ಜಿಯಾಖಾನ್ ಸಾವಿನ ಪ್ರಕರಣ, ಎಸ್ಐಟಿ ತನಿಖೆ ಇಲ್ಲ: ಹೈಕೋರ್ಟ್
ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು, ಕೊಲೆಯಾಗಿಲ್ಲ ಎಂದು ಸಿಬಿಐ ಹೇಳಿತ್ತು. ಆದರೆ, ಇದನ್ನು ಪ್ರಶ್ನಿಸಿ ಎಸ್ ಐಟಿ ತನಿಖೆಗೆ ಮನವಿ ಮಾಡಿದ್ದ ರಬಿಯಾ ಖಾನ್ ಗೆ ಹಿನ್ನಡೆಯಾಗಿದೆ.
ಮುಂಬೈ, ಫೆಬ್ರವರಿ 09: ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು, ಕೊಲೆಯಾಗಿಲ್ಲ ಎಂದು ಸಿಬಿಐ ಹೇಳಿತ್ತು. ಆದರೆ, ಇದನ್ನು ಪ್ರಶ್ನಿಸಿ ಎಸ್ ಐಟಿ ತನಿಖೆಗೆ ಮನವಿ ಮಾಡಿದ್ದ ಜಿಯಾಖಾನ್ ಅವರ ತಾಯಿ ರಬಿಯಾ ಖಾನ್ ಗೆ ಹಿನ್ನಡೆಯಾಗಿದೆ.
ಬಾಂಬೆ ಹೈಕೋರ್ಟ್ ಅರ್ಜಿಯನ್ನು ಗುರುವಾರ ತಿರಸ್ಕರಿಸಿ, ವಿಶೇಷ ತನಿಖಾ ತಂಡದ ತನಿಖೆ ಅನಗತ್ಯ ಎಂದಿದೆ. ಎಸ್ ಐಟಿ ತನಿಖೆ ಹಾಗೂ ಎಫ್ ಬಿಐ ನೆರವು ಏಕೆ ಬೇಕೆ ಎಂಬುದಕ್ಕೆ ಬಲವಾದ ಸಾಕ್ಷಿಯನ್ನು ರಬಿಯಾ ಒದಗಿಸಬೇತ್ತು.

ಈಗ ಬಲವಾದ ಸಾಕ್ಷಿಯನ್ನು ಬ್ರಿಟಿಷ್ ತಜ್ಞರಿಂದ ಪಡೆಯಲಾಗಿತ್ತು. ಈ ಫೊರೆನ್ಸಿಕ್ ವರದಿ ಮಹತ್ವದ ಪಾತ್ರವಹಿಸಲಿದ್ದು, ಆತ್ಮಹತ್ಯೆಯಲ್ಲ ಎಂಬುದನ್ನು ಸಾಬೀತುಪಡಿಸಬಹುದಾಗಿತ್ತು. ಆದರೆ, ಈ ಸಾಕ್ಷಿಯನ್ನು ಹೈಕೋರ್ಟ್ ಪರಿಗಣಿಸದೆ ಸಿಬಿಐ ವರದಿಯೇ ಅಂತಿಮ ಎಂದಿದೆ.












Click it and Unblock the Notifications