• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನರೇಂದ್ರನ ಅನುಸರಿಸಿದ ದೇವೇಂದ್ರನಿಗೆ ಆಪತ್ತು!

By Mahesh
|

ಮುಂಬೈ,ನ.3: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮಾಜಿ ಸಿಎಂ ಆಗಿದ್ದ ಕಾಲದಲ್ಲಿ ತಮ್ಮ ಬಳಿ ಪ್ರಮುಖ ಖಾತೆಗಳನ್ನು ಉಳಿಸಿಕೊಂಡಂತೆ ಮಹಾರಾಷ್ಟ್ರದ ದೇವೇಂದ್ರ ಅವರು ಕೂಡಾ ರಾಜ್ಯಭಾರ ಆರಂಭಿಸಿದ್ದಾರೆ. ಅದರೆ, ದೇವೇಂದ್ರ ಅವರಿಗೆ ಶಿವಸೇನಾ ಕಾಟ ಶುರುವಾಗುವ ಮೊದಲೇ ಸ್ವಪಕ್ಷದಿಂದಲೇ ಭಿನ್ನಮತದ ಭೀತಿ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಗೊಂಡು ದೇವೇಂದ್ರ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಭಾನುವಾರದಂದು ಸುಮಾರು 10 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದರು. ಅದರೆ, ಪ್ರಮುಖ ಖಾತೆಗಳಾದ ಗೃಹ ಇಲಾಖೆ, ನಗರಾಭಿವೃದ್ಧಿ, ಆರೋಗ್ಯ ಸೇರಿದಂತೆ ಇನ್ನು ಹಲವು ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಇದರಿಂದ ಶಿವಸೇನೆ ಖುಷಿಯಾಗಿದೆ. ಗೃಹ, ನಗರಾಭಿವೃದ್ಧಿ ತಮ್ಮ ಶಾಸಕರಿಗೆ ಸಿಗಲಿದೆ ಎಂದು ವಡಾ ಪಾವ್ ತಿನ್ನುತ್ತಾ ಉದ್ಧವ್ ಠಾಕ್ರೆ ಸಂತಸವಾಗಿದ್ದಾರಂತೆ.

ಖಾಡ್ಸೆಯಿಂದ ವಿರೋಧ: ಸಿಎಂ ರೇಸ್ ನಲ್ಲಿದ್ದ ಖಾಡ್ಸೆ ಅವರಿಗೆ ಕಂದಾಯ ಖಾತೆ ಸಿಕ್ಕಿದ್ದರೂ ಖುಷಿಯಾಗಿಲ್ಲ. ಗೋಪಿನಾಥ್ ಮುಂಡೆ ಅವರ ಮಗಳು ಪಂಕಜಾ ಅವರಿಗೆ ಸಿಕ್ಕಿರುವ ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ವಿನೋದ್ ತಾಡ್ವೆ ಕೂಡಾ ಕ್ರೀಡೆ, ಸಂಸ್ಕೃತಿ ಖಾತೆ ಯಾರಿಗೆ ಬೇಕು ಎಂದು ಗೊಣಗಾಡಿದ್ದಾರಂತೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಏನಾದರೂ ರೇಸ್ ಇಟ್ಟರೆ ಎಲ್ಲರಿಗಿಂತ ಮುಂದೆ ತಾವ್ಡೆ ಅವರೇ ಇರುತ್ತಾರೆ. ಅದರೆ, ಉಪ ಮುಖ್ಯಮಂತ್ರಿ ಸ್ಥಾನವನ್ನು ನಮಗೆ ಕೊಟ್ಟು ಬಿಡಿ ಎಂದು ಶಿವಸೇನೆ ದುಂಬಾಲು ಬಿದ್ದಿದೆ.

ಗೃಹ ಖಾತೆ ಜೊತೆಗೆ ಲೋಕೋಪಯೋಗಿ, ಇಂಧನ ವಸತಿ ಸೇರಿದಂತೆ ಪ್ರಮುಖ ಖಾತೆಗಳನ್ನು ಶಿವಸೇನೆ ಕೇಳಿದೆ. ಒಟ್ಟು ನಾಲ್ಕು ಕ್ಯಾಬಿನೆಟ್ ಹಾಗೂ 6 ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದೆ.

* ಏಕಾಂತ್ ಖಾಡ್ಸೆ : ಕಂದಾಯ, ಅಲ್ಪಸಂಖ್ಯಾತ ಅಭಿವೃದ್ಧಿ, ವಕ್ಫ್, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ.

* ಪಂಕಜಾ ಮುಂಡೆ : ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ

* ಸುದೀರ್ ಮುಂಗತಿವಾರ್ : ಹಣಕಾಸು ಮತ್ತು ಯೋಜನೆ ಹಾಗೂ ಅರಣ್ಯ

* ವಿನೋದ್ ತಾಡ್ವೆ : ಪ್ರಾಥಮಿಕ ಶಿಕ್ಷಣ, ಕ್ರೀಡೆ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಮರಾಠಿ ಭಾಷೆ ಮತ್ತು ಸಂಸ್ಕøತಿ ಇಲಾಖೆ

* ಪ್ರಕಾಶ್ ಮೆಹ್ತಾ : ಕೈಗಾರಿಕೆ, ಗಣಿ ಹಾಗೂ ಸಂಸದೀಯ ವ್ಯವಹಾರ

* ಚಂದ್ರಕಾಂತ್ ಪಟೇಲ್ : ಸಹಕಾರ, ಜವಳಿ, ಲೋಕೋಪಯೋಗಿ

* ವಿಷ್ಣು ಸಾವ್ರಾ : ಬುಡಕಟ್ಟು ಸಮುದಾಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ

* ದಿಲೀಪ್ ಕಾಂಬ್ಳೆ : ಬುಡಕಟ್ಟು ಸಮುದಾಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ

* ವಿದ್ಯಾ ಠಾಕೂರ್ : ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Maharashtra Chief Minister Devendra Fadnavis on Sunday allocated portfolios for his ministerial council but decided to keep home and urban development, two of the most sought-after departments, with himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more