YES BANK ಸ್ಥಾಪಕನ ಮನೆ ತಪಾಸಣೆ ನಡೆಸಿದ ಇಡಿ ಅಧಿಕಾರಿಗಳು

ಮುಂಬೈ, ಮಾರ್ಚ್ 6: ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್‌ನ ಯೆಸ್ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್ ಅವರ ಮುಂಬೈ ನಿವಾಸವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಸಂಜೆ ತಪಾಸಣೆ ನಡೆಸಿದ್ದಾರೆ.

ನವಿ ಮುಂಬೈನ ರಾಣಾ ಅವರ ಐಷಾರಾಮಿ ಮನೆಯಲ್ಲಿ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿ, ಯೆಸ್ ಬ್ಯಾಂಕ್ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ತಡರಾತ್ರಿವರೆಗೂ ತಪಾಸಣೆ ಮುಂದುವರೆದಿತ್ತು.ರಾಣಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸೂಚನೆ ಇದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದೇಶದ ಬ್ಯಾಂಕಿಂಗ್ ವಲಯದಲ್ಲಿ ಯೆಸ್ ಬ್ಯಾಂಕ್ ಬಿರುಗಾಳಿ ಎಬ್ಬಿಸಿದೆ. ಯೆಸ್ ಬ್ಯಾಂಕ್ ದಿವಾಳಿಯಿಂದ ಬ್ಯಾಂಕ್ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ED Searched On Yes Bank Founder Rana Kapoor House

ಬ್ಯಾಂಕ್‌ ಠೇವಣಿದಾರರು ತಮ್ಮ ಹಣ ವಾಪಸ್ ಸಿಗುತ್ತೋ ಇಲ್ಲವೋ ಎಂದು ಚಿಂತಾಕ್ರಾಂತರಾಗಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಗ್ರಾಹಕರಿಗೆ ಅಭಯ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯೆಸ್ ಬ್ಯಾಂಕ್ ದಿವಾಳಿ ಕುರಿತು ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದೆನಾಗುತ್ತೋ ಎಂದು ಯೆಸ್ ಬ್ಯಾಂಕ್ ಗ್ರಾಹಕರು ಕಾಲ ಕಳೆಯುತ್ತಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ ಮೇಲೆ ಸಾಕಷ್ಟು ನಿರ್ಭಂಧಗಳನ್ನು ಹೇರಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಎಲ್ಲಾ ಖಾತೆಗಳನ್ನೂ ಒಳಗೊಂಡಂತೆ ಬ್ಯಾಂಕ್ ಗ್ರಾಹಕರು ಮಾರ್ಚ್‌ 31 ರ ವರಗೆ ಕೇವಲ 50 ಸಾವಿರ ರುಪಾಯಿಗಳನ್ನು ಮಾತ್ರ ಹಿಂತೆಗೆಯಬೇಕು ಎಂದು ಆರ್‌ಬಿಐ ಹೇಳಿದೆ.

ಸದ್ಯ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಶ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್‌ಬಿಐ ವಜಾಗೊಳಿಸಿದೆ. ಎಸ್‌ಬಿಐನ ಮಾಜಿ ಸಿಎಫ್ ಓ ಪ್ರಶಾಂತ್ ಕುಮಾರ್ ಅವರನ್ನು ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಯಶ್ ಬ್ಯಾಂಕ್‌ನ್ನು ಎಸ್‌ಬಿಐನೊಂದಿಗೆ ವಿಲೀನ ಮಾಡಲಾಗುತ್ತಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+