ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಬಂಧಿತ ಶಿವಸೇನೆ ಸಂಸದ ಸಂಜಯ್ ರಾವುತ್‌ ಪತ್ನಿಗೆ ಇಡಿ ಸಮನ್ಸ್

|
Google Oneindia Kannada News

ಮುಂಬೈ, ಆ.04: ಪಾತ್ರಾ ಚಾವ್ಲ್ ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿತ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಮುಂಬೈನ ವಿಶೇಷ ನ್ಯಾಯಾಲಯವು ಸಂಜಯ್ ರಾವುತ್ ಅವರ ಇಡಿ ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದ ಕೆಲವೇ ಗಂಟೆಗಳ ನಂತರ ಇಡಿ ಸಮನ್ಸ್ ಜಾರಿ ಮಾಡಿದೆ. ವರ್ಷಾ ರಾವುತ್ ಖಾತೆಯಲ್ಲಿ ನಡೆದ ವಹಿವಾಟು ಬೆಳಕಿಗೆ ಬಂದ ನಂತರ ಸಮನ್ಸ್ ನೀಡಲಾಗಿದೆ ಎಂದು ಇಡಿ ತಿಳಿಸಿದೆ.

ಪರಿಚಯ; ಮಾತು, ಬರಹದಲ್ಲಿ ಪ್ರಖರವಾಗಿರುವ ಸಂಜಯ್ ರಾವತ್ ಯಾರು?ಪರಿಚಯ; ಮಾತು, ಬರಹದಲ್ಲಿ ಪ್ರಖರವಾಗಿರುವ ಸಂಜಯ್ ರಾವತ್ ಯಾರು?

ವರ್ಷಾ ರಾವುತ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಪದೇ ಪದೇ ಹೆಸರಿಸಿದೆ. ಆಕೆಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಿಂಕ್ ಮಾಡಲಾಗಿದೆ. ಆದರೆ, ಒಮ್ಮೆಯೂ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿಲ್ಲ.

ವಸತಿ ಪುನರಾಭಿವೃದ್ಧಿ ಯೋಜನೆಯಲ್ಲಿ ಅಕ್ರಮಗಳನ್ನು ಸುಗಮಗೊಳಿಸಿದ್ದಕ್ಕಾಗಿ ಸಂಜಯ್ ರಾವತ್ ಕುಟುಂಬವು 1 ಕೋಟಿಗೂ ಹೆಚ್ಚು ಮೌಲ್ಯದ "ಅಪರಾಧದ ಆದಾಯ" ಪಡೆದಿದೆ ಎಂದು ಗುರುವಾರ ನ್ಯಾಯಾಲಯದಲ್ಲಿ ಇಡಿ ತಿಳಿಸಿದೆ.

ಸುಮಾರು ನಾಲ್ಕು ತಿಂಗಳ ಹಿಂದೆ ವರ್ಷಾ ರಾವತ್ ಮತ್ತು ಸಂಜಯ್ ರಾವುತ್ ಅವರ ಇಬ್ಬರು ಸಹಚರರ 11 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಇವುಗಳಲ್ಲಿ ವರ್ಷಾ ರಾವುತ್ ಹೊಂದಿದ್ದ ದಾದರ್‌ನಲ್ಲಿರುವ ಫ್ಲಾಟ್ ಮತ್ತು ಅಲಿಬಾಗ್‌ನ ಕಿಹಿಮ್ ಬೀಚ್‌ನಲ್ಲಿರುವ ಎಂಟು ಪ್ಲಾಟ್‌ಗಳು (ಈ ಎಂಟು ಪ್ಲಾಟ್‌ಗಳು ವರ್ಷಾ ರಾವುತ್ ಮತ್ತು ಸಂಜಯ್ ರಾವುತ್‌ರ "ಆಪ್ತ ಸಹಚರ" ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಜಂಟಿಯಾಗಿ ಹೊಂದಿದ್ದರು) ಸೇರಿವೆ.

ED Summoned Arrested Sena Leader Sanjay Rauts Wife

ಇನ್ನು, ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ಮುಂಬೈ ನ್ಯಾಯಾಲಯ ಸೋಮವಾರದವರೆಗೆ (ಆಗಸ್ಟ್ 8) ವಿಸ್ತರಿಸಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಾತ್ರಾ ಚಾವ್ಲ್ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್‌ರನ್ನು ವಿಚಾರಣೆ ನಡೆಸುತ್ತಿದೆ. ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದಾಗ ಸಂಜಯ್ ರಾವತ್ ಹಾಜರಾಗಿರಲಿಲ್ಲ. ಆದ್ದರಿಂದ ಭಾನುವಾರ ಇಡಿ ಅವರ ಮುಂಬೈ ನಿವಾಸದ ಮೇಲೆ ದಾಳಿ ಮಾಡಿತ್ತು.

English summary
Enforcement Directorate summons Sanjay Raut's wife Varsha Raut in the Patra Chawl land case. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X