262 ಕೆಜಿ ತೂಕ ಕಳೆದುಕೊಂಡು ಹಗುರಾದ ಈಜಿಪ್ಟ್ ನ ಇಮಾನ್ ಅಹ್ಮದ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮುಂಬೈ, ಏಪ್ರಿಲ್ 12: ಎರಡು ತಿಂಗಳ ಹಿಂದೆ ಜಗತ್ತಿನ ಅತಿ ತೂಕದ ಮಹಿಳೆ ಎಂಬ 'ಖ್ಯಾತಿ' ಜತೆಗೆ ಮುಂಬೈಗೆ ಬಂದಿಳಿದ ಈಜಿಪ್ಟ್ ನ ಇಮಾನ್ ಅಹ್ಮದ್ ತಮ್ಮ 500 ಕೆಜಿ ತೂಕದ ಪೈಕಿ 262 ಕೆಜಿ ತೂಕವನ್ನು ಕಳೆದುಕೊಂಡು ಹಗುರಾಗಿದ್ದಾರೆ. 36 ವರ್ಷದ ಇಮಾನ್ ತೂಕ ಇಳಿಸಿಕೊಳ್ಳುವ ಸಲುವಾಗಿ ಫೆಬ್ರವರಿ 11ರಂದು ಚಾರ್ಟರ್ಡ್ ವಿಮಾನದಲ್ಲಿ ಇಲ್ಲಿಗೆ ಬಂದಿದ್ದರು.

ಬೇರಿಯಾಟ್ರಿಕ್ ಸರ್ಜರಿಯಲ್ಲಿ ಖ್ಯಾತರಾದ ಮುಫಜಲ್ ಲಖ್ಡವಾಲ ಮತ್ತು ತಂಡದವರು ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಆಕೆಯ ಚಿಕಿತ್ಸೆ ಮಾಡಿದ್ದಾರೆ. ಬುಧವಾರ ಮಾತನಾಡಿರುವ ಲಖ್ಡವಾಲ, ಈಜಿಪ್ಟ್ ನ ಮಹಿಳೆ ಈ ವರೆಗೆ 262 ಕೆಜಿ ತೂಕ ಕಡಿಮೆ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Egypt's Eman Ahmed Has Lost 262 Kilos

ಲೋಕ್ ಮಾತ್ ಮಹಾರಾಷ್ಟ್ರಿಯನ್ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಮಾತನಾಡಿದ್ದಾರೆ. ಮುಂಬೈಗೆ ಕರೆತರುವ ಮುಂಚೆ ಇಮಾನ್ ಅಹ್ಮದ್ ಗೆ ಚಲಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ಇಪ್ಪತ್ತೈದು ವರ್ಷಗಳಿಂದ ಮನೆ ಬಿಟ್ಟು ಆಕೆ ಆಚೆಗೆ ಬಂದಿರಲಿಲ್ಲ. ಮಾರ್ಚ್ 7ರಂದು ಇಮಾನ್ ಅಹ್ಮದ್ ಅವರಿಗೆ ನೀಡಿದ್ದ ಲಾಪ್ರೋಸ್ಕೋಪಿಕ್ ತೂಕ ಇಳಿಸುವ ಸ್ಲೀವ್ ಗ್ಯಾಸ್ಟ್ರೆಕ್ಟೋಮಿ ಚಿಕಿತ್ಸೆ ಯಶಸ್ವಿಯಾಗಿತ್ತು.

ಆಕೆಯ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿದೆ. ಈಗ ಆಕೆಯ ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆ ಮಾಡುವುದು ಸವಾಲಾಗಿದೆ. ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ಹೆಚ್ಚಿಸುತ್ತಾ ಹೋಗುತ್ತೇವೆ ಎಂದು ವೈದ್ಯ ಲಖ್ಡವಾಲ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two months after landing here as the heaviest woman in the world with 500 kg weight, Egyptian national Eman Ahmed has now lost a whopping 262 kg, the bariatric surgeon attending her said.
Please Wait while comments are loading...