• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

20ರ ಹರೆಯದ ರೂಪದರ್ಶಿ ಆಪಾರ್ಟ್ಮೆಂಟ್ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ

|

ಮುಂಬೈ, ಆಗಸ್ಟ್ 30: ಹಿಂದಿ ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಆಸೆ ಇರಿಸಿಕೊಂಡಿದ್ದ 20 ಹರೆಯ ರೂಪದರ್ಶಿಯೊಬ್ಬಳು ತಮ್ಮ ಅಪಾರ್ಟ್ಮೆಂಟ್ ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

20 ವರ್ಷ ವಯಸ್ಸಿನ ರೂಪದರ್ಶಿ ಮುಂಬೈನ ಓಶಿವಾರದಲ್ಲಿ ನೆಲೆಸಿದ್ದ ಪರ್ಲ್ ಪಂಜಾಬಿ, ಹಲವು ದಿನಗಳಿಂದ ಬಿ ಟೌನ್ ನಲ್ಲಿ ಹಲವು ಸಿನಿಮಾ ಸಂಸ್ಥೆಗಳ ಬಳಿ ಅವಕಾಶಗಳಿಗಾಗಿ ಕೇಳಿಕೊಂಡಿದ್ದಾಳೆ, ಆದರೆ, ನಿರಂತರವಾಗಿ ಯಾವುದೇ ಆಫರ್ ಸಿಗದೆ ಕಂಗಲಾಗಿ ಮಾನಸಿಕ ಒತ್ತಡದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

"ಮಧ್ಯರಾತ್ರಿ 12.15 ರಿಂದ 12.30 ರೊಳಗೆ ಘಟನೆ ನಡೆದಿದ್ದು, ಕೂಗುವ ಶಬ್ಧ ಕೇಳಿ ಬಂದಿತ್ತು. ನಾನು ರಸ್ತೆಯಲ್ಲಿ ಯಾರೋ ಕೂಗುತ್ತಿರಬಹುದು ಎಂದು ಹೊರಗಡೆ ಬಂದು ನೋಡಿದರೆ ಯಾರೂ ಇರಲಿಲ್ಲ. ಆಕೆ ಇದ್ದ ಮೂರನೇ ಮಹಡಿಯಿಂದ ಬಂದ ಶಬ್ದ ಎಂದು ತಿಳಿಯುವಷ್ಟರಲ್ಲಿ ಆಕೆ ಕೆಳಗೆ ಹಾರಿದ್ದಳು" ಎಂದು ಅಪಾರ್ಟ್ಮೆಂಟ್ ನ ಸೆಕ್ಯುರಿಟಿ ಗಾರ್ಡ್ ಬಿಪಿನ್ ಕುಮಾರ್ ಠಾಕೂರ್ ಹೇಳಿಕೆ ನೀಡಿದ್ದಾನೆ.

"ಪರ್ಲ್ ಪಂಜಾಬಿ ಹಾಗೂ ಆಕೆಯ ತಾಯಿ ನಡುವೆ ಆಗಾಗ ಜಗಳವಾಗುತ್ತಿತ್ತು, ಈ ಹಿಂದೆ ಕೂಡಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಿನಿಮಾ, ಫ್ಯಾಷನ್ ಲೋಕದಲ್ಲಿ ಅವಕಾಶ ವಂಚಿತಳಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ" ಎಂದು ಓಶಿವಾರ ಪೊಲೀಸರು ಹೇಳಿದ್ದಾರೆ.

English summary
A frustrated struggling actress allegedly committed suicide by jumping off the terrace of her apartment in Oshiwara, Mumbai on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X