ಮುಂಬೈ ಕಟ್ಟಡದಲ್ಲಿ ಮತ್ತೆ ಬೆಂಕಿ: ಓರ್ವ ಸಾವು

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 15: ಮುಂಬೈಯ ಅಂಧೇರಿಯಲ್ಲಿರುವ ಮಿತ್ತಲ್ ಎಸ್ಟೇಟ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓರ್ವ ಬಲಿಯಾದ ಘಟನೆ ಇಂದು(ಫೆ.15) ಬೆಳಿಗಿನ ಜಾವ ನಡೆದಿದೆ.

ಇಂದು ಬೆಳಗ್ಗಿನ ಜಾವ ಸುಮಾರು 1.15 ರ ಸಮಯಕ್ಕೆ ಈ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತಿ. ಈ ಸಮಯದಲ್ಲಿ ಕಟ್ಟಡದೊಳಗಿದ್ದ ಪ್ರದೀಪ್ ವಿಶ್ವಕರ್ಮ(20) ಎಂಬುವವರು ಮೃತರಾಗಿದ್ದು, ಬೆಂಕಿಯಿಂದಾಗಿ ಅವರ ದೇಹದ ಬಹುಭಾಗ ಸುಟ್ಟುಹೋಗಿತ್ತು ಎಂದು ಮೂಲಗಳು ತಿಳಿಸಿವೆ.

ಮುಂಬೈನಲ್ಲಿ ಭಾರೀ ಅಗ್ನಿ ದುರಂತ, 14 ಜನ ಸಾವು

ಮೂರಂತಸ್ತಿನ ಈ ಕಟ್ಟಡದಲ್ಲಿ ಇಲೆಕ್ಟ್ರಿಕ್ ವೈರ್ ನಿಂದ ಯಾವುದೋ ಪ್ಲಾಸ್ಟಿಕ್ ವಸ್ತುವಿಗೆ ಬೆಂಕಿ ತಗುಲಿಕೊಂಡ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Fire broke out again in Mumbai

ಮುಂಬೈಯಲ್ಲಿ ಕಟ್ಟಡಕ್ಕೆ ಬೆಂಕಿ ತಗುಲಿ ಸಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವರ್ಷಾರಂಭಕ್ಕೂ ಮುನ್ನ ಇಲ್ಲಿನ ಕಮಲ್ ಮಿಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಗಢದಲ್ಲಿ 14 ಮಂದಿ ಮೃತರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
1 dead in a fire which broke out at a godown in Mittal Estate building in Mumbai’s Andheri

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ