ಮಹಾರಾಷ್ಟ್ರಆಸ್ಪತ್ರೆಯಲ್ಲಿ 4 ಶಿಶುಗಳ ಸಾವು: ನರ್ಸ್ ಬಂಧನ
ಮುಂಬೈ, ಮೇ 31 : ನಾಲ್ಕು ಶಿಶುಗಳ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಮರಾವತಿಯ ಪಂಜಾಬ್ ರಾವ್ ದೇಶಮುಖ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ನರ್ಸ್ ನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ನರ್ಸ್ ವಿದ್ಯಾ ಥೋರಟ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೇ ಆರೋಪದಲ್ಲಿ ಅಮರಾವತಿ ಆಸ್ಪತ್ರೆಯ ವೈಧ್ಯ ಭೂಷಣ್ ಕಟ್ಟಾ ಎಂಬವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ, ಅವಧಿಗೆ ಮೊದಲೇ ಜನಿಸಿದ್ದ ನಾಲ್ಕು ಶಿಶುಗಳನ್ನು ಅಮರಾವತಿಯ ಪಂಜಾಬ್ ರಾವ್ ದೇಶಮುಖ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಎನ್ ಐಸಿಯು ಘಟಕದಲ್ಲಿ incubatorನಲ್ಲಿ ಇರಿಸಲಾಗಿತ್ತು.
ಈ ನಾಲ್ಕೂ ಶಿಶುಗಳು ಸೋಮವಾರ ನಸುಕಿನ ವೇಳೆ ಮೃತಪಟ್ಟಿದ್ದವು. ಸ್ಥಳೀಯ ಶಾಸಕ ರವಿ ರಾಣಾ ಅವರು ಮೃತ ಶಿಶುಗಳ ಕುಟುಂಬದವರಿಗೆ ತಲಾ 25 ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications