ಡಿಸಿಬಿ ಬ್ಯಾಂಕ್ ಖಾತೆದಾರರ ಎಟಿಎಂಗೆ ಪಿನ್ ಸಂಖ್ಯೆ ಬೇಕಿಲ್ಲ, 'ಆಧಾರ್' ಸಾಕು

Posted By:
Subscribe to Oneindia Kannada

ಮುಂಬೈ,ಏಪ್ರಿಲ್,04: ಯಾವುದೇ ವ್ಯಕ್ತಿ ಒಂದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದು ತುಂಬಾನೇ ವಿರಳ. ಆಗ ಅವರಿಗೆ ಎದುರಾಗುವುದು ಎಟಿಎಂ ಪಿನ್ ನಂಬರ್. ಇದಕ್ಕೆ ಒಂದು ಪರಿಹಾರವನ್ನು ಬ್ಯಾಂಕಿನವರೇ ನೀಡಿದ್ದಾರೆ. ಏನದು ಮುಂದೆ ಸುದ್ದಿ ಓದಿ.

ಖಾತೆದಾರರ ಸಮಸ್ಯೆ ಬಗೆಹರಿಸಲು ಮುಂಬೈನ ಡಿಸಿಬಿ (Development Credit Bank)ಬ್ಯಾಂಕ್ ಆಧಾರ್ ಆಧಾರಿತ ಎಟಿಎಂ ಸೇವೆಯನ್ನು ಮೊದಲ ಬಾರಿ ನೀಡಿದ್ದು, ಇದಕ್ಕೆ ಎಟಿಎಂ ಪಿನ್ ಬೇಕಿಲ್ಲ. ಆಧಾರ್ ಕಾರ್ಡ್ ಇದ್ದರೆ ಆರಾಮವಾಗಿ ಎಟಿಎಂನಿಂದ ಹಣ ತೆಗೆಯಬಹುದು.[ಎಟಿಎಂ ಮಾಹಿತಿ ಕೊಟ್ಟು 28 ಸಾವಿರ ಕಳೆದುಕೊಂಡ್ರು!]

In a first, Development Credit Bank starts Aadhaar based ATM's

ಆಧಾರ್ ಕಾರ್ಡ್ ಚಲಾವಣೆ ಇರುವ ಬ್ಯಾಂಕ್ ಗಳಲ್ಲಿ ಈ ಹೊಸ ನಿಯಮ ಅನ್ವಯವಾಗಲಿದೆ. ದೇಶೀಯ ಬ್ಯಾಂಕ್ ಗಳಲ್ಲಿಯೇ ಮೊದಲ ಆಧಾರ್ ಆಧರಿತ ಎಟಿಎಂ ಸೇವೆ ನೀಡಿದ ಹೆಗ್ಗಳಿಕೆ ಈ ಬ್ಯಾಂಕ್ ಗೆ ಸಲ್ಲುತ್ತದೆ.

ಈ ಸೇವೆ ಯಾರಿಗೆ ಲಭ್ಯವಾಗಲಿದೆ?

ಯಾರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ನಮೂದಿಸಿರುತ್ತಾರೋ ಅಂತಹ ಖಾತೆದಾರರು ಮಾತ್ರ ಈ ಸೇವೆಯನ್ನು ಪಡೆಯಲು ಸಾಧ್ಯ.[ನೀವು ಭಾರತೀಯ ಅಂಚೆ ಗ್ರಾಹಕರಾ? ಈ ಸುದ್ದಿ ಓದಿ]

ಯಾರಿಗೆ ಮೊದಲ ಆದ್ಯತೆ?

ಯಾರು ಡಿಸಿಬಿ (Development Credit Bank) ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುತ್ತಾರೋ ಅಂತಹ ವ್ಯಕ್ತಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಇನ್ನು ಇತರೆ ಬ್ಯಾಂಕ್ ಗಳಲ್ಲಿ ಈ ನಿಯಮ ಜಾರಿಗೆ ಬಂದಿಲ್ಲ.

In a first, Development Credit Bank starts Aadhaar based ATM's

ಕಾರ್ಯ ನಿರ್ವಹಣೆ ಹೇಗೆ ?

* ಮೊದಲು ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಸೇರಿರಬೇಕು.

* ಈ ಸೇವೆಯಲ್ಲಿ ಬ್ಯಾಂಕ್ ನೀಡುವ ಕಾರ್ಡ್ ಬಳಸಬಹುದು. ಇಲ್ಲವಾದಲ್ಲಿ ಆಧಾರ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ಪಡೆಯಬಹುದು.

* ಮೊದಲು ಕಾರ್ಡ್ ಸ್ವೈಪ್ ಮಾಡಿದ ನಂತರ, ಎರಡನೇ ಹಂತದಲ್ಲಿ ಪಿನ್ ಬದಲಿಗೆ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಅಂದರೆ ಎಟಿಎಂ ಮೆಷಿನ್ ನಲ್ಲಿ ಸ್ಕ್ಯಾನರ್ ಮೇಲೆ ಬೆರಳು ಒತ್ತಿದರೆ ಸಾಕಾಗುತ್ತದೆ.[ಆಧಾರ್ ಕಾರ್ಡ್ ಕಳ್ಕೊಂಡ್ರೆ, ಆನ್ ಲೈನಿನಲ್ಲಿ ಪಡ್ಕೊಳ್ಳಿ]

* ಆಧಾರ್ ಆಧಾರಿತ ಎಟಿಎಂಗಳಿಂದ ಗ್ರಾಹಕರಿಗಾಗುವ ವಂಚನೆ ತಪ್ಪಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a first, Development Credit Bank starts Aadhaar based ATM's
Please Wait while comments are loading...