ಮನಿಲಾಂಡ್ರಿಂಗ್ ಕೇಸ್ : ಜಾಕೀರ್ ನಾಯ್ಕ್ ವಿರುದ್ಧ ತನಿಖೆ ತೀವ್ರ
ಮುಂಬೈ,ಮೇ 02: ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯ್ಕ್ ಅವರ ವಿರುದ್ಧ ತೀವ್ರ ತನಿಖೆಗೆ ಜಾರಿ ನಿರ್ದೇಶನಾಲಯವು ಮುಂದಾಗಿದೆ.
ಜಾರಿ ನಿರ್ದೇಶನಾಲಯದ ದೂರಿನಲ್ಲಿ ಈ ಪ್ರಕರಣದ ಒಟ್ಟು ಅವ್ಯವಹಾರದ ಮೊತ್ತ 193.06 ಕೋಟಿ ರು ಎಂದು ಉಲ್ಲೇಖಿಸಲಾಗಿದೆ.2016ರ ಡಿಸೆಂಬರ್ 22ರಲ್ಲೇ ಜಾಕೀರ್ ನಾಯ್ಕ್ ವಿರುದ್ಧ ಮನಿಲಾಂಡ್ರಿಂಗ್ ಕೇಸ್ ದಾಖಲಾಗಿದೆ. ಜಾಕೀರ್ ಅವರ ಸಂಬಂಧಿಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಗೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮೂಲಕ 50 ಕೋಟಿ ರು ಗೂ ಅಧಿಕ ಮೊತ್ತ ಜಮೆಯಾಗಿ ಎಂದು ವಿಶೇಷ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳ ತನಿಖೆಯಿಂದ ತಿಳಿದು ಬಂದಿದೆ.
ಹರ್ಮನಿ ಮಾಧ್ಯಮ ಹೆಸರಿನಲ್ಲಿ ಮುಂಬೈನಲ್ಲಿ ವಿಡಿಯೋ, ಟೆಲಿವಿಷನ್ ಸಾಫ್ಟ್ ವೇರ್ ಪ್ರೊಡೆಕ್ಷನ್ ಹೌಸ್ ಕೂಡಾ ಆರಂಭಿಸಿದ್ದ. 2005ರಿಂದ 2008ರ ಅವಧಿಯಲ್ಲಿ ಅವ್ಯವಹಾರಗಳು ದಾಖಲಗಿವೆ. ರಿಯಲ್ ಎಸ್ಟೇಟ್ ಸಂಸ್ಥೆಯ ಪ್ರವರ್ತಕರಾಗಿ ಜಾಕೀರ್ ಪತ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2009ರಿಂದ 2015ರ ನಡುವಿನ ಆದಾಯ ತೆರಿಗೆ ವಿವರಗಳನ್ನು ಈ ಸಂಸ್ಥೆ ನೀಡಿಲ್ಲ. 2006ರಲ್ಲಿ ಈ ಸಂಸ್ಥೆ ನಿರ್ದೇಶಕಿಯಾಗಿದ್ದ ಜಾಕೀರ್ ಪತ್ನಿ 2013ರಲ್ಲಿ ರಾಜೀನಾಮೆ ನೀಡಿದ್ದರು.

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಜಾಕೀರ್ ನಾಯ್ಕ್ ಅವರ ಪೀಸ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಮತ್ತು ಅನಾಮಧೇಯ ಮೂಲಗಳಿಂದ ದೇಣಿಗೆ ಸಂಗ್ರಹಿಸಿರುವ ಬಗ್ಗೆ ಕೂಡಾ ತನಿಖೆ ನಡೆಸಲಾಗಿದೆ.
ವ್ಸರ್ಕಾರೇತರ ಸಂಸ್ಥೆಯಾದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ನಿಂದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ ಸಿಆರ್ ಎ) 2010ರ ಉಲ್ಲಂಘನೆಯಾಗಿದೆ. ಕಾನೂನು ಉಲ್ಲಂಘನೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು, ಮುಂತಾದ ಆರೋಪಗಳಿವೆ. ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಅವರ ವಿರುದ್ಧ ಮುಂಬೈನ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.












Click it and Unblock the Notifications