Breaking: ನಗ್ನ ಚಿತ್ರ ವಿವಾದ: ನಟ ರಣವೀರ್ ಸಿಂಗ್ ವಿರುದ್ಧ ಪ್ರಕರಣ
ಮುಂಬೈ, ಜುಲೈ 26: ಸಾಮಾಜಿಕ ಮಾಧ್ಯಮದಲ್ಲಿ ನಟ ರಣವೀರ್ ಸಿಂಗ್ ಹಂಚಿಕೊಂಡಿರುವ ಅವರ ನಗ್ನ ಚಿತ್ರಗಳ ಬಗ್ಗೆ ಮುಂಬೈನಲ್ಲಿ ಪ್ರಥಮ ಮಾಹಿತಿ ವರದಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮೂಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಟ ತಮ್ಮ ನಗ್ನ ಚಿತ್ರಗಳನ್ನು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಮಹಿಳೆಯರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಜೊತೆಗೆ ಅವರ ಘನತೆಗೆ ಅವಮಾನ ಮಾಡಿದ್ದಾರೆ ಎಂದು ಎನ್‌ಜಿಒ ಆರೋಪಿಸಿದೆ.

ಎನ್‌ಜಿಒ ಪದಾಧಿಕಾರಿಗಳು ಸೋಮವಾರ ಚೆಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಗುರುವಾರ ಮ್ಯಾಗಜೀನ್‌ಗಾಗಿ ಮಾಡಿಸಿರುವ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ನಟನ ವಿರುದ್ಧ ವಕೀಲರೊಬ್ಬರು ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ್ದರು. ತಮ್ಮ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದರು.

Recommended Video
ನಟ ರಣವೀರ್ ಸಿಂಗ್, ಬ್ಯಾಂಡ್ ಬಾಜಾ, ಬಾರಾತ್, ಬಾಜಿರಾವ್ ಮಸ್ತಾನಿ, ಪದ್ಮಾವತ್ ಮತ್ತು ಗಲ್ಲಿ ಬಾಯ್, ಬೇಫಿಕ್ರಿ ಸೇರಿದಂತೆ ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಹುಭಾಷಾ ನಟಿ ದೀಪಿಕಾ ಪಡುಕೋಣೆ ಅವರನ್ನು ವಿವಾಹವಾಗಿದ್ದಾರೆ.












Click it and Unblock the Notifications