ಚಿತ್ರಗಳು : ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಆಕಸ್ಮಿಕ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 12 : ಮುಂಬೈನ ಥಾಣೆ ಜಿಲ್ಲೆಯ ಭಿವಂಡಿ ಉಪನಗರದ ಬಹುಮಹಡಿ ಕಟ್ಟಡವೊಂದರಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕಟ್ಟಡದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ 4 ಮಹಡಿಗಳ ಕಟ್ಟಡದ ನೆಲ ಮಹಡಿಯಲ್ಲಿನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಿಕೊಳ್ಳಲು ಕಟ್ಟಡದಲ್ಲಿದ್ದ 20ಕ್ಕೂ ಹೆಚ್ಚು ಕುಟುಂಬಗಳ ನಿವಾಸಿಗಳು ಟೇರಸ್‌ ಮೇಲೆ ರಕ್ಷಣೆ ಪಡೆದಿದ್ದರು. [ಕೇರಳದಲ್ಲಿ ಅಗ್ನಿ ದುರಂತ 106 ಸಾವು]

fire

ದುರಂತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಯಾವುದೇ ದೊಡ್ಡ ಅನಾಹುತ ನಡೆದಿಲ್ಲ. ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಸಿಬ್ಬಂದಿಗಳು, ಟೇರಸ್‌ ಮೇಲಿದ್ದ ಜನರನ್ನು ಕ್ರೇನ್ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಿದರು. [ಕೇರಳ ದುರಂತದ ಚಿತ್ರಗಳು]

ಕಟ್ಟಡದ ನೆಲಮಾಳಿಗೆಯಲ್ಲಿ ವಿದ್ಯುತ್‌ ಮಗ್ಗಕ್ಕೆ ಸಂಬಂಧಿಸಿದ ನೂಲು, ಕೀಲೆಣ್ಣೆ ಡಬ್ಬ ಮತ್ತಿತರ ಸರಕುಗಳಿತ್ತು. ಆದ್ದರಿಂದ, ಬೆಂಕಿ ವೇಗವಾಗಿ ಕಟ್ಟಡಕ್ಕೆ ಹಬ್ಬಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿತ್ರಗಳು

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fire broke out on Tuesday morning in a residential building at Bhiwandi in Thane district, Mumbai. No casualty was reported so far.
Please Wait while comments are loading...