ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯನ್ ಖಾನ್ ಪ್ರಕರಣ: ಎನ್‌ಸಿಬಿ ಮೇಲಿನ ಸುಲಿಗೆ ಆರೋಪಗಳಿಗೆ ಸಿಗದ ಪುರಾವೆ

|
Google Oneindia Kannada News

ಮುಂಬೈ ಡಿಸೆಂಬರ್ 22: ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲಿಗೆ ಆರೋಪದ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ತನಿಖೆಯನ್ನು ಸ್ಥಗಿತಗೊಳಿಸಿರುವುದಾಗಿ ಮುಂಬೈ ಪೊಲೀಸರು ಬುಧವಾರ ಹೇಳಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರು. ಸದ್ಯ ಇವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಈ ಪ್ರಕರಣದ ಮೇಲ್ವಿಚಾರಣೆ ನಡೆಸಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಹಣ ವಸೂಲಿ ಆರೋಪ ಕೇಳಿಬಂದಿತ್ತು.

ಇದರ ಬಗ್ಗೆ ತನಿಖೆ ನಡೆಸಲು ಮುಂಬೈ ಪೊಲೀಸರು ತನಿಖೆಗಾಗಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿದ್ದರು ಮತ್ತು ಸುಮಾರು 20 ಜನರನ್ನು ವಿಚಾರಣೆಗೊಳಪಡಿಸಿದ್ದರು. ಆದರೆ ಯಾವುದೇ ಪುರಾವೆಗಳು ಇನ್ನೂ ಪತ್ತೆಯಾಗದ ಕಾರಣ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ತನಿಖೆಯನ್ನು ಸ್ಥಗಿತಗೊಳಿಸಿದ ಎಂದು ಮುಂಬೈ ಪೊಲೀಸರ ತಿಳಿಸಿದ್ದಾರೆ.

25 ಕೋಟಿ ರೂಪಾಯಿ ಬೇಡಿಕೆಯ ಕುರಿತು ದೂರವಾಣಿ ಸಂಭಾಷಣೆಯನ್ನು ಕೇಳಿರುವುದಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಆರೋಪಿಸಿದ ನಂತರ ಮುಂಬೈ ಪೊಲೀಸರು ಸುಲಿಗೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದರು. ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು ಎನ್‌ಸಿಬಿಯ ಅಧಿಕಾರಿ ಮತ್ತು ಕೆಪಿ ಗೋಸಾವಿ ಸೇರಿದಂತೆ ಇತರ ವ್ಯಕ್ತಿಗಳು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂದು ಸೈಲ್ ಅಕ್ಟೋಬರ್‌ನಲ್ಲಿ ಹೇಳಿಕೊಂಡಿದ್ದರು.

Mumbai drug Case: No Evidence of Extortion Found, Mumbai Police Halt Probe

ಕಿರಣ್ ಗೋಸಾವಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸ್ವತಂತ್ರ ಸಾಕ್ಷಿದಾರ ಎಂದು ಕರೆದಿದೆ. ಈತ ಆರ್ಯನ್ ಖಾನ್ ನೊಂದಿಗೆ ಘಟನೆ ವೇಳೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಆತನಿಂದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಲಂಚ ಪಡೆಲು ಡೀಲ್ ಮಾಡಿಕೊಂಡಿದ್ದರು ಎಂದು ಈತನ ವೈಯಕ್ತಿಕ ಅಂಗರಕ್ಷಕ ಪ್ರಭಾಕರ್ ಸೈಲ್ ಹೇಳಿಕೊಂಡಿದ್ದನು.

ಅಕ್ಟೋಬರ್ 2 ರಂದು ಮುಂಬೈ ಕ್ರೂಸ್ ಮೇಲೆ ಎನ್‌ಸಿಬಿ ದಾಳಿ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಅಂಗರಕ್ಷಕನಾಗಿ ಕೆಲಸ ಮಾಡುವ ಪ್ರಭಾಕರ್‌ ಎಂಬಾತ ನಿನ್ನೆಯಷ್ಟೇ ಸ್ಫೋಟಕ ಹೇಳಿಯನ್ನ ನೀಡಿದ್ದನು. ಪ್ರಭಾಕರ್ ಹೇಳುವಂತೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಕಿರಣ್ ಗೋಸಾವಿಯೊಂದಿಗೆ ಪ್ರಕರಣ ಕೈಬಿಡಲು 25 ಕೋಟಿ ರೂ. ಡೀಲ್ ನಡೆದಿದೆ. ಕಿರಣ್ ಗೋಸಾವಿ ದಾಳಿಯಾದಾಗಿನಿಂದಲೂ ಸಮೀರ್ ವಾಂಖೆಡೆಯೊಂದಿಗಿದ್ದರು. ಕಿರಣ್ ಸಮೀರ್ ಪರವಾಗಿ 25 ಕೋಟಿ ರೂ. ವ್ಯವಹಾರ ಮಾಡಿಕೊಳ್ಳುತ್ತಿದ್ದರು. ಈ ಒಪ್ಪಂದ ಕೊನೆಗೆ 18 ಕೋಟಿ ರೂ.ಗೆ ಬಂದು ತಲುಪಿತು. ಈ ವೇಳೆ ಕಿರಣ್ ಈ ಹಣದಲ್ಲಿ 8 ಕೋಟಿ ರೂ. ಸಮೀರ್ ವಾಂಖೆಡೆಗೆ ಸೇರುತ್ತದೆ. ಉಳಿದಂತೆ ಇತರರಿಗೆ ಸೇರುತ್ತದೆ ಎಂದು ಹೇಳಿದ್ದರು ಎಂದು ಪ್ರಭಾಕರ್ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರಕರಣ ಬೇರೆ ಹಾದಿ ಹಿಡಿದಿದೆ. ಈ ವೇಳೆ ಕಿರಣ್ ಗೋಸಾವಿ ತಲೆಮರಿಸಿಕೊಂಡಿದ್ದರು. ಪ್ರಭಾಕರ್ ಆರೋಪದಿಂದಾಗಿ ಪ್ರಕರಣ ಮತ್ತಷ್ಟು ಚುರುಕುಗೊಂಡಿತ್ತು.

Mumbai drug Case: No Evidence of Extortion Found, Mumbai Police Halt Probe

ಇದರ ತನಿಖೆಗಾಗಿ ಮುಂಬೈ ಪೊಲೀಸರು ತನಿಖೆಗಾಗಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿದ್ದರು ಮತ್ತು ಸುಮಾರು 20 ಜನರನ್ನು ವಿಚಾರಣೆಗೊಳಪಡಿಸಿದ್ದರು. ಯಾವುದೇ ಪುರಾವೆಗಳು ಇನ್ನೂ ಪತ್ತೆಯಾಗದ ಕಾರಣ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಮುಂಬೈ ಪೊಲೀಸರು ತನಿಖೆಯನ್ನು ಸ್ಥಗಿತಗೊಳಿಸಿದ್ದಾರೆ.

ದಾಳಿ ಬಳಿಕ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಹಲವಾರು ಆರೋಪಗಳು ಕೇಳಿಬಂದವು. ಪ್ರಕರಣದಲ್ಲಿ ಸುಲಿಗೆ ಆರೋಪದ ವಿರುದ್ಧ ಎನ್‌ಸಿಬಿ ಮತ್ತು ಅದರ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಎನ್‌ಸಿಬಿ ಮತ್ತು ವಾಂಖೆಡೆ ತಮ್ಮ ಅಫಿಡವಿಟ್‌ಗಳಲ್ಲಿ ಇದು ಅಡೆತಡೆಗಳನ್ನು ಸೃಷ್ಟಿಸುವ ಮತ್ತು ಪ್ರಕರಣದ ತನಿಖೆಯನ್ನು ಕೆಡಿಸುವ ಪ್ರಯತ್ನ ಎಂದು ಹೇಳಿದ್ದಾರೆ.

English summary
The Mumbai Police on Wednesday said they have halted the probe into the extortion charges made in connection with the drugs-on-cruise case for not finding any evidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X