HSBC ಷೇರು ಸಂಸ್ಥೆ ಬಂದ್: 300 ನೌಕರರು ಮನೆಗೆ

hsbc-shuts-down-brokerage-business-india-300-employees-lose-jobs
ಮುಂಬೈ, ಅ.19: ಆರ್ಥಿಕ ಚೇತರಿಕೆ ಕಾಣಲಾರದೆ ಪರಿತಪಿಸುತ್ತಿರುವ ಭಾರತದಲ್ಲಿನ HSBC ಬ್ರೋಕರೇಜ್‌ ಸಂಸ್ಥೆಯು ತನ್ನ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರಿಂದ ದೇಶದಲ್ಲಿ 30 ಕಡೆ ಇರುವ ಶಾಖೆಗಳಲ್ಲಿನ 300 ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ.
Hong Kong and Shanghai Banking Corporation ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ 2008ರ ಮೇ ತಿಂಗಳಲ್ಲಿ ಭಾರತದಲ್ಲಿ 'ಎಚ್‌ಎಸ್‌ಬಿಸಿ ಇನ್ವೆಸ್ಟ್‌ ಡೈರೆಕ್ಟ್‌ ಸೆಕ್ಯುರಿಟೀಸ್' ಸಂಸ್ಥೆಯನ್ನು ಸ್ಥಾಪಿಸಿತ್ತು- ILFSನಿಂದ ಖರೀದಿಸಿತ್ತು. ಬ್ರೋಕರೇಜ್‌ ಸೇವಾಕ್ಷೇತ್ರದಲ್ಲಿ ಆರಂಭದಲ್ಲಿ ಸುಮಾರು 1,740 ಕೋಟಿ ರೂ ಬಂಡವಾಳ ಹೂಡಿತ್ತು.

ಆದರೆ 'ಕಳೆದ ಕೆಲ ವರ್ಷಗಳಿಂದ ಬ್ರೋಕರೇಜ್‌ ಸೇವಾ ಚಟುವಟಿಕೆ ಸಾಧಾರಣವಾಗಿದೆ. ಹಾಗಾಗಿ, HSBC ಬ್ರೋಕರೇಜ್‌ ಸಂಸ್ಥೆ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸುತ್ತಿದೆ. ಉದ್ಯೋಗ ಕಳೆದುಕೊಳ್ಳುವ ಸಿಬ್ಬಂದಿಗೆ ಕಂಪನಿ ನಿಯಮದಂತೆ ಪರಿಹಾರ ನೀಡಲಾಗುವುದು' ಎಂದು HSBC ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಮಧ್ಯೆ ಈ ಬೆಳವಣಿಗೆಯಿಂದ ಸಂಸ್ಥೆಯ ಗ್ರಾಹಕರು ಆತಂಕಗೊಂಡಿದ್ದಾರೆ. ಆದರೆ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವವರೆಗೂ ದೈನಂದಿನ ಸೇವೆಯನ್ನು ಒದಗಿಸುತ್ತದೆ. ರಿಟೇಲ್ ಹೂಡಿಕೆದಾರರು ಚಿನ್ನ, ರಿಯಲ್ ಎಸ್ಟೇಟ್ ಮತ್ತು ಬ್ಯಾಂಕ್ ಠೇವಣಿ ಹೂಡಿಕೆಯನ್ನು ಸುರಕ್ಷಿತವೆಂದು ಭಾವಿಸಿದ್ದು, ಅದರತ್ತ ಹೆಚ್ಚು ಆಕರ್ಷಿತರಾಗಿರುವುದರಿಂದ ಷೇರು ಮಾರುಕಟ್ಟೆ ನಿಸ್ತೇಜವಾಗಿದೆ.

Standard Chartered Bank- UTI Securities ಅನ್ನು, Aditya Birla Financial services- ಚೆನ್ನೈನ Apollo Sindhoori ಸಂಸ್ಥೆಯನ್ನೂ, Edelweiss Securities- Anagram Securities ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ನಿದರ್ಶನವಿರುವಾಗ ಹಾಗೂ Jefferies, Barclays, RBS ಮತ್ತು Espirito Santo ಷೇರು ವಹಿವಾಟಿನ ವಿದೇಶಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ HSBC ಬ್ರೋಕರೇಜ್‌ ಸಂಸ್ಥೆಯನ್ನು ಖರೀದಿಸಲು ಯಾವುದೇ ಕಂಪನಿ ಮುಂದೆಬಾರದಿರುವುದು ಶೋಚನೀಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+