಾಸಿಯಾಗಿದ್ದಾರೆ. ಸದ್ಯ ಕಂಗನಾ ಅಭಿನಯದ ಬಹು ನಿರೀಕ್ಷೆಯ ಚಿತ್ರ ಮಣಿಕರ್ಣಿಕಾದ ಶೂಟಿಂಗ್ ನಲ್ಲಿ ನಿರತರಾಗಿದ್ದರು. ಶೂಟಿಂಗ್ ಸೆಟ್ ಗೆ ಬಂದ ಪೊಲೀಸರು ಗೀ ಅವರನ್ನು ಬಂಧಿಸಿದ್ದಾರೆ.

42 ವರ್ಷದ ಬ್ರ್ಯಾಂಡನ್ ಅವರ POCSO ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 03ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕಂಗನಾ ಮುಂದಿನ ಚಿತ್ರ ಮಣಿಕರ್ಣಿಕಾ ಚಿತ್ರದ ಟ್ರೈಲರ್ ಅಕ್ಟೋಬರ್ ಮೊದಲ ಬಾರಿಗೆ ಬಿಡುಗಡೆಯಾಗಲಿದೆ.

Kangana Ranauts hairstylist arrested for raping minor

ಸದ್ಯದ ಚಿತ್ರದ ಚಿತ್ರೀಕರಣ ಮುಂಬೈ ಸುತ್ತಾ ಮುತ್ತಾ ಶೂಟಿಂಗ್ ನಡೆಸಲಾಗುತ್ತಿತ್ತು. ಕೇಶ ವಿನ್ಯಾಸಕ ಬ್ರ್ಯಾಂಡನ್ ಶೂಟಿಂಗ್ ನಲ್ಲಿರುವ ಬಗ್ಗೆ ಮಾಹಿತಿ ಪಡೆದ ಖಾರ್ ನ ಪೊಲೀಸರು, ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಅನೇಕ ಹೇರ್ ಸ್ಟೈಲ್ ಶೋಗಳಲ್ಲಿ ಕೂಡ ಪಾಲ್ಗೊಳ್ಳುವ ಬ್ರ್ಯಾಂಡನ್, ಮುಂಬೈ, ಗೋವಾ ಹಾಗೂ ಅನೇಕ ದೇಶಗಳಲ್ಲಿ ಸುತ್ತಾಡುತ್ತಿರುತ್ತಾರೆ. ಆನ್ಲೈನ್ ಡೇಟಿಂಗ್ ಸೈಟ್ ನ ಮೂಲಕ ಬ್ರ್ಯಾಂಡನ್ ಹಾಗೂ 16 ವರ್ಷ ವಯಸ್ಸಿನ ಬಾಲಕನ ಪರಿಚಯವಾಗುತ್ತದೆ.

ನಿರ್ದೇಶಕಿ ಕಂಗನಾರಿಂದ ಇನ್ನೆಷ್ಟು ಜನರಿಗೆ ತೊಂದರೆ ಆಗುತ್ತೋ.?

ಡೇಟಿಂಗ್ ಆಪ್ ನಲ್ಲಿ ವಯಸ್ಸು 18 ದಾಟಿದೆ ಎಂದು ಸುಳ್ಳು ಹೇಳಿ, ಬ್ರ್ಯಾಂಡನ್ ಸೇರಿದಂತೆ ಅನೇಕ ಪುರುಷರ ಜತೆ ಸಂಬಂಧ ಬೆಳೆಸಿಕೊಂಡಿದ್ದ. ಒಮ್ಮೆ ಕೆಲ ಪುರುಷರ ಜತೆ ಮಸ್ತಿಯಲ್ಲಿ ತೊಡಗಿದ್ದಾಗ ಹುಡುಗನ ತಾಯಿಗೆ ಈ ಬಗ್ಗೆ ತಿಳಿದು ಬಂದಿದೆ. ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದ್ದು, ಶಾಲಾ ಶಿಕ್ಷಕ, ಉದ್ಯಮಿಗಳು ಸೇರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+