ಘರ್ಕುಲ್ ವಸತಿ ಹಗರಣ: ಶಿವಸೇನಾ ಮುಖಂಡನಿಗೆ 100 ಕೋಟಿ ರು ದಂಡ
ಮುಂಬೈ, ಸೆ. 01: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಶಿವಸೇನಾ ನಾಯಕ ಸುರೇಶ್ ಜೈನ್ ಹಾಗೂ ಗುಲಾಬ್ ರಾವ್ ದೇವಕರ್ ಸೇರಿದಂತೆ 46 ಮಂದಿ ವಿರುದ್ಧ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಘರ್ಕುಲ್ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಹಗರಣದಲ್ಲಿ ಎಲ್ಲರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಸುರೇಶ್ ಜೈನ್ ಅವರಿಗೆ 7 ವರ್ಷ ಜೈಲು ಹಾಗೂ 100 ಕೋಟಿ ದಂಡ, ಎನ್ ಸಿಪಿ ಪಕ್ಷದ ನಾಯಕ ಗುಲಾಬ್ರಾವ್ ಗೆ ಗೆ 5 ವರ್ಷ ಜೈಲು ಶಿಕ್ಷೆ. ಉಳಿದ 46 ಆರೋಪಿಗಳಿಗೆ 3 ಹಾಗೂ 7 ವರ್ಷ ಶಿಕ್ಷೆ ಹಾಗೂ ಉಳಿದ 46 ಮಂದಿ ತಪ್ಪಿತಸ್ಥರಿಗೆ 3 ಹಾಗೂ 7 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯದ ವಿಶೇಷ ನ್ಯಾ. ಸೃಷ್ಟಿ ನೀಲಕಾಂತ್ ಅವರು ತೀರ್ಪು ನೀಡಿದ್ದಾರೆ.
ಸುರೇಶ್ ಜೈನ್ ಹಾಗೂ ಗುಲಾಬ್ ರಾವ್ ಅಲ್ಲದೆ ಹಾಲಿ ಹಾಗೂ ಮಾಜಿ ಪುರಸಭಾ ಸದಸ್ಯರು ಈ ಹಗರಣದಲ್ಲಿ ಶಾಮೀಲಾಗಿರುವುದು ಸಾಬೀತಾಗಿದೆ. ನ್ಯಾಯಾಲಯದ ತೀರ್ಪಿನಂತೆ ಎಲ್ಲಾ ಅಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಲ್ಗಾಂವ್ ಹೊರವಲಯದಲ್ಲಿ ನಿರ್ಮಾಣವಾಗಬೇಕಿದ್ದ 5000 ಮನೆಗಳ ಪೈಕಿ 1500 ಮನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಈ ಕುರಿತಂತೆ ಜಲಗಾಂವ್ನ ಮಾಜಿ ಪುರಸಭೆ ಆಯುಕ್ತ ಪ್ರವೀಣ ಗೆದಮ್ ಅವರು ಈ ಸಂಬಂಧ ಫೆಬ್ರುವರಿ 2006ರಲ್ಲಿ ದೂರು ದಾಖಲಿಸಿದ್ದರು.
90ರ ದಶಕದಲ್ಲಿ ಗೃಹ ಇಲಾಖೆ ರಾಜ್ಯಸಚಿವರಾಗಿದ್ದ ಸುರೇಶ್ ಜೈನ್ 29 ಕೋಟಿ ರು ವಸತಿ ಯೋಜನೆ ವಂಚನೆ ಪ್ರಕರಣದಲ್ಲಿ ಸಿಲುಕಿದ್ದರಿಂದ ಮಾರ್ಚ್ 2012ರಲ್ಲಿ ಬಂಧಿಸಲಾಗಿತ್ತು. ಒಂದು ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ನಂತರ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದರು.
ಎನ್ ಸಿಪಿ ನಾಯಕ ಗುಲಾಬ್ ರಾವ್ ಮೇ 2012ರಲ್ಲಿ ಬಂಧನಕ್ಕೊಳಗಾಗಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿ,ಜಾಮೀನು ಪಡೆದುಕೊಂಡಿದ್ದಾರೆ. 1995 ಮತ್ತು 2000 ನಡುವೆ ಜಲ್ವಾಂಗ್ ಪುರಸಭೆಯಲ್ಲಿ ಸದಸ್ಯರಾಗಿದ್ದರು. 29 ಕೋಟಿ ವಸತಿ ಯೋಜನೆ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications