• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಂಖೆಡೆ ವಿರುದ್ಧ ವಿಷಯ ಪ್ರಕಟಿಸದಂತೆ ಮಲಿಕ್ ತಡೆಯಲು ಹೈಕೋರ್ಟ್ ನಿರಾಕಾರ

|
Google Oneindia Kannada News

ಮುಂಬೈ. ನವೆಂಬರ್ 22: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಾರ್ವಜನಿಕ ಡೊಮೈನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಪ್ರಕಟಿಸದಂತೆ ಎನ್‌ಸಿಪಿ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ಅವರನ್ನು ನಿರ್ಬಂಧಿಸಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಆದಾಗ್ಯೂ, ಮಾಹಿತಿಯನ್ನು ಬಿಡುಗಡೆ ಮಾಡುವ ಮೊದಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೊದಲು ಮಲಿಕ್ ಸಮಂಜಸವಾದ ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

ಧ್ಯಾನ್‌ದೇವ್ ಅವರು ತಮ್ಮ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಅವರ ಜಾತಿಯ ವಿರುದ್ಧ ವಿವಿಧ ಮಾಧ್ಯಮಗಳ ಮುಂದೆ "ಸುಳ್ಳು ಮತ್ತು ಅವಹೇಳನಕಾರಿ" ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮಲಿಕ್ ವಿರುದ್ಧ ಮುಂಬೈನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ಕಚ್ರೂಜಿ ವಾಂಖೆಡೆ ಅವರು ಮಲಿಕ್ ವಿರುದ್ಧ 1.25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಮಹಾರಾಷ್ಟ್ರ ಸಚಿವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಮೀರ್ ವಾಂಖೆಡೆ ಅವರ ಜನ್ಮ ಪ್ರಮಾಣಪತ್ರವನ್ನು ಹಂಚಿಕೊಂಡಿದ್ದರು. ಜೊತೆಗೆ ಅವರ ತಂದೆ ದಾವೂದ್ ವಾಂಖೆಡೆ ಎಂದು ಹೇಳಿಕೊಂಡಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ಸಮೀರ್ ವಾಂಖೆಡೆ ತಂದೆ ಮಲಿಕ್ ವಿರುದ್ಧ ಮೊಕದ್ದಮೆ ಹೂಡಿದ್ದರು.

ಈ ವರ್ಷ ಜನವರಿಯಲ್ಲಿ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರನ್ನು ಎನ್‌ಡಿಪಿಎಸ್ ಕಾಯಿದೆಯಡಿ ಅಕ್ರಮವಾಗಿ ವ್ಯಾಪಾರ ಮಾಡಿದ ಆರೋಪದಡಿಯಲ್ಲಿ ಎನ್‌ಸಿಬಿ ಬಂಧಿಸಿತ್ತು. ನಂತರ ಖಾನ್ ಅವರನ್ನು ಸೆಪ್ಟೆಂಬರ್ 27 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದಕ್ಕೆ ಸಮೀರ್ ವಾಂಖೆಡೆ ಅವರನ್ನು ಗುರಿಯಾಗಿಸಿಕೊಂಡಿರುವ ಮಲಿಕ್ ಟೀಕೆ ಪ್ರಾರಂಭಿಸಿದ್ದಾರೆ ಎಂದು ಧ್ಯಾನ್‌ದೇವ್ ಅವರ ಮನವಿಯಲ್ಲಿ ಹೇಳಲಾಗಿದೆ. ಮಲಿಕ್ ಅವರ ಟ್ವೀಟ್‌ಗಳು ಅಕ್ಟೋಬರ್ 14 ರಿಂದ ಪ್ರಾರಂಭವಾಗಿವೆ. ಮೊದಲ ಟ್ವೀಟ್‌ಗಳು ದುರುದ್ದೇಶ ಮತ್ತು ವೈಯಕ್ತಿಕ ದ್ವೇಷದಿಂದ ಪ್ರಚೋದಿಸಲ್ಪಟ್ಟಿದೆ ಎಂದು ತೋರಿಸಿದೆ ಎಂದು ಹೈಕೋರ್ಟ್ ಗಮನಿಸಿದರು. ಇನ್ನೂ ಕೆಲ ಟ್ವೀಟ್‌ಗಳು ವಾಂಖೆಡೆಯ ಅಧಿಕೃತ ಕರ್ತವ್ಯಗಳಿಗೆ ಸಂಬಂಧಿಸಿವೆ ಎಂದು ನ್ಯಾಯಾಲಯವು ಗಮನಿಸಿದೆ.

ಈ ಹಂತದಲ್ಲಿ ಟ್ವೀಟ್‌ಗಳಲ್ಲಿ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಲಾಗುವುದಿಲ್ಲ. ಮಲಿಕ್ ಅವರಿಗೆ ಸಂದೇಶಗಳನ್ನು ಮಾಡದಂತೆ ತಡೆಯಾಜ್ಞೆಯನ್ನು ಆದೇಶಿಸಲಾಗುವುದಿಲ್ಲ. ಆದರೆ ಸತ್ಯಗಳ ಸಮಂಜಸವಾದ ಪರಿಶೀಲನೆಯನ್ನು ನಡೆಸಿದ ನಂತರವೇ ಮಲಿಕ್ ಬರಹಗಳನ್ನು ಒದಗಿಸಬೇಕು ಎಂದು ಅದು ಹೇಳಿದೆ. ಧ್ಯಾನದೇವ್ ಖಾಸಗಿತನದ ಹಕ್ಕನ್ನು ಹೊಂದಿದ್ದರೆ, ಮಲಿಕ್ ಅವರು ಆರ್ಟಿಕಲ್ 19 (2) ನಲ್ಲಿ ಹೇಳಲಾದ ನಿರ್ಬಂಧಗಳಿಗೆ ಒಳಪಟ್ಟು ವಾಕ್ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

"ಈ ಪ್ರಕರಣದಲ್ಲಿ, ಧ್ಯಾನದೇವ್ ಮತ್ತು ಪ್ರತಿವಾದಿಯ ಮೂಲಭೂತ ಹಕ್ಕುಗಳನ್ನು ಸಮತೋಲನಗೊಳಿಸುವುದು ಅವಶ್ಯಕ" ಎಂದು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಹೇಳಿದರು. "ಟ್ವಿಟ್‌ಗಳು ಸಾರ್ವಜನಿಕ ಸೇವಕರಾಗಿ ವಾಂಖೆಡೆ ಅವರ ಅಧಿಕೃತ ಕರ್ತವ್ಯಗಳಿಗೆ ಸಂಬಂಧಿಸಿವೆ ಮತ್ತು ಈ ಹಂತದಲ್ಲಿ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಹೇಳಲಾಗುವುದಿಲ್ಲ ಆದರೆ ಪೋಸ್ಟ್ ಮಾಡುವ ಮೊದಲು ಮಲಿಕ್ ಅವರಿಂದ ಸರಿಯಾದ ಪರಿಶೀಲನೆಯನ್ನು ಮಾಡಬೇಕು" ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

   RCB ಪರ ಮುಂದಿನ IPLನಲ್ಲಿ ABD ಜಾಗವನ್ನು ತುಂಬುವವರು ಯಾರು | Oneindia Kannada

   ಜೊತೆಗೆ ತಮ್ಮ ವಿರುದ್ಧ ಹೂಡಲಾಗಿರುವ ಮಾದಕವಸ್ತು ಪ್ರಕರಣ ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ ಸರ್ಕಾರದ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. (ಸಮೀರ್‌ ಖಾನ್‌ ಮತ್ತು ಎನ್‌ಸಿಬಿ ನಡುವಣ ಪ್ರಕರಣ). ಖಾನ್‌ ಹಾಗೂ ಇತರ ಇಬ್ಬರ ಆರೋಪಿಗಳಾದ ರಾಹಿಲಾ ಫರ್ನಿಚರ್‌ವಾಲಾ ಮತ್ತು ಕರಣ್ ಸೆಜ್ನಾನಿ ಅವರ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 8 (ಸಿ), 20 (ಬಿ) (ಸಿ), 27 ಎ, 27, 28 ಹಾಗೂ 29ರ ಅಡಿ ಮೊಕದ್ದಮೆ ದಾಖಲಿಸಲಾಗಿದೆ.194.6 ಕೆಜಿಯಷ್ಟು ಗಾಂಜಾ ಮತ್ತು 6 ಸಿಬಿಡಿ (ಕ್ಯಾನಬಿಡಿಯಾಲ್) ಸ್ಪ್ರೇಗಳ ಸಂಗ್ರಹ, ಮಾರಾಟ ಹಾಗೂ ಸಾಗಾಟಕ್ಕೆ ರಹಿಲಾ ಫರ್ನಿಚರ್‌ವಾಲಾ ಮತ್ತು ಕರಣ್ ಸೆಜ್ನಾನಿ ಅವರೊಂದಿಗೆ ಸೇರಿ ಸಮೀರ್ ಖಾನ್ ಅವರು ಸಂಚು ರೂಪಿಸಿದ್ದಾರೆ ಎಂದು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಆರೋಪಿಸಿತ್ತು.

   English summary
   Bombay HC refuses to restrain Nawab Malik from publishing material against Sameer Wankhede.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X