Get Updates
Get notified of breaking news, exclusive insights, and must-see stories!
Live

ಮುಂಬೈ ಕಟ್ಟಡ ಕುಸಿತ: 4 ಅಂತಸ್ತಿನ ಕಟ್ಟಡ ಕುಸಿತ, 7 ಮಂದಿ ಮೃತ

ಮುಂಬೈ, ಜುಲೈ 16: ಇಲ್ಲಿನ ಡೋಂಗ್ರಿ ಪ್ರದೇಶದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಕುಸಿದಿದೆ.

ಬೃಹನ್ ಮುಂಬೈ ನಗರ ಪಾಲಿಕೆ(ಬಿಎಂಸಿ) ನೀಡಿರುವ ಅಧಿಕೃತ ಮಾಹಿತಿಯಂತೆ, ಸಂಜೆ 7 ಗಂಟೆ ವೇಳೆಗೆ 07 ಮಂದಿ ಮೃತಪಟ್ಟಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ಪೈಕಿ 8 ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಟ್ಟಡದ ಅವಶೇಷಗಳ ಅಡಿಯಲ್ಲಿ 40ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

'ತಾಂಡೇಲ್ ರಸ್ತೆಯಲ್ಲಿರುವ ಕೇಸರ್ ಭಾಯ್ ಕಟ್ಟಡ ಕುಸಿತ ಸ್ಥಳಕ್ಕೆ ಅಗ್ನಿ ಶಾಮಕದಳ ತಕ್ಷಣವೇ ಧಾವಿಸಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ' ಎಂದು ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ವಕ್ತಾರರು ತಿಳಿಸಿದ್ದದರೆ.

Four-storey building collapses in Mumbai’s Dongri, over 40 feared trapped

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೂಡಾ ಘಟನಾ ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

Jul 16, 2019, 7:03 pm IST

ಬೃಹನ್ ಮುಂಬೈ ನಗರ ಪಾಲಿಕೆ(ಬಿಎಂಸಿ) ನೀಡಿರುವ ಅಧಿಕೃತ ಮಾಹಿತಿಯಂತೆ, ಸಂಜೆ 7 ಗಂಟೆ ವೇಳೆಗೆ 07 ಮಂದಿ ಮೃತಪಟ್ಟಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ಪೈಕಿ 8 ಮಂದಿಯನ್ನು ರಕ್ಷಿಸಲಾಗಿದೆ.
Jul 16, 2019, 4:59 pm IST

ಕಟ್ಟಡದ ಮಾಲೀಕತ್ವದ ಗೊಂದಲಕ್ಕೆ ಪ್ರತಿಕ್ರಿಯೆ

ಕಟ್ಟಡದ ಮಾಲೀಕತ್ವದ ಗೊಂದಲಕ್ಕೆ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ದುರಸ್ತಿ ವಿಭಾಗದ ಮುಖ್ಯಸ್ಥ ವಿನೋದ್ ಘೊಸ್ಲಾಕರ್, 'ಈ ಕಟ್ಟಡಕ್ಕೂ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ, ಕಟ್ಟಡ ದುರಸ್ತಿ, ಪುನರ್ ನಿರ್ಮಾಣದ ಬಗ್ಗೆ ಯಾವುದೇ ದೂರು ಬಂದಿಲ್ಲ' ಎಂದಿದ್ದಾರೆ.
Jul 16, 2019, 4:58 pm IST

ಕಟ್ಟಡ ಯಾರ ಹೆಸರಿನಲ್ಲಿದೆ?

ಡೊಂಗ್ರಿಯಲ್ಲಿ ಕುಸಿತ ಕಟ್ಟಡದ ಮಾಲೀಕಾರು ಯಾರು? ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಮಹಾರಾಷ್ಟ್ರ ವಸತಿ ಹಾಗೂ ಪ್ರದೇಶಾಭಿವೃದ್ಧಿ ಪ್ರಾಧಿಕಾರ(MHADA) ಕ್ಕೆ ಸೇರಿದ ಕಟ್ಟಡ ಎಂದು ಮೊದಲಿಗೆ ವರದಿ ಬಂದಿತ್ತು. ಕಾಂಗ್ರೆಸ್ ಮುಖಂಡರಾದ ಭಾಯಿ ಜಗತಪ್, ಮಿಲಿಂದ್ ದಿಯೋರಾ ಅವರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಪ್ರಾಧಿಕಾರವನ್ನು ಆಗ್ರಹಿಸಿದ್ದರು.
Jul 16, 2019, 4:49 pm IST

ಡೊಂಗ್ರಿಯಲ್ಲಿ ಕುಸಿದ ಕಟ್ಟಡದ ಅವಶೇಷದಲ್ಲಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣ ದಳದವರು ರಕ್ಷಣೆ ಮಾಡಿದ್ದಾರೆ.
Jul 16, 2019, 4:45 pm IST

ಪ್ರಧಾನಿ ಮೋದಿಯಿಂದ ಸಂತಾಪದ ಟ್ವೀಟ್

ಪ್ರಧಾನಿ ಮೋದಿ ಅವರು ಕಟ್ಟಡ ಕುಸಿತದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Jul 16, 2019, 4:44 pm IST

ಆದರೆ, ಕೇಸರ್ ಭಾಯಿ ಕಟ್ಟಡದ ಟ್ರಸ್ಟಿ ಎಸ್ ಹುಸೇನ್ ಅವರು ಸಿಎನ್ಎನ್ ನ್ಯೂಸ್ 18 ಜೊತೆ ಮಾತನಾಡಿ, 'ಇದು ಬಿ ವಿಂಗ್ ನಲ್ಲಿ ಆಗಿರುವ ದುರಂತ, ಇದು ಅಕ್ರಮ ಕಟ್ಟಡವಾಗಿತ್ತು, ಈ ಬಗ್ಗೆ ಪಾಲಿಕೆಗೆ ದೂರು ನೀಡಲಾಗಿತ್ತು, 1986ರಲ್ಲಿ ಈ ಕಟ್ಟಡ ಕಟ್ಟಲಾಗಿತ್ತು, ಪುನರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರೂ, ಇಲ್ಲಿ ವಾಸವಿದ್ದ ಬಾಡಿಗೆದಾರರು ಪುನರ್ ನಿರ್ಮಾಣ ಕಾರ್ಯಕ್ಕೆ ಶುಲ್ಕ ಪಾವತಿಸದ ಕಾರಣ ಕಾಮಗಾರಿ ನಿಲ್ಲಿಸಲಾಗಿತ್ತು' ಎಂದಿದ್ದಾರೆ.
Jul 16, 2019, 4:43 pm IST

ಮುಂಬೈ ಕಟ್ಟಡ ಎಷ್ಟು ಹಳೆಯದ್ದು?

ಮಹಾರಾಷ್ಟ ಸಿಎಂ ಕಚೇರಿಯ ಟ್ವೀಟ್ ಪ್ರಕಾರ, ಇಂದು ಕುಸಿತ ಕಟ್ಟಡ ನೂರು ವರ್ಷಕ್ಕೂ ಹಳೆಯದ್ದು ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+