ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತು: ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ

By Mahesh
|
Google Oneindia Kannada News

ಮುಂಬೈ, ಮೇ.19: ಸಮಾಜದ ಕಟ್ಟುಪಾಡು, ಕಾನೂನಿನ ತೊಡರುಗಳ ನಡುವೆ "ಮದುವೆಯಾಗಲು ನನಗೊಂದು ಗಂಡು ಬೇಕು" ಎಂಬ ಜಾಹೀರಾತು ನೀಡುವಲ್ಲಿ ಹರೀಶ್ ಅಯ್ಯರ್ ಯಶಸ್ವಿಯಾಗಿದ್ದಾರೆ. ಅಂದ ಹಾಗೆ, ಹರೀಶ್ ಜನಪ್ರಿಯ ಸಲಿಂಗಿಪರ ಹೋರಾಟ ಹಾಗೂ ಎಲಿಜಬಲ್ ವರ.

ಈ ವಿಶಿಷ್ಟ 'ಮ್ಯಾಟ್ರಿಮೊನಿ ಜಾಹೀರಾತು' ನೀಡುವುದು ಭಾರತದಂಥ ದೇಶದಲ್ಲಿ ಸುಲಭವಲ್ಲ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹರೀಶ್ ಅವರು ಕೂಡಾ ಎಲ್ ಜಿಬಿಟಿ ಸಮುದಾಯದ ಸ್ನೇಹಿತರ ಸಲಹೆ ಪಡೆದು ಮದುವೆಯಾಗಳು ನಿರ್ಧರಿಸಿದ್ದಾರೆ. 'ನನ್ನ ಮಗನಿಗೊಂದು ಗಂಡು ಬೇಕಿದೆ' ಎಂದು ಹರೀಶ್ ತಾಯಿ ಅವರು ಜಾಹೀರಾರು ರೆಡಿ ಮಾಡಿಕೊಂಡು ಪ್ರಮುಖ ದಿನಪತ್ರಿಕೆಗಳ ಕಚೇರಿ ಸುತ್ತಿದ್ದಾರೆ.

Groom Wanted for gay,gay breaks social taboo in India, unique matrimony ad

ಅದರೆ, ಹಲವೆಡೆ ಅಪಹಾಸ್ಯಕ್ಕೀಡಾದ ಹರೀಶ್ ಅವರ ತಾಯಿಗೆ ಕೊನೆಗೂ ಮಿಡ್ ಡೇ ಕಚೇರಿ ಬಾಗಿಲು ತೆಗೆದಿದೆ.

ಜಾಹೀರಾತು ಹೀಗಿದೆ:
Seeking 25-40, Well Placed, Animal-Loving, Vegetarian Groom for my son (36, 5'11'') who works with an NGO, Caste No Bar (Though Iyer Preferred)

ಮದುವೆ ಎಂದರೆ ಮನಸು, ಆತ್ಮಗಳ ಸಮ್ಮಿಲನ, ಮಾನವರೆಂದ ಮೇಲೆ ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಎಂಬುದು ನಮ್ಮ ಉದ್ದೇಶ ಹೀಗಾಗಿ ನಮ್ಮಲ್ಲಿ(ಮಿಡ್ ಡೇ) ಈ ಜಾಹೀರಾತು ಪ್ರಕಟಿಸಿದ್ದೇವೆ. ಇದು ಜಾತಿ, ಮತ, ಪಂಥ, ಲಿಂಗ ತಾರತಮ್ಯಗಳನ್ನು ಮೀರಿದ ಘಟನೆ ಎಂದು ಮಿಡ್ ಡೇ ಸಂಪಾದಕ ಸಚಿನ್ ಕಲ್ಬಾಗ್ ಪ್ರತಿಕ್ರಿಯಿಸಿದ್ದಾರೆ.

English summary
It was not easy for him to go ahead with his mother's decision of placing a 'Groom Wanted' matrimony ad on newspaper. Harish Iyer, a well-known gay activist, finally decided to search for a groom for himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X