ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಮುಂಬೈ ಕರಾವಳಿಯಲ್ಲಿ ಪತನ, 4 ಸಾವು

Subscribe to Oneindia Kannada

ಮುಂಬೈ, ಜನವರಿ 13: ನಗರದ ಜುಹುವಿನಿಂದ ಹೊರಟು ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಮುಂಬೈ ಸಮುದ್ರ ತೀರದಲ್ಲಿ ಪತನವಾಗಿದೆ. ಒಟ್ಟು 7 ಜನರಲ್ಲಿ ಐವರ ಮೃತದೇಹಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಮೇಲೆತ್ತಿದ್ದಾರೆ.

ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಮುಂಬೈನ್ ಆಫ್ ಶೋರ್ ಡೆವಲಪ್ಮೆಂಟ್ ಏರಿಯಾದಲ್ಲಿ ಪತನವಾಗಿದೆ. ನಾಲ್ವರ ಮೃತದೇಹ ಮೇಲಕ್ಕೆತ್ತಿದ್ದು, ಉಳಿದ ಮೂವರಿಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಮುಂಬೈನಿಂದ ಹೊರಟಿದ್ದ ಹೆಲಿಕಾಪ್ಟರ್ ಸಮುದ್ರ ಮಧ್ಯೆ ನಾಪತ್ತೆ

ಇಂದು ಬೆಳಿಗ್ಗೆ 10.30ಕ್ಕೆ ಇಬ್ಬರು ಪೈಲಟ್ ಸೇರಿ 7 ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮುಂಬೈನಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನಿಂದ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಇವರಲ್ಲಿ 'ಓಎನ್ ಜಿಸಿ'ಯ ನಾಲ್ವರು ಉದ್ಯೋಗಿಗಳೂ ಸೇರಿದ್ದರು.

Helicopter with ONGC employees crashes miles off Mumbai coast, 4 dead

ಜುಹು ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಬೆಳಿಗ್ಗೆ 10 ಗಂಟೆ 20 ನಿಮಿಷಕ್ಕೆ ಟೇಕ್ ಆಫ್ ಆಗಿತ್ತು. ಅಂದುಕೊಂಡಂತೆ ನಡೆದಿದ್ದರೆ 'ಒಎನ್ ಜಿಸಿ'ಯ ನಾರ್ತ್ ಫೀಲ್ಡ್ ನಲ್ಲಿ ಹೆಲಿಕಾಪ್ಟರ್ ಬೆಳಿಗ್ಗೆ 10.58ಕ್ಕೆ ಲ್ಯಾಂಡ್ ಆಗಬೇಕಿತ್ತು.

ಆದರೆ ಹೆಲಿಕಾಪ್ಟರ್ 10.30ರ ನಂತರ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four people dead as a helicopter carrying seven people, including ONGC employees, has crashed 22 miles off Mumbai coast on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ