ಬಾಲಿವುಡ್ ಡ್ರಗ್ ಪ್ರಕರಣ; ಮೇಕಪ್ ಕಲಾವಿದ ಸೂರಜ್ ಗೊಡಂಬೆ ಬಂಧನ
ಮುಂಬೈ, ಡಿಸೆಂಬರ್ 10: ಬಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಡ್ರಗ್ ಪೆಡ್ಲರ್ ಒಬ್ಬನ ಬಂಧನದ ಬೆನ್ನಲ್ಲೇ ಮತ್ತೊಬ್ಬನನ್ನು ಎನ್ ಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಲಿವುಡ್ ನ ಪ್ರಸಿದ್ಧ ಕೇಶ ವಿನ್ಯಾಸಕ, ಮೇಕಪ್ ಕಲಾವಿದ ಸೂರಜ್ ಗೊಡಂಬೆ ಎಂಬುವನನ್ನು ಕೊಕೇನ್ ಸಮೇತ ವಶಕ್ಕೆ ಪಡೆದಿದ್ದಾರೆ. ಬಾಲಿವುಡ್ ನ ಪ್ರಖ್ಯಾತ ಪ್ರೊಡಕ್ಷನ್ ಹೌಸ್ ಒಂದರ ಮೇಕಪ್ ಡಿಪಾರ್ಟ್ ಮೆಂಟ್ ಮುಖ್ಯಸ್ಥನಾಗಿರುವ ಸೂರಜ್ ನನ್ನು ಗುರುವಾರ ಬಾಲಿವುಡ್ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ನಂತರ ರಾಜ್ಯದಲ್ಲಿ ಮಾದಕ ವಸ್ತುವಿನ ಜಾಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು, ಹಲವರನ್ನು ಬಂಧಿಸಲಾಗಿದೆ.

ಬುಧವಾರವಷ್ಟೇ ಎನ್ ಸಿಬಿ ಡ್ರಗ್ ಪೆಡ್ಲರ್ ರೆಗೆಲ್ ಮಹಕಲ್ ಎಂಬುವನನ್ನು ವಶಕ್ಕೆ ಪಡೆದು ಕಸ್ಟಡಿಗೆ ನೀಡಿದೆ.
ಬಂಧಿತನಾಗಿರುವ ಸೂರಜ್, 3 ಈಡಿಯಟ್ಸ್, ಫಿಯರ್ಲೆಸ್, ತನು ವೆಡ್ಸ್ ಮನು ರಿಟರ್ನ್ಸ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾಗಿ ತಿಳಿದುಬಂದಿದೆ.
ಮುಂಬೈನಲ್ಲಿ ಬಂಧಿತನಾಗಿರುವ ಡ್ರಗ್ ಡೀಲರ್ ಅಜಮ್ ಶೇಖ್ ಜುಮ್ಮನ್ ಎಂಬುವನ ಜೊತೆ ಸೂರಜ್ ನನ್ನೂ ಗುರುವಾರ ಕೋರ್ಟ್ ಗೆ ಹಾಜರುಪಡಿಸಲಿರುವುದಾಗಿ ತಿಳಿದುಬಂದಿದೆ.












Click it and Unblock the Notifications