ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಮತ್ತಿಬ್ಬರು ಡಿಸಿಎಂ: ಮೂಲಗಳಿಂದ ಮಾಹಿತಿ

|
Google Oneindia Kannada News

ಮುಂಬೈ, ಅಕ್ಟೋಬರ್ 31: ಸಾಕಷ್ಟು ಕುತೂಹಲ ಕೆರಳಿಸಿರುವ ಮಹಾರಾಷ್ಟ್ರದ ಸರ್ಕಾರ ರಚನೆಯ ಕಸರತ್ತು ಕೊನೆಗೂ ಒಂದು ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿವೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರನ್ನು ಪೂರ್ಣಾವಧಿಗೆ ಆರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ನಿರ್ಧಾರಕ್ಕೂ ಬಿಜೆಪಿ, ಶಿವಸೇನೆ ಮೈತ್ರಿಕೂಟ ಬಂದಿದೆ ಎನ್ನಲಾಗಿದೆ.

ಶಿವಸೇನೆ ಜತೆ ಬಿಜೆಪಿ ಸೇರಿಯೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ: ಫಡ್ನವೀಸ್ಶಿವಸೇನೆ ಜತೆ ಬಿಜೆಪಿ ಸೇರಿಯೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ: ಫಡ್ನವೀಸ್

ಅಕ್ಟೋಬರ್ 24 ಚುನಾವಣಾ ಫಲಿತಾಂಶ ಹೊರಬಂದರೂ, ಅತಂತ್ರ ವಿಧಾನಸಭೆ ತಲೆದೂರಿದ ಪರಿಣಾಮ ಸರ್ಕಾರ ರಚನೆ ಇನ್ನೂ ಸಾಧ್ಯವಾಗಿಲ್ಲ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ, ಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಇಟ್ಟಿದ್ದರಿಂದ ಮೈತ್ರಪಕ್ಷಗಳ ನಡುವೆ ಕೊಂಚ ಬಿರುಕು ಏರ್ಪಟ್ಟಿತ್ತು.

In Maharshtra Fadnavis To Be CM, 2 Deputies, Sources Said.

ಆದರೆ ಇದೀಗ ಉಭಯ ಪಕ್ಷಗಳೂ ಒಂದು ನಿರ್ಧಾರಕ್ಕೆ ಬಂದಿದ್ದು, ಫಡ್ನವಿಸ್ ಮುಖ್ಯಮಂತ್ರಿಯಾಗಿಯೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಶಿವಸೇನೆಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಸರ್ಕಾರದಲ್ಲಿ ಮಹತ್ವದ ಖಾತೆಗಳನ್ನು ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.

ಸಿಎಂ ಸ್ಥಾನಕ್ಕೆ ಪಟ್ಟು, ಬಿಜೆಪಿ-ಶಿವಸೇನಾ ಮಾತುಕತೆ ಆರಂಭಕ್ಕೆ ಮುನ್ನವೇ ಅಂತ್ಯಸಿಎಂ ಸ್ಥಾನಕ್ಕೆ ಪಟ್ಟು, ಬಿಜೆಪಿ-ಶಿವಸೇನಾ ಮಾತುಕತೆ ಆರಂಭಕ್ಕೆ ಮುನ್ನವೇ ಅಂತ್ಯ

ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲಬಿಜೆಪಿಗೆ ಅನಿವಾರ್ಯವಾಗಿದೆ.

English summary
Maharshtra Assembly Elections 2019: Fadnavis To Be CM, 2 Deputies, Sources Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X