• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಕೇಸ್: ನಟಿ ಭಾರತಿ ಸಿಂಗ್ ಹಾಗೂ ಆಕೆ ಪತಿಗೆ ಜಾಮೀನು

|

ಮುಂಬೈ, ನ. 23: ಹಾಸ್ಯನಟಿ ಭಾರತಿ ಸಿಂಗ್(36) ಹಾಗೂ ಆಕೆ ಪತಿ ಹರ್ಷ್ ಲಿಂಬಾಚಿಯಾ(33) ಅವರಿಗೆ ಮುಂಬೈ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರಿಗೂ ತಲಾ 15,000 ರು ಬಾಂಡ್, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನೀಡಿದೆ ಎಂದು ಭಾರತಿ ಪರ ವಕೀಲ ಏಜಾಜ್ ಖಾನ್ ಹೇಳಿದರು,

ಡ್ರಗ್ಸ್ ಕೇಸ್: ಭಾರತಿ ಸಿಂಗ್ ನಂತರ ಆಕೆ ಪತಿ ಹರ್ಷ್ ಬಂಧನ

ಕಾಮಿಡಿಯನ್ ಭಾರತಿ ಸಿಂಗ್ ಅವರ ಮುಂಬೈ ನಿವಾಸದ ಮೇಲೆ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಶನಿವಾರದಂದು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣ(ಸುಮಾರು 86.5 ಗ್ರಾಂ) ದಲ್ಲಿ ಮಾದಕ ವಸ್ತು ಹೊಂದಿರುವುದು ಪತ್ತೆಯಾಗಿತ್ತು.

ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರು ಗಾಂಜಾ ಸೇವನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ 1986ರ ನಿಯಮಗಳ ಅಡಿ ಭಾರತಿ ಸಿಂಗ್ ಅವರನ್ನು ಬಂಧಿಸಲಾಗಿದೆ, ವಿಚಾರಣೆಗೊಳಪಡಿಸಲಾಗಿತ್ತು. ಅಗತ್ಯ ಮಾಹಿತಿ ಸಿಕ್ಕಿದ್ದರಿಂದ ಎನ್ ಸಿಬಿ ಅಧಿಕಾರಿಗಳು ಇವರಿಬ್ಬರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.

ಸುಶಾಂತ್ ಸಿಂಗ್ ಸಾವಿಗೂ ಸಿನಿಮಾ ಲೋಕದ ಡ್ರಗ್ಸ್ ಜಾಲಕ್ಕೂ ಇರುವ ನಂಟು ಕಂಡು ಹಿಡಿಯಲು ಯತ್ನಿಸುತ್ತಿರುವ ಪೊಲೀಸರು ಸತತ ದಾಳಿ, ಬಂಧನ, ವಿಚಾರಣೆ ನಡೆಸುತ್ತಿದ್ದಾರೆ.

   Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

   ಡ್ರಗ್ಸ್ ಕೇಸಿನಲ್ಲಿ ನಟ, ನಟಿಯರು ಹಾಗೂ ಡ್ರಗ್ಸ್ ಪೆಡ್ಲರ್ಸ್ ನಡುವಿನ ವಾಟ್ಸಾಪ್ ಚಾಟ್ ಮುಖ್ಯವಾಗಿದೆ. ಸುಶಾಂತ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಗೆ ಜೈಲು ದರ್ಶನವಾಗಲು ಇದೇ ಚಾಟ್ ಹಿಸ್ಟರಿ ಕಾರಣವಾಗಿದ್ದನ್ನು ಮರೆಯುವಂತಿಲ್ಲ. ರಿಯಾ ಸದ್ಯ ಜಾಮೀನು ಪಡೆದುಕೊಂಡಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಅರ್ಜುನ್ ರಾಂಪಾಲ್, ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್,ರಕುಲ್ ಪ್ರೀತ್ ಸಿಂಗ್, ಶ್ರದ್ಧಾಕಪೂರ್ ಸೇರಿದಂತೆ ಹಲವು ಸ್ಟಾರ್ ನಟ ನಟಿಯರನ್ನು ವಿಚಾರಣೆಗೊಳಪಡಿಸಲಾಗಿದೆ.

   English summary
   Comedian Bharti Singh, husband Harsh Limbachiya granted bail by Mumbai court in bollywood drugs case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X